

೭ ನೇ ವೇತನ ಆಯೋಗದ ಜಾರಿ,ಭತ್ಯೆ ಪರಿಷ್ಕರಣೆ ಹಾಗೂ ಎನ್.ಪಿ.ಎಸ್.ರದ್ಧತಿ ಸೇರಿದಂತೆ ಕೆಲವು ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ನಡೆಯುವ ಸರ್ಕಾರಿ ನೌಕರರ ಅಸಹಕಾರ ಹೋರಾಟಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ಸಿದ್ಧಾಪುರ ತಾಲೂಕಾ ಘಟಕ ಬೆಂಬಲ ಘೋಶಿಸಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ತುರ್ತು ಸಭೆಯ ನಿರ್ಣಯದಂತೆ ಫೆಬ್ರುವರಿ ೨೮ ರ ಒಳಗೆ ತಮ್ಮ ಬೇಡಿಕೆಗಳು ಈಡೇರದಿದ್ದರೆ ಮಾರ್ಚ್‌೧ ರಿಂದ ಅನಿರ್ದಿಷ್ಟಾವಧಿ ವರೆಗೆ ಅಸಹಕಾರ ಹೋರಾಟ ನಡೆಯಲಿದೆ. ಇದಕ್ಕೆ ಬೆಂಬಲಿಸಿ ಉತ್ತರ ಕನ್ನಡ ಜಿಲ್ಲಾ ಸಂಘದ ಕರೆಯಂತೆ ಸಿದ್ಧಾಪುರದಲ್ಲಿ ಕೂಡಾ ಗೈರು ಹಾಜರಿ ಮೂಲಕ ಸಂಘದ ಹೋರಾಟ ಬೆಂಬಲಿಸಲಿದ್ದೇವೆ ಎಂದು ತಿಳಿಸಿರುವ ರಾ.ಸ.ನೌಕರರ ಸಂಘದ ತಾಲೂಕಅಧ್ಯಕ್ಷ ರಾಜೇಶ್ ನಾಯ್ಕ ಇದಕ್ಕೆ ತಮ್ಮ ಘಟಕದ ಎಲ್ಲಾ ಸದಸ್ಯರ ಬೆಂಬಲವಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
