

ಸಿದ್ದಾಪುರ: ಪರೇಶ್ ಮೇಸ್ತ ಸಾವಿನ ಕುರಿತು ಅವನ ಸಾವು ಹಾಗಾಯಿತು ಹೀಗಾಯಿತು ಎಂದು ಬಿಜೆಪಿಯವರು ಕರಾವಳಿಯಾದ್ಯಂತ ಪ್ರತಿಭಟನೆ ಮಾಡಿಸಿದರು. ಶಿರಸಿಗೆ ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಶಿರಸಿಯಲ್ಲಿ ಬೆಂಕಿ ಹಚ್ಚಿ ಗಲಾಟೆ ಮಾಡಲು ಅಂದು ಪ್ರೋತ್ಸಾಹ ಕೊಟ್ಟಿದ್ದೇ ಇಂದಿನ ಸಭಾಧ್ಯಕ್ಷರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯ್ಕ ಹರಿಹಾಯ್ದಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಮುಂದೆ ಅಷ್ಟು ಅಭಿವೃದ್ಧಿ ಮಾಡಿದ್ದೇನೆ, ಇಷ್ಟು ಮಾಡಿದ್ದೇನೆ, ಅಭಿವೃದ್ಧಿ ಕಾರ್ಯಗಳಿಗೆ ಕೆಲವರು ಅಡ್ಡ ಬಂದರು ಎಂದು ನಿನ್ನೆ ಹೇಳಿಕೊಂಡಿದ್ದಾರೆ. ಯಾರು ಅಡ್ಡ ಬಂದರು ಎಂಬುದನ್ನು ಅವರು ಸ್ಪಷ್ಟಪಡಿಸಲಿ. ಒಳ್ಳೆಯ ಕಾರ್ಯಕ್ರಮ ನಡೆಯುವಲ್ಲಿ, ಅಭಿವೃದ್ಧಿ ನಡೆಯುವಲ್ಲಿ ನಮ್ಮ ಯಾವುದೇ ಕಾರ್ಯಕರ್ತರಾಗಲಿ, ಯಾರಾದರೂ ತೊಂದರೆ ಕೊಟ್ಟಿದ್ದೆ ಇದ್ದಲ್ಲಿ ಯೋಚಿಸಿ ಹೆಸರು ಹೇಳಲಿ. ಇಲ್ಲದೆ ಹೋದಲ್ಲಿ ಹಿಂದೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಸವಾಲೆಸೆದಿದ್ದಾರೆ.
ಇದೆ ಸಂದರ್ಭದಲ್ಲಿ ಕಾಂಗ್ರೆಸ್ ನ ಪ್ರಣಾಳಿಕೆಯ ಗೃಹಜ್ಯೋತಿ ಯೋಜನೆ ಒಳಗೊಂಡ ಗ್ಯಾರಂಟಿ ಕಾರ್ಡ್ ಅನಾವರಣ ಮಾಡಿದರು ಮುಂದಿನ ದಿನದಲ್ಲಿ ಈ ಕಾರ್ಡ್ ಹಾಗೂ ಕಾಂಗ್ರೆಸ್ ಯೋಜನೆಗಳ ಬಗ್ಗೆ ಪ್ರತಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಮಾಡುವ ಕಾರ್ಯಕ್ರಮವನ್ನು ಬ್ಲಾಕ್ ಅಧ್ಯಕ್ಷ
ವಸಂತ ನಾಯ್ಕ್ ಒಳಗೊಂಡ ನಾಯಕರು ಕಾರ್ಯಕರ್ತರು ಮಾಡಲಿದ್ದಾರೆ ಎಂದರು ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಪ್ರಮುಖರು ಉಪಸ್ಥಿತರಿದ್ದರು

