



ಟಿ.ಎಮ್.ಎಸ್ ಹಿಂದಿನ ಉಪಾಧ್ಯಕ್ಷಆರ್.ಡಿ ಹೆಗಡೆ ಮತ್ತಿಹಳ್ಳಿ ಅವರಿಗೆ ಸನ್ಮಾನ
ಸಿದ್ದಾಪುರ೨೨ ಸ್ಥಳೀಯ ಟಿ.ಎಂ.ಎಸ್‌ದಲ್ಲಿ ೧೦ ವರ್ಷ ನಿರ್ದೇಶಕರಾಗಿಆರು ವರ್ಷಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಆರ್.ಡಿ..ಹೆಗಡೆ ಮತ್ತೀಹಳ್ಳಿ ಅವರನ್ನು ಸಿದ್ದಾಪುರ ಟಿ.ಎಂ.ಎಸ್‌ಅಧ್ಯಕ್ಷಆರ್ ಎಂ ಹೆಗಡೆ ಬಾಳೇಸರ ಅವರ ಸ್ವನಿವಾಸ ಮತ್ತೀಹಳ್ಳಿಗೆ ತೆರಳಿ ಫೆಬ್ರವರಿ ೨೧ ರಂದು ಸನ್ಮಾನಿಸಿದರು.
ಆರ್.ಡಿ.ಹೆಗಡೆಅವರು ಸಂಘದ ಸಂಕಷ್ಟಕಾಲದಲ್ಲಿಎನ್‌ಎನ್‌ಭಟ್ಟಗುಡ್ಡೇಕೊಪ್ಪಅವರಅಧ್ಯಕ್ಷೀಯಅವಧಿಯಲ್ಲಿಉಪಾಧ್ಯಕ್ಷರಾಗಿ ಸೇವೆ ನೀಡಿ ಸಂಘದಅಭಿವೃದ್ಧಿಗೆ ಶ್ರಮಿಸಿದರು. ಅವರ ಶಿಸ್ತು ಆಡಳಿತದ ಅನುಭವದಿಂದಾಗಿ ಸಂಘಕ್ಕೆ ಹೆಚ್ಚಿನ ಪ್ರಯೋಜನವಾಗಿದೆಎಂದುಅವರನ್ನು ಅಭಿನಂದಿಸಿ ನುಡಿದರು. ಈ ಸಂದರ್ಭದಲ್ಲಿ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಹಾಗೂ ಇತರಗಣ್ಯರು ಉಪಸ್ಥಿತರಿದ್ದರು.
ಸಿದ್ದಾಪುರ: ಪಟ್ಟಣದ ಟಿಎಂಎಸ್ ಸಭಾಂಗಣದಲ್ಲಿ ಧಾರವಾಡ ಹಾಲೂ ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಅಧ್ಯಕ್ಷತೆಯಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರ ಹಾಗೂ ಮುಖ್ಯ ಕಾರ್ಯನಿರ್ವಾಹಕ ಸಭೆ ಸೋಮವಾರ ನಡೆಯಿತು.
