

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ,ಸಾಗರ ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಕಾಂಗ್ರೆಸ್ ತ್ಯಜಿಸಿದ್ದಾರೆ. ಹಿರಿಯ ಕಾಂಗ್ರೆಸ್ ಸದಸ್ಯರಾಗಿದ್ದ ತೀ.ನ.ಶ್ರೀನಿವಾಸ ಉತ್ತಮ ಸಂಘಟಕ,ಜಿಲ್ಲಾ ಅಧ್ಯಕ್ಷ ಎಂದು ಹೆಸರು ಮಾಡಿದ್ದರು.
ಕಾಂಗ್ರೆಸ್ ನಲ್ಲಿ ತಮ್ಮ ಕೆಲಸ,ಅನುಭವ, ಸೇವೆಗಳನ್ನು ಗೌರವಿಸಿಲ್ಲ. ಭೂಮಿ ವಂಚಿತರ ಸಮಸ್ಯೆ, ಬೇಡಿಕೆಗಳ ಬಗ್ಗೆ ವಯೋವೃದ್ಧ ಕಾಗೋಡು ತಿಮ್ಮಪ್ಪ ಬಿಟ್ಟರೆ ಬೇರೆ ಯಾರಿಗೂ ಕಾಳಜಿ ಇಲ್ಲ. ಮಲೆನಾಡು ಭೂಹೋರಾಟ ಚಳವಳಿ ಗಟ್ಟಿಗೊಳಿಸಿ ಅದರ ಆಧಾರದಲ್ಲೇ ಸ್ವತಂತ್ರವಾಗಿ ಚುನಾವಣೆ ಎದುರಿಸುವುದು ನಮ್ಮ ಮುಂದಿರುವ ಸಾಧ್ಯತೆ ಎಂದಿದ್ದಾರೆ.
