ಅಂಜುಮನ್ ಇ ಇಸ್ಲಾಂ ಇಂದು ಸಿದ್ಧಾಪುರದಲ್ಲಿ ವಿದ್ಯುಕ್ತವಾಗಿ ಪ್ರಾರಂಭವಾಯಿತು. ಗಿಡಕ್ಕೆ ನೀರೆರೆಯುವ ಮೂಲಕ ಪ್ರಾರಂಭವಾದ ಈ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಸಮಾಜದ ಹಿರಿಯ ಸಾಧಕರನ್ನು ಸನ್ಮಾನಿಸಿ,ಗೌರವಿಸಲಾಯಿತು. ಸಂಸ್ಥೆಗೆ ಚಾಲನೆ ನೀಡಿದ ಡಾ. ಶಶಿಭೂಷಣ ಹೆಗಡೆ ಶಿಕ್ಷಣ,ಕಲೆ. ಸಂಗೀತ, ಸಾಂಸ್ಕೃತಿಕತೆಗಳಿಗೆ ಮುಸ್ಲಿಂರ ಕೊಡುಗೆ ಅಪಾರ ಸಿದ್ಧಾಪುರದಲ್ಲಿ ಕಲೆ,ಶಿಕ್ಷಣ, ಸಾಂಸ್ಕೃತಿಕತೆಗಳನ್ನು ಪೋಶಿಸುವ ಮೂಲಕ ಸಂಸ್ಥೆ ಎಲ್ಲರ ಅಭ್ಯುದಯಕ್ಕೆ ಕಾರಣವಾಗಬೇಕು ಎಂದು ಹಾರೈಸಿದರು.
ಪ್ರಾಸ್ಥಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದ ಮುನಾವರ್ ಗುರ್ಕಾರ್ ಅಂಜುಮನ್ ಇ ಇಸ್ಲಾಂ ಸಂಸ್ಥೆಯ ಧ್ಯೇಯ, ಗುರಿಗಳನ್ನು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ನಾಶಿರ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಭೀಮಣ್ಣ ನಾಯ್ಕ,ಜೆ.ಡಿ.ಎಸ್. ಅಭ್ಯರ್ಥಿ ಉಪೇಂದ್ರ ಪೈ ಹಾಗೂ ಇತರ ಗಣ್ಯರು ಶುಭಹಾರೈಸಿದರು.