



ನಾ ಕಾವೂಂಗಾ ಕಾನೆದೂಂಗಾ ಎನ್ನುವ ಪ್ರಧಾನಿ ನರೇಂದ್ರ ಮೋದಿ ಬ್ರಷ್ಟಾಚಾರದ ವಿಚಾರದಲ್ಲಿ ಕಣ್ಣುಮುಚ್ಚಿ ಕೂತಿದ್ದಾರೆ ಎಂದು ಲೇವಡಿ ಮಾಡಿರುವ ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಬಿ.ಜೆ.ಪಿ. ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿ.ಜೆ.ಪಿ.ಯವರಿಗೆ ಜನಪರತೆ ಇಲ್ಲ. ಅವರ ರಾಜ್ಯಾದ್ಯಕ್ಷರು ಲವ್ ಜಿಹಾದ್, ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿ ಎನ್ನುತ್ತಾರೆ. ಉತ್ತಮ ಆಡಳಿತ ನೀಡಿದ್ದರೆ ಹೇಳಿಕೊಳ್ಳಲು ಏನಾದರೂ ಇರುತಿತ್ತು. ಕೋವಿಡ್ ಅವಧಿ ಸೇರಿದಂತೆ ಬಿ.ಜೆ.ಪಿ. ಆಡಳಿತದ ಅವಧಿಯಲ್ಲಿ ಯಾವ ಉತ್ತಮ ಕೆಲಸಗಳೂಆಗಿಲ್ಲ. ಗಾಂಧಿ ಕೊಂದವರಿಂದ ಲವ್ ಜಿಹಾದ್ ಬಗ್ಗೆ ಕೇಳಿಸಿಕೊಳ್ಳುತ್ತಾ ಮೂರ್ಖರಾಗುವ ಮತದಾರರು ಕರ್ನಾಟಕದಲ್ಲಿಲ್ಲ ಎಂದರು.
ಸಿದ್ಧಾಪುರ ಹಾರ್ಸಿಕಟ್ಟಾದಲ್ಲಿ ಮಾತನಾಡಿದ ಅವರು ಗ್ರಾ.ಪಂ. ಕೆಳಹಂತದ ನೌಕರರು ಡಿ ದರ್ಜೆಯ ನೌಕರರೂ ಅಲ್ಲ ಎಂದಿರುವ ಸರ್ಕಾರದ ಬಗ್ಗೆ ತರಾಟೆಗೆ ತೆಗೆದುಕೊಂಡ ಬಿ.ಕೆ. ಹರಿಪ್ರಸಾದ್ ರಾಜ್ಯ ಸರ್ಕಾರಕ್ಕೆ ಉದ್ಯೋಗ ಸೃಷ್ಟಿಸುವ ಯೋಗ್ಯತೆ ಇಲ್ಲ, ಇರುವ ನೌಕರರನ್ನೂ ನಿರುದ್ಯೋಗಿಗಳನ್ನಾಗಿಸುವ ಸರ್ಕಾರಕ್ಕೆ ಬಾಧಿತರ ಶಾಪ ತಟ್ಟದೆ ಇರದು ಎಂದರು.
ಮಾತೆತ್ತಿದರೆ ಗಾಂಧಿ ಸೋನಿಯಾ ಎನ್ನುವ ಬಿ.ಜೆ.ಪಿ. ಗಾಂಧಿ ಕುಟುಂಬದಿಂದ ತ್ಯಾಗ, ಬಲಿದಾನ, ಸಮರ್ಪಣೆಗಳೇನು ಎಂಬುದನ್ನು ಅರಿಯಬೇಕು ಎಂದರು.


