

ಸಿದ್ಧಾಪುರ ನಗರದ ಶಾಂತಲಾ ವೈನ್ ಶಾಪ್ ಸಾಗರ ಹೋಟೆಲ್ ಬಳಿ ನಡೆದ ಚಿಕ್ಕ ಗಲಾಟೆಯ ಹಿನ್ನೆಲೆಯಲ್ಲಿ ೫ ಜನ ಯುವಕರ ಮೇಲೆ ಪೊಲೀಸ್ ದೂರು ದಾಖಲಾಗಿದೆ.
ಪ್ರಜ್ವಲ್ ಶನೇಶ್ವರ ಕಿಂದ್ರಿ ಎಂಬ ಯುವಕ ತನಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದರೆಂದು ಪವನ್ ರಾಜು ನಾಯ್ಕ, ಆದಿತ್ಯ ರಾಮಾ ನಾಯ್ಕ, ಗಣೇಶ್ ಮಡಿವಾಳ, ಹೇಮಂತ ಮಡಿವಾಳ, ದಿನೇಶ್ ಮಡಿವಾಳ ಎನ್ನುವ ೫ ಯುವಕರ ಮೇಲೆ ಪೊಲೀಸ್ ದೂರು ದಾಖಲಿಸಿದ್ದಾನೆ. ಆರೋಪಿತರು ೨ ಜನ ಬಳ್ಳಟ್ಟೆಯವರು ಮತ್ತು ಮೂರುಜನ ಮರಲಿಗೆಯವರಾಗಿದ್ದಾರೆ. ಹೋಟೆಲ್ ಎದುರು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಗಲಾಟೆಗೆ ಪ್ರಚೋದಿಸಿ ಅಪರಾಧ ಮಾಡಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ- ಬ್ಯಾಂಕ್ ನೋಟೀಸ್ ಗೆ ಹೆದರಿ ನಗರದ ಕೋಳಿ ಅಂಗಡಿ ಮಾಲಿಕನೊಬ್ಬ ವಿಷಕುಡಿದು ಮೃತರಾದ ಘಟನೆ ಅಮೀನಾ ವೃತ್ತದಲ್ಲಿ ನಡೆದಿದೆ. ಮೃತ ವ್ಯಕ್ತಿ ಪ್ರಭು ಎನ್ನಲಾಗಿದ್ದು ಬ್ಯಾಂಕ್ ನೋಟೀಸ್ ನಿಂದ ಮನನೊಂದು ಕಳೆದ ಎರಡು ದಿವಸಗಳ ಹಿಂದೆ ವಿಷ ಕುಡಿದಿದ್ದ ವ್ಯಕ್ತಿ ಇಂದು ಮೃತರಾಗಿರುವ ಬಗ್ಗೆ ಮೂಲಗಳು ಸಮಾಜಮುಖಿ ಡಾಟ್ ನೆಟ್ ಗೆ ತಿಳಿಸಿವೆ.
