

ಮಾವಿನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಹಲಗೇರಿ ಗ್ರಾ. ಪಂ. ಸದಸ್ಯ ಜಯಂತ ಈರಪ್ಪ ನಾಯ್ಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಊರಿನ ಹಿರಿಯ ನಾಗರಿಕರಾದ ಗಣಪಮ್ಮ ಗೌರ್ಯ ನಾಯ್ಕ ಮಸ್ತಾನೆ (ಎಡಳ್ಳಿ ) ಹಾಗೂ ನಿವೃತ್ತ ಸೈನಿಕರಾದ ಶಾಲೆಯ ಪೂರ್ವ ವಿದ್ಯಾರ್ಥಿ ನಾಗಪ್ಪ ನಾರಾಯಣ ನಾಯ್ಕ ಮಸ್ತಾನೆ ಇವರನ್ನು ಊರ ನಾಗರಿಕರ ಪರವಾಗಿ ಎಸ್.ಡಿ.ಎಮ್.ಸಿ.ಯವರು ಶಾಲು ಹೊದೆಸಿ, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಪ್ರಸ್ತುತ ಮುಖ್ಯಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ ಎನ್. ಪ್ರಭುರನ್ನು ಈ ಶಾಲೆಯಲ್ಲಿ ಸತತ 25 ನೇ ವರ್ಷದ ಸೇವೆ ಸಲ್ಲಿಸುತ್ತಿರುವ ಬಗ್ಗೆ ಈ ವರೆಗೆ ಅವರ ಬಳಿ ಶಿಕ್ಷಣವನ್ನು ಪಡೆದ ಎಲ್ಲ ವಿದ್ಯಾರ್ಥಿಗಳು ಗೌರವಪೂರ್ವಕವಾಗಿ ಸನ್ಮಾನಿಸಿದರು. ಶಾಲು ಹೊದೆಸಿ, ಪೇಟಾ ತೊಡಿಸಿ, ನೆನಪಿನ ಕಾಣಿಕೆ, ಸನ್ಮಾನ ಪತ್ರ, ಫಲ ತಾಂಬೂಲ ನೀಡಿ ತಮಗೆ ಉತ್ತಮ ಶಿಕ್ಷಣ ನೀಡಿ, ಶಿಸ್ತನ್ನು ಕಲಿಸಿದ ಗುರುವಿನ ಬಗ್ಗೆ ಇರುವ ಗೌರವ ಮತ್ತು ಅಭಿಮಾನದ ದ್ಯೋತಕವಾಗಿ ಚಿನ್ನದುಂಗುರವನ್ನು ತೊಡಿಸಿ ಸಂಭ್ರಮಿಸಿದರು. ಹಾಗೂ ಎಲ್ಲ ವಿದ್ಯಾರ್ಥಿಗಳ ಭಾವಚಿತ್ರಗಳನ್ನು ಒಳಗೊಂಡ ತಮ್ಮ ಗುರುವಿನ ಭಾವಚಿತ್ರವನ್ನು ಸ್ಮರಣಿಕೆಯಾಗಿ ನೀಡಿದರು.
ಕರ್ನಾಟಕ ಪಬ್ಲಿಕ್ ಶಾಲೆ ಹಲಗೇರಿ ಪ್ರಾಚಾರ್ಯ ದಿನೇಶ ಕೆ. ಶಾಲಾ ಮಕ್ಕಳ ಹಸ್ತಪತ್ರಿಕೆ "ಮಕರಂದ" ವನ್ನು ಬಿಡುಗಡೆಗೊಳಿಸಿದರು. ತಾಲೂಕಾ ಪ್ರಾಧಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಹಲಗೇರಿ ಕ್ಲಸ್ಟರ್ ನ ಸಿ.ಆರ್.ಪಿ. ಭಾಸ್ಕರ ಮಡಿವಾಳರವರು ಬಹುಮಾನ ವಿತರಣೆಯನ್ನು ನೆರವೇರಿಸಿದರು.
ಊರಿನ ಹಿರಿಯರಾಗಿರುವ ಜಯಪ್ರಕಾಶ ಆರ್. ಹೆಗಡೆ ಹಾಗೂ ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಅಲೆಕ್ಸ್ ಇನಾಸ ಫರ್ನಾ ಂಡಿಸ್ ಉಪಸ್ಥಿತರಿದ್ದರು. ನಿವೃತ್ತ ಮುಖ್ಯಾಧ್ಯಾಪಕರಾದ ಭಾರತಿ ಪಿ. ನಾಯ್ಕ ಹಾಗೂ ತಾಯಂದಿರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಭಾಗೀರಥಿ ವಿ. ನಾಯ್ಕ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿವೃತ್ತ ಸೈನಿಕರೂ ಹಾಗೂ ಶಾಲೆಯ ಪೂರ್ವ ವಿದ್ಯಾರ್ಥಿಯೂ ಅದ ನಾಗಪ್ಪ ನಾರಾಯಣ ನಾಯ್ಕ ಮುಸ್ತಾನೆ ಹಾಗೂ ಊರಿನ ಹಿರಿಯ ನಾಗರಿಕರಾದ ಗಣಪಮ್ಮ ಗೌರ್ಯ ನಾಯ್ಕ ರವರು ಸನ್ಮಾನಿತರಾಗಿ ಉಪಸ್ಥಿತರಿದ್ದರು. ಎಸ್.ಡಿ.ಎಮ್.ಸಿ.ಯ ಅಧ್ಯಕ್ಷ ಲೋಕೇಶ ತಿಮ್ಮ ನಾಯ್ಕ ಸಭಾಧ್ಯಕ್ಷತೆ ವಹಿಸಿದ್ದರು.
ಅಂದು ಬೆಳಿಗ್ಗೆ ಊರ ನಾಗರಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅವುಗಳಲ್ಲಿ ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಗಳು ವಿಶೇಷ ಗಮನ ಸೆಳೆದವು.
ಗಣ್ಯರು ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಾಚಾರ್ಯ ದಿನೇಶ ಕೆ. ಸನ್ಮಾನಿತರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. ಸನ್ಮಾನಿತರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಪಾಲಕರು, ಎಸ್.ಡಿ.ಎಮ್.ಸಿ.ಯವರು, ಪೂರ್ವ ವಿದ್ಯಾರ್ಥಿಗಳು, ಊರ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳ ಪ್ರಾರ್ಥನೆ ಹಾಗೂ ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಮುಖ್ಯ ಶಿಕ್ಷಕ ನಾಗರಾಜ ಎನ್. ಪ್ರಭು ರವರು ಸರ್ವರಿಗೂ ಆತ್ಮೀಯವಾಗಿ ಸ್ವಾಗತವನ್ನು ಕೋರಿದರು. ಹಾಗೂ 2022 - 23 ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕ ಅಶೋಕ ಹೆಗಡೆ ಹಾಗೂ ಕು. ಮಮತಾ ನಾಯ್ಕ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸುಧಾ ಆರ್. ನಾಯಕರವರು ಎಲ್ಲರಿಗೂ ಆಭಾರವನ್ನು ಮನ್ನಿಸಿದರು. ಪೂರ್ವ ವಿದ್ಯಾಥಿ೯ಗಳು ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಿದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
