

ರೈತರ ಸಾಲ ಮನ್ನಾ ಮತ್ತು ಕರ್ನಾಟಕ ಸರ್ಕಾರದ ಷರತ್ತು ತೆಗೆಯುವುದು ಸೇರಿದಂತೆ ಶಿರಸಿ-ಸಿದ್ಧಾಪುರ ಕ್ಷೇತ್ರದ ಒಟ್ಟೂ ೨೦ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಲು ಕಾಂಗ್ರೆಸ್ ಪಾದಯಾತ್ರೆ ನಡೆಸಲು ನಿರ್ಧರಿಸಿದೆ.
ಈ ಬಗ್ಗೆ ಇಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ೨೦ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರವರಿ ೯ ರಂದು ಸಿದ್ಧಾಪುರದಿಂದ ಶಿರಸಿ ವರೆಗೆ ಪಾದಯಾತ್ರೆ ಆಯೋಜಿಸಿದ್ದು ಈ ಪಾದಯಾತ್ರೆಯಲ್ಲಿ ಪಕ್ಷದ ಮುಖಂಡರು, ಪ್ರಮುಖರು,ತಾಲೂಕಿನ ಬಹುತೇಕ ಗ್ರಾಪಂ ಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಸ್ಥಳಿಯ ಶಾಸಕರು ಮತ್ತು ಸಂಸದರು ಕ್ಷೇತ್ರ, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಬೆನ್ನು ಮಾಡಿದ್ದಾರೆ ಇಂಥ ನಿರುಪಯೋಗಿ ಜನಪ್ರತಿನಿಧಿಗಳನ್ನು ಸೋಲಿಸಿ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸುವ ಅಂಗವಾಗಿ ನಡೆಯುತ್ತಿರುವ ಕಾಂಗ್ರೆಸ್ ಹೋರಾಟದ ಭಾಗವಾಗಿ ಈ ಪಾದಯಾತ್ರೆ ನಡೆಯುತ್ತಿದೆ ಎಂದರು.

