

ಕಾರವಾರ: ಪತ್ನಿ ಕೊಂದು ಬ್ಯಾರೆಲ್ ನಲ್ಲಿ ಬಚ್ಚಿಟ್ಟಿದ್ದ ಪತಿಯ ಬಂಧನ
ಪತ್ನಿಯನ್ನು ಹತ್ಯೆ ಮಾಡಿದ ಪತಿಯೊಬ್ಬ ನಂತರ ಶವವನ್ನು ನೀರು ತುಂಬುವ ಬ್ಯಾರಲ್ ನಲ್ಲಿ ಇಟ್ಟು ಕಾಡಿಗೆ ಎಸೆದಿರವ ದಾರುಣ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರಗಾಂವನಲ್ಲಿ ನಡೆದಿದೆ.


ಕಾರವಾರ: ಪತ್ನಿಯನ್ನು ಹತ್ಯೆ ಮಾಡಿದ ಪತಿಯೊಬ್ಬ ನಂತರ ಶವವನ್ನು ನೀರು ತುಂಬುವ ಬ್ಯಾರಲ್ ನಲ್ಲಿ ಇಟ್ಟು ಕಾಡಿಗೆ ಎಸೆದಿರವ ದಾರುಣ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರಗಾಂವನಲ್ಲಿ ನಡೆದಿದೆ.
ಘಟನೆ ಸಂಬಂಧ ಹಳಿಯಾಳ-ದಾಂಡೇಲಿ ಪೊಲೀಸರು ಆರೋಪಿ ಹಾಗೂ ಶವ ವಿಲೇವಾರಿಗೆ ಸಹಕರಿಸಿದ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ.
ಮೃತ ಮಹಿಳೆಯನ್ನು ಶಾಂತಕುಮಾರಿ ಎಂದು ಗುರ್ತಿಸಲಾಗಿದೆ. ತನಗಿಂತ 10 ವರ್ಷ ಕಿರಿಯವನಾದ ತುಕಾರಾಂ ಎಂಬಾತನನ್ನು ಶಾಂತಕುಮಾರಿ ವಿವಾಹವಾಗಿದ್ದರು. ತನಗೆ ದ್ರೋಹ ಬಗೆದಿರುವುದಾಗಿ ಶಾಂತಕುಮಾರಿ ಆಗಾಗ್ಗೆ ಪತಿಯೊಂದಿಗೆ ಜಗಳ ಮಾಡುತ್ತಿದ್ದಳು. ಈ ಗಲಾಟೆ ವಿಕೋಪಕ್ಕೆ ತಿರುಗಿದಾಗ, ತುಕಾರಾಮ್, ಶಾಂತಕುಮಾರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಪತ್ನಿಯ ಶವವನ್ನು ನೀರು ತುಂಬುವ ಬ್ಯಾರಲ್ನಲ್ಲಿ ಬಚ್ಚಿಟ್ಟಿದ್ದಾನೆ.
ಬಳಿಕ ಮನೆ ಖಾಲಿ ಮಾಡುವ ನೆಪದಲ್ಲಿ ಇಬ್ಬರ ಸಹಾಯದೊಂದಿಗೆ ಟಾಟಾ ಎಸ್ ಬಾಡಿಗೆ ಪಡೆದು ಶವ ತುಂಬಿದ ಬ್ಯಾರಲ್’ನ್ನು ವಾಹನದಲ್ಲಿ ಇರಿಸಿದ್ದಾನೆ. ಇದನ್ನು ಗಮನಿಸಿದ ಮನೆ ಮಾಲೀಕರು ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತುಕಾರಾಂ ಗೋವಾಗೆ ಹೋಗಬೇಕೆಂದು ಉತ್ತರಿಸಿದ್ದಾನೆ. ನಂತರ ಶವವನ್ನು ಕಾಡೊಂದರಲ್ಲಿ ಎಸೆದಿದ್ದಾನೆ. ಈ ನಡುವೆ ಮಾಹಿತಿ ತಿಳಿದಿದ್ದ ಪೊಲೀಸರು ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ ಆರಂಭಿಸಿದ್ದಾರೆ.