ತಾಲೂಕಿನ ಶಿರಳಗಿ ಸಮೀಪದ ಬಾಳೆಕೊಪ್ಪ-ಒಡಗೇರಿಯಲ್ಲಿರುವ ಕೆಎಫ್‌ಡಿಸಿ ಜಾಗದಲ್ಲಿ ಹಸಿ ಮೇವನ್ನು ಬೆಳೆಸಿ ಹಾಲು ಸಂಘಗಳಿಗೆ ಧಾರವಾಡ ಹಾಲು ಒಕ್ಕೂಟ ಪೂರೈಕೆ ಮಾಡಬೇಕು. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸುವುದರ ಜೊತೆಗೆ ಹಾಲು ಉತ್ಪಾದಕರ ಸಹಕಾರಿ ಸಂಘಗಳು ನಿರಂತರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಸಂಘದ ಮುಖ್ಯಕಾರ್ಯನಿರ್ವಾಹಕರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
ಸುಮಾರು ಒಂದುಸಾವಿರ ಏಕರೆಯಷ್ಟು ಜಾಗ ಇದ್ದು ಈ ಮೊದಲು ಕೆಎಫ್‌ಡಿಸಿ ಈ ಜಾಗದಲ್ಲಿ ಹಸಿರು ಮೇವನ್ನು ಬೆಳೆದು ಜಿಲ್ಲೆಯ ಹೈನುಗಾರರಿಗೆ ಒದಗಿಸುತ್ತಿತ್ತು. ಅನಿವಾರ್ಯಕಾರಣಗಳಿಂದ ಅದು ಈಗ ಸ್ಥಗಿತಗೊಂಡಿದೆ. ಈಗ ಹಲವು ಕಾರಣಗಳಿಂದ ಹಾಗೂ ಮೇವಿನ ಕೊರತೆಯಿಂದ ಮತ್ತು ಪಶು ಆಹಾರಗಳ ಧರ ಏರಿಕೆಯಿಂದಾಗಿ ರೈತರು ಹೈನುಗಾರಿಕೆಯನ್ನೆ ಬಿಡುತ್ತಿದ್ದಾರೆ. ಹೈನುಗಾರಿಕೆ ಉಳಿಯಬೇಕಾದರೆ ಧಾರವಾಡ ಹಾಲು ಒಕ್ಕೂಟ ಈ ಕುರಿತು ಶೀಘ್ರ ತೀರ್ಮಾನತೆಗೆದುಕೊಂಡು ಕಾರ್ಯೋನ್ಮುಖರಾಗಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡದ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಈ ಕುರಿತು ಒಕ್ಕೂಟದ ಸಭೆಯಲ್ಲಿ ಹಾಗೂ ಕೆಎಫ್‌ಡಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಲವು ಕಾರಣಗಳಿಂದ ಎಲ್ಲ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಹಾಲು ಶೇಖರಣೆ ಕಡಿಮೆ ಆಗುತ್ತಿದೆ, ಹಾಲು ಶೇಖರಣೆ ಹೆಚ್ಚಿಸುವುದಕ್ಕೆ ಒಕ್ಕೂಟಗಳು ಹಾಲು ಉತ್ಪಾದಕರಿಗೆ ಹೆಚ್ಚಿನ ಸಹಕಾರ ನೀಡಬೇಕು. ಸಂಘದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಗೌರವಧನ ನೀಡಬೇಕು ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಜಿಲ್ಲಾ ಮುಖ್ಯಸ್ಥ ಎಸ್.ಎಸ್.ಬಿಜ್ಜೂರು ಮಾತನಾಡಿ ಎಲ್ಲ ಕಡೆಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗಿದೆ. ಈ ಕುರಿತು ಒಕ್ಕೂಟ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಹಾಗೂ ಹಾಲು ಉತ್ಪಾದನೆ ಹೆಚ್ಚು ಮಾಡುವುದಕ್ಕೂ ಯೋಚಿಸುತ್ತಿದೆ. ಇತ್ತೀಚನ ದಿನಗಳಲ್ಲಿ ಜಾನುವಾರುಗಳಿಗೆ ಅಂಟಿರುವ ಚರ್ಮಗಂಟು ರೋಗದಿಂದ ಹಲವು ಆಕಳುಗಳು ಮೃತಪಟ್ಟಿದೆ. ಹೈನುಗಾರರು ತಮ್ಮ ಆಕಳಿಗೆ ರಾಸು ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದರು.
ಕಡಕೇರಿ ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮಗೇಗಾರ, ಬಿಳಗಿ ಹಾಲು ಸಂಘದ ಅಧ್ಯಕ್ಷ ವಿಜಯಕುಮಾರ ಭಟ್, ಬಾಳೇಸರ ಹಾಲು ಸಂಘದ ಅಧ್ಯಕ್ಷ ವಿ.ಎಸ್.ಭಟ್ಟ, ತಾಲೂಕು ವ್ಯವಸ್ಥಾಪಕ ಡಾ, ವಿನಾಯಕ ಇತರರಿದ್ದರು.
ವಿಸ್ತರಣಾಧಿಕಾರಿಗಳಾದ ಪ್ರಕಾಶ ಕೆ ಹಾಗೂ ಚಂದನ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
