

ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ನಂತರ ಉಂಟಾದ ಗಲಭೆಗೆ ಸಂಬಂಧಿಸಿದ ೧೧೨ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿದ್ದನ್ನು ತೀವೃವಾಗಿ ವಿರೋಧಿಸಿರುವ ಸಿ.ಪಿ.ಐ.ಎಂ. ಬಿ.ಜೆ.ಪಿ. ವಿರುದ್ಧ ತೀವೃ ವಾಗ್ಧಾಳಿ ನಡೆಸಿದೆ.
ಬಿ.ಜೆ.ಪಿ.ಯ ಅಂಗಸಂಸ್ಥೆಗಳು ಮತ್ತು ಬಿ.ಜೆ.ಪಿ.ಯ ಉದ್ದೇಶ ಸ್ಫಷ್ಟವಿದೆ. ಹೋರಾಟಗಾರರನ್ನು ಪ್ರಕರಣದಲ್ಲಿ ಬಂಧಿಸಿ ಕ್ರಿಮಿನಲ್ ಪ್ರಕರಣಗಳಿದ್ದವರ ಕೇಸ್ ಗಳನ್ನು ಹಿಂಪಡೆಯುವ ಮೂಲಕ ಸಂಘ ತನ್ನ ಹಿಂಸಾತ್ಮಕ ಮತ್ತು ಅಪ್ರಜಾಸತ್ತಾತ್ಮಕ ಕಾರ್ಯಸೂಚಿಯನ್ನು ಜಾರಿ ಮಾಡುವ ಅಂಗವಾಗಿ ತಂತ್ರ ರೂಪಿಸುತ್ತದೆ. ಇಂಥ ತಂತ್ರಗಳ ಮೂಲಕ ಅಧಿಕಾರಕ್ಕೆ ಬರುವ ಬಿ.ಜೆ.ಪಿ.ಯಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವೆ? ಎಂದು ಪ್ರಶ್ನಿಸಿರುವ ಸಿ.ಪಿ.ಐ.ಎಂ. ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ಇಂಥ ಸುಲಭ ತಂತ್ರಗಳ ಮೂಲಕ ಅಧಿಕಾರ ಗಳಿಸಿ ಅರಾಜಕತೆ ಸೃಷ್ಟಿಸುವ ಬಿ.ಜೆ.ಪಿ.ಯ ಈ ಜನವಿರೋಧಿ ತಂತ್ರಗಾರಿಕೆಯನ್ನು ಸಾರ್ವಜನಿಕರು ಒಕ್ಕೋರಲಿನಿಂದ ವಿರೋಧಿಸಬೇಕಿದೆ ಎಂದಿದ್ದಾರೆ.