ವಾಹನದ ಬಗ್ಗೆ ವಿವರಗಳು ನಮಗೆ ತಿಳಿದಿರಲಿಲ್ಲ. ಆದರೆ, ವಾಹನದಲ್ಲಿ ಮೂವರು ಇರುತ್ತಾರೆಂಬ ಮಾಹಿತಿ ಮಾತ್ರ ತಿಳಿದಿತ್ತು. ತೇರ್ಗಾಂವ್ ಗ್ರಾಮದ ಬಳಿ ವಾಹನವೊಂದು ಕಂಡು ಬಂದಿತ್ತು. ಆದರೆ, ವಾಹನದಲ್ಲಿ ಏನೂ ಇರಲಿಲ್ಲ. ಈ ವೇಳೆ ವಾಹನವನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಆರೋಪಿಗಳು ಹತ್ಯೆ ಕುರಿತು ಬಾಯ್ಬಿಟ್ಟಿದ್ದರು. ಬಳಿಕ ಶವ ಎಸೆದ ಸ್ಥಳಕ್ಕೆ ನಮ್ಮನ್ನು ಕರೆದೊಯ್ದಿದ್ದರು. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ಮಹಿಳೆಗಿದು ಎರಡನೇ ವಿವಾಹವಾಗಿತ್ತು. ಬಂಧಿತರಾಗಿರುವ ಇಬ್ಬರನ್ನು ರಿಜ್ವಾನ್ ಮತ್ತು ಸಮೀರ್ ಪಂತೋಜಿ ಎಂದು ಗುರ್ತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾವೇರಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ರ ಸಕ್ಕರೆ ಕಾರ್ಖಾನೆ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ಹಾವೇರಿ: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಪುತ್ರ ವಿವೇಕ ಹೆಬ್ಬಾರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಯಂತ್ರದ ಬೆಲ್ಟ್ ಗೆ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ದುಂಢಸಿ ಗ್ರಾಮದ ನವೀನ ಬಸಪ್ಪ ಚಲವಾದಿ(19 ವರ್ಷ) ಮೃತಪಟ್ಟ ಕಾರ್ಮಿಕರಾಗಿದ್ದಾರೆ. ಕಬ್ಬು ತುಂಬುವ ಯಂತ್ರದ ಬೆಲ್ಟಿಗೆ ನವೀನನ ಎರಡು ಕೈಗಳು ಸಿಲುಕಿ ತುಂಡಾಗಿ, ತೀವ್ರ ರಕ್ತಸ್ರಾವದಿಂದ ಕಾರ್ಮಿಕ ನವೀನ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕಾರ್ಖಾನೆಯಲ್ಲಿ ಯಾವುದೇ ಸುರಕ್ಷತಾ ಕ್ರಮವಿರಲಿಲ್ಲ
“ಕೋಣನಕೇರಿಯ ವಿಐಪಿಎನ್ ಡಿಸ್ಟಿಲರಿ ಕಾರ್ಖಾನೆಯಲ್ಲಿ ಯಾವುದೇ ಸುರಕ್ಷಾ ಕ್ರಮವಿಲ್ಲದೇ, ದೊಡ್ಡ ದೊಡ್ಡ ಯಂತ್ರಗಳ ಬೆಲ್ಟ್ ಹತ್ತಿರ ಕೌಶಲರಹಿತ ಕಾರ್ಮಿಕನಿಂದ ಬುಟ್ಟಿಯಿಂದ ಕಬ್ಬಿನ ಪುಡಿಯನ್ನು ತುಂಬಿ ಹಾಕಿಸಲಾಗುತ್ತಿತ್ತು. ಸ್ಥಳದಲ್ಲಿ ಯಾವುದೇ ಜಾಲರಿ, ಸುರಕ್ಷಾ ಕ್ರಮಗಳಿಲ್ಲದ ಕಾರಣ ಈ ದುರ್ಘಟನೆ ನಡೆದಿದೆ” ಎಂದು ಮೃತನ ಸಂಬಂಧಿಗಳು ದೂರಿದ್ದಾರೆ.
ಕಾರ್ಖಾನೆ ಮಾಲೀಕ ವಿವೇಕ ಹೆಬ್ಬಾರ್, ಜನರಲ್ ಮ್ಯಾನೇಜರ್ ಮಂಜುನಾಥ, ಲೇಬರ್ ಸಪ್ಲೈರ್ಗಳಾದ ಬಸವರಾಜ, ಉಮೇಶ ಸುರವೇ, ವಿಶ್ವನಾಥ ಎ.ಎಸ್, ಆಕಾಶ ಧರ್ಮೋಜಿ ಸೇರಿದಂತೆ 6 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕಪ್ರಡಾ)
