

ಸಿದ್ಧಾಪುರ, ಮಧ್ಯಾಹ್ನ ದ ಉಪಹಾರ ಯೋಜನೆ ಯ ಅಡುಗೆ ಸಿಬ್ಬಂದಿ ಗಳಿಗೆ ತರಬೇತಿ ಕಾರ್ಯಗಾರ ಇಲ್ಲಿಯ ಪ್ರಶಾಂತಿ ಸಭಾ ಭವನದಲ್ಲಿ ನಡೆಯಿತು. ಕಾರ್ಯಗಾರ ವನ್ನು ಬಿಸಿಯೂಟ ದ ಜಿಲ್ಲಾ ಶಿಕ್ಷಣಾಧಿಕಾರಿ ಜಿ. ಆಯ್. ನಾಯ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಲೆಯ ಅಡುಗೆ ತಯಾರಕರಿಗೆ ಜವಾಬ್ದಾರಿ ಇದೆ. ಮಕ್ಕಳು, ಅಡುಗೆ ಸಿಬ್ಬಂದಿ ಗಳ ವೈಯಕ್ತಿಕ ಜಾಗೃತಿ ಜೊತೆಗೆ ಸಾಮಾಜಿಕ ಜವಾಬ್ದಾರಿ ಕೂಡಾ ಅವರ ಮೇಲಿದೆ. ಈ ಹೊಣೆಗಾರಿಕೆ ಮಹತ್ವದ್ದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಅನಾಹುತ, ಅವಗಢ ನಡೆಯದಂತೆ ಶುಚಿ -ರುಚಿ ಅಡುಗೆ ಬಡಿಸುತ್ತಿರುವ ಅಡುಗೆ ನೌಕರರನ್ನು ಶ್ಲಾಗಿ ಸಿದರು. ಅಕ್ಷರ ದಾಸೋಹದ ಸ. ನಿ. ಭೂಮೇಶ, ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷ ಆರ್. ಆರ್. ನಾಯ್ಕ, ಕೆ. ಆರ್. ವಿನಾಯಕ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಂ. ಆರ್. ಹೆಗಡೆ ಕಾರ್ಯಕ್ರಮ ನಿರೂಪಿ ಸಿದರು.

