

ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಟು ಟೀಕಾಕಾರ, ಸಿದ್ಧಾಪುರ ಬಿ.ಜೆ.ಪಿ. ಯುವ ಮೋರ್ಚಾ ಮಾಜಿ ಅಧ್ಯಕ್ಷ ಹರೀಶ್ ಗೌಡರ್ ಅರಳಿಕೊಪ್ಪ ಮಂಗಳವಾರ ಅಧೀಕೃತವಾಗಿ ಜೆ.ಡಿ.ಎಸ್. ಸೇರ್ಪಡೆಯಾದರು. ಅವರೊಂದಿಗೆ ಬಿ.ಜೆ.ಪಿ.ಯಲ್ಲಿ ಗುರುತಿಸಿಕೊಂಡಿದ್ದ ವಿವೇಕ್ ನಾಯ್ಕ ಸೇರಿದಂತೆ ಕೆಲವರು ಹರೀಶ್ ಗೌಡರ್ ರೊಂದಿಗೆ ಬಿ.ಜೆ.ಪಿ. ತೊರೆದು ಜೆ.ಡಿ.ಎಸ್. ಸೇರಿದರು.
ಶಿರಸಿ-ಸಿದ್ಧಾಪುರ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಉಪೇಂದ್ರ ಪೈ ಅಧೀಕೃತವಾಗಿ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ. ಸತೀಶ್ ಹೆಗಡೆ ಬೈಲಳ್ಳಿಯವರಿಗೆ ಸಿದ್ಧಾಪುರ ತಾಲೂಕಾ ಜೆ.ಡಿ.ಎಸ್. ಅಧ್ಯಕ್ಷರಾಗಿ ಕೆಲಸ ಮಾಡಲು ಅಧಿಕಾರ ಹಸ್ತಾಂತರಿಸಿದ ಪೈ ಇದು ಪ್ರಾರಂಭವಾಗಿದ್ದು ಶೀಘ್ರದಲ್ಲಿ ಸಾವಿರಾರು ಜನ ಅನ್ಯ ಪಕ್ಷಗಳ ಕಾರ್ಯಕರ್ತರು ಜೆ.ಡಿ.ಎಸ್.ಸೇರ್ಪಡೆಯಾಗುವವರಿದ್ದಾರೆ ಎಂದರು. ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಗಳಿಸಿದ ಬೂತ್ ನ ಅಧ್ಯಕ್ಷರು, ಸದಸ್ಯರನ್ನು ಸೂಕ್ತ ಸಂಭಾವನೆಯೊಂದಿಗೆ ಸನ್ಮಾನಿಸುವುದಾಗಿ ಅವರು ತಿಳಿಸಿದರು.
