


ಸಿದ್ದಾಪುರ .ಮಹಿಳೆ ಪುರುಷ ಎಂಬ ಯಾವುದೇ ಭೇದವಿಲ್ಲ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಕಾನೂನುಗಳಿವೆ.ಮಹಿಳೆಯರಿಗೂ ಆಸ್ತಿ ಹಕ್ಕನ್ನು ಸಂವಿಧಾನ ನೀಡಿದೆಎಂದು ಸಿದ್ದಾಪುರದ ಸಿವಿಲ್ ಜಡ್ಜ್ ಶ್ರೀ ತಿಮ್ಮಯ್ಯ ಜಿ ಹೇಳಿದರು. ಅವರು ಸಿದ್ದಾಪುರದ ಎಪಿಎಂಸಿಯಲ್ಲಿರುವ ಟಿ ಎಮ್ ಎಸ್ ಸಭಾಭವನದಲ್ಲಿ ಮೊದಲ ಬಾರಿ ನಡೆದ ಪತಂಜಲಿ ಯೋಗ ಸಮಿತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜರುಗಿದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಹಿಳಾ ಕಾನೂನು ಅರಿವು ಕುರಿತು ಮಾತನಾಡಿದರು.
ತಾಯಿ ಸಂಸ್ಕಾರವಂತಳಾಗಿದ್ದರೆ ಮನೆಯ ಮಕ್ಕಳು ಸದಸ್ಯರೆಲ್ಲರೂ ಸಂಸ್ಕಾರವನ್ನು ಕಲಿತು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಾರೆ ಎಂದು ಹೇಳಿದರು. ಇನ್ನೋರ್ವ ಅತಿಥಿ ಪ್ರಜಾಪಿತ ಈಶ್ವರಿ ವಿದ್ಯಾಲಯದ ಬಿ.ಕೆ. ದೇವಕಿ ಅಕ್ಕ ಮಾತನಾಡಿ ಮಹಿಳೆ ಮನೆಯಲ್ಲಿ ಲಕ್ಷ್ಮಿಯಂತಿರಬೇಕು.ಭಾರತೀಯ ಸಂಸ್ಕೃತಿ ಸಂಪ್ರದಾಯವನ್ನು ತಾಯಿಯಾದವಳು ಅನುಸರಿಸಿದರೆ ಮಕ್ಕಳು ಭಾರತೀಯ ನಾರಿಯಾಗಿ ಸುಖ ಸಮೃದ್ಧಿ ಶಾಂತಿ ನೆಮ್ಮದಿ ಕಾಣಬಹುದೆಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಿಳಾಪತಂಜಲಿ ಯೋಗ ಸಮಿತಿಯ ತಾಲೂಕ ಪ್ರಭಾರಿ ಶ ವೀಣಾ ಆನಂದ ಶೇಟ್ ಮಾತನಾಡಿ ಹೆಣ್ಣು ಹೆಣ್ಣನ್ನು ಗೌರವಿಸಬೇಕು.ಹೆಣ್ಣಿಗೆ ಹೆಣ್ಣು ಶತ್ರುವಾಗಬಾರದು.ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯವನ್ನು ಮಾಡಿ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು.ಅಷ್ಟಾಂಗ ಯೋಗಭ್ಯಾಸ ಮಾಡಿ ನಿಯಮವನ್ನು ಪಾಲಿಸಿ ಮನೆಯನ್ನು ಸಕರಾತ್ಮಕವಾಗಿ ಮುನ್ನಡೆಸಿ ಮನೆಯನ್ನು ಮಂದಿರವಾಗಿರಿಸಬೇಕೆಂದರು.
ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಶ್ರೀಮತಿ ಚೈತ್ರ ಆರ್ ನಾಯಕ್, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಮ್. ಹೆಗಡೆ ಬಾಳೆ ಸರ, ಸಿದ್ದಾಪುರ ಲಯನ್ಸ್ ಪಿ.ಡಿ.ಜಿ.ಡಾ- ರವಿ ಹೆಗಡೆ ಹೂವಿನ ಮನೆ, ಪತಂಜಲಿ ತಾಲೂಕ ಪ್ರಭಾರಿ ಮಂಜುನಾಥ್ ನಾಯಕ್ ಮಹಿಳಾ ದಿನಾಚರಣೆ ಕುರಿತು ವಿವರಿಸಿದರು.ಈ ಸಂದರ್ಭದಲ್ಲಿ ಎಲೆಮರೆಕಾಯಿಯಂತಿದ್ದ ಮೂವರು ಮಹಿಳಾ ಸಾಧಕೀಯರನ್ನು ಸನ್ಮಾನಿಸಲಾಯಿತು.ಸಂಗೀತ ಶಿಕ್ಷಕಿ ಶಾಂತ ನೀಲಕಣಿ, ಬಾಣಂತಿ ಮತ್ತು ಮಗುವಿನ ಶುಶ್ರೂಷಕಿ ಶಕುಂತಲಾ ಹೊನ್ನಾವರ, ಹಾಗೂ ಅಂಧ ಮಕ್ಕಳ ಪಾಲನೆ ಶಶಿಕಲಾ ಮಡಿವಾಳ. ಮಂಗಲಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶೀಲಾ ಕೊಂಡ್ಲಿ ಪ್ರಾರ್ಥಿಸಿದರು. ಸುವರ್ಣ ಹೆಗಡೆ ಸ್ವಾಗತಿಸಿದರು. ಗೀತಾ ಬಿ.ಹೆಗಡೆ ವಂದಿಸಿದರು.
