


ಎನ್ಎಸ್.ಭಟ್‌ಗುಡ್ಡೆಕೊಪ್ಪ ನಿಧನಕ್ಕೆ ಎಚ್.ಕೆ.ಪಾಟೀಲ್ ಶ್ರದ್ಧಾಂಜಲಿ
ಸಿದ್ದಾಪುರ ೭ ನಾಡಿನ ಶ್ರೇಷ್ಠ ಸಹಕಾರಿಗಳಲ್ಲಿ ಒಬ್ಬರಾಗಿದ್ದ ಹಾಗೂ ಸಹಕಾರ ,ಸಾಮಾಜಿಕ ,ರಾಜಿಕೀಯಕ್ಷೇತ್ರದ ಹೋರಾಟಗಾರ ಎನ್.ಎಸ್.ಭಟ್‌ಗುಡ್ಡೆಕೊಪ್ಪ ನಿಧನ ಪ್ರಯುಕ್ತ ಶಾಸಕ , ಮಾಜಿ ಸಚಿವ ಎಚ್.ಕೆ.ಪಾಟೀಲ್‌ರವರು ಕಂಬನಿ ಮಿಡಿದಿದ್ದಾರೆ.
ತಮ್ಮತಂದೆ ಕೆ.ಎಚ್.ಪಾಟೀಲ್‌ರ ಕಾಲದಿಂದಲೂಅವರ ಹತ್ತಿರದಒಡನಾಡಿಯಾಗಿದ್ದು , ತಮ್ಮೊಂದಿಗೂ ಸಹ ನಿಕಟವಾದ ಸಂಬಂಧವನ್ನು ಹೊಂದಿ ಆತ್ಮೀಯರಾಗಿದ್ದರು.ಸಹಕಾರಕ್ಷೇತ್ರಕ್ಕೆತುಂಬಲಾರದ ನಷ್ಟವಾಗಿದೆ.ನಾಡಿನಉದ್ದಗಲಕ್ಕೂ ಸಂಚರಿಸಿ ಸಹಕಾರ ಚಳುವಳಿ ಬಲಗೊಳಿಸುವಲ್ಲಿ ದುಡಿದಜನನಾಯಕ ,ಸಹಕಾರಿಗಣ್ಯರಾಗಿದ್ದರು . ಅವರಅಗಲಿಕೆಯದು:ಖವನ್ನು ಭರಿಸುವ ಶಕ್ತಿ ನಮ್ಮೆಲ್ಲರಿಗೆ ಭಗವಂತ ನೀಡಲೆಂದು ಪ್ರಾರ್ಥಿಸಿ ಶದ್ಧಾಂಜಲಿ ಕೋರಲಾಗಿದೆ.
