

ಸಿದ್ದಾಪುರ: ಕನ್ನಡ ಭಾಷೆ ಬದುಕಬೇಕಾದರೆ ಮನೆಯಲ್ಲಿ ಕನ್ನಡ ಮಾತನಾಡಬೇಕು ಹಾಗಾದಾಗ ಮಾತ್ರ ಕನ್ನಡ ಉಳಿಯುತ್ತದೆ. ಎಂದು ಹಿರಿಯ ಸಾಹಿತಿ ಶಾ. ಮಂ. ಕ್ರಷ್ಣರಾಯ ಅಭಿಪ್ರಾಯ ಪಟ್ಟರು
ಅವರು ಪಟ್ಟಣದ ಶಂಕರ ಮಠದಲ್ಲಿ ನಡೆದ 6 ನೇ ಸಾಹಿತ್ಯ ಸಮ್ಮೇಳನದ ಸನ್ಮಾನ ಹಾಗೂ ಸಮಾರೋಪ ಸಮಾರಂಭ ದಲ್ಲಿ ಸಮಾರೋಪ ನುಡಿಗಳನ್ನಾಡಿದರು.
ತಾಲೂಕಿನಲ್ಲಿ ನ ಪ್ರತಿಭೆಗಳ ನ್ನು ಗುರುತಿ ಸಿ ಪ್ರೋತ್ಸಾಹಿಸುವ
ಕಾರ್ಯ ಸ್ತುತ್ಯಾರ್ಹ. ಸಾಹಿತ್ಯ ರೋಗ ಶುರುವಾಗುವುದು ಕವಿತೆಗಳಿಂದ, ಕವಿತೆ,ಕವಿಗಳನ್ನು ಕೊಟ್ಟ ಭಾಷೆ ಕನ್ನಡ ಸಾಯೋ ಭಾಷೆಗಳ ಪಟ್ಟಿಯಲ್ಲಿ ಇದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಪ. ಪಂ ಸದಸ್ಯ ಕೆ ಜಿ ನಾಯ್ಕ ಹಣಜಿಬೈಲ್, ವಿ ಎನ್ ನಾಯ್ಕ ಬೇಡ್ಕಣಿ, ವಸಂತ ನಾಯ್ಕ ಮನ್ಮನೆ, ವೀರಭದ್ರ ನಾಯ್ಕ ಮಳವಳ್ಳಿ ಮಾತನಾಡಿದರು.
ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಾರದಾ ರಾಯ್ಕರ, ಹಾಳದಕಟ್ಟಾ, ಎಂ ವಿಠ್ಠಲ ಅವರಗುಪ್ಪ, ಮೀರಾ ಹಬ್ಬು, ಧರ್ಶನ ಹರಿಕಂತ್ರ, ನಾಗರಾಜ ನಾಯ್ಕ, ಮಹಾಲಿಂಗಯ್ಯ ಕುಂದಗೋಳಮಠ, ಯೋಗೇಶ ಶ್ಯಾನಭಾಗ, ಧನಂಜಯ ನಾಯ್ಕ ಪುರದಮಠ, ಪ್ರವೀಣಾ ಗ ಹೆಗಡೆ ಗುಂಜಗೋಡ, ಆನಂದ ನಾಯ್ಕ ಕೊಂಡ್ಲಿ, ಮಂಜುನಾಥ ನಾಯ್ಕ ಹಾಳದಕಟ್ಟಾ, ಎಮ್ ಎನ್ ಹೆಗಡೆ ಹಣಜಿಬೈಲ್, ಸುರೇಂದ್ರ ದಪೇದಾರ ಹೊಸೂರ, ಕುಮಾರ ನಾಯ್ಕ ರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಸಪಾ ಅಧ್ಯಕ್ಷ ಬಿ,ಎನ್ ವಾಸನೆ ಅಧ್ಯಕ್ಷತೆ ವಹಿಸಿದ್ದ ರು.
ಸಮ್ಮೇಳನಾಧ್ಯಕ್ಷ ಅರ್ ಕೆ ಹೊನ್ನೆಗುಂಡಿ, ಕೆ ಜಿ ನಾಗರಾಜ, ಸಿ ಎಸ್ ಗೌಡರ, ಪಿ ಪಿ ಹೊಸೂರ, ಗೋಪಾಲ ನಾಯ್ಕ ಭಾಶಿ ಉಪಸ್ಥಿತರಿದ್ದರು.
ಅಣ್ಣಪ್ಪ ಶಿರಳಗಿ ಸ್ವಾಗತಿಸಿದರು, ಉಷಾ ಪ್ರಶಾಂತ ನಾಯ್ಕ ನಿರೂಪಿಸಿದರು. ಗೋಪಾಲ ನಾಯ್ಕ ವಂದಿಸಿದರು.


