
ಕೋಲಶಿರ್ಸಿಯ ಪ್ರತಿಷ್ಠಿತ ಮನೆತನದ ಸೋಮನಾಥ ಸುಬ್ರಾಯ ಗೌಡರ್ ಗುರುವಾರ ನಿಧನರಾಗಿದ್ದಾರೆ. ೭೬ ವರ್ಷಗಳ ಸೋಮನಾಥ್ ಗೌಡರ್ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಮಾಜಿ ನಿರ್ಧೇಶಕರು, ಸಿದ್ಧಾಪುರ ಗ್ರಾಹಕರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದರು. ಎರಡು ಬಾರಿ ಕೋಲಶಿರ್ಸಿ ಮಾರಿಕಾಂಬಾ ಜಾತ್ರಾ ಸಮೀತಿ ಅಧ್ಯಕ್ಷರೂ ಕಳೆದ ಜಾತ್ರೆಯಲ್ಲಿ ಜಾತ್ರಾ ಸಮೀತಿಯ ಗೌರವಾಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದರು.
ಗೌಡರ್ ಎರಡು ಜನ ಸಹೋದರರು,ಆರು ಜನ ಸಹೋದರಿಯರು,ಓರ್ವ ಪುತ್ರ,ಪುತ್ರಿ ಹಾಗೂ ಪ್ರಸಿದ್ಧ ವಕೀಲರಾಗಿರುವ ಜಯಕುಮಾರ್ ಎಸ್. ಪಾಟೀಲ್ ಮತ್ತು ದಯಾನಂದ ಪಾಟೀಲ ಸಹೋದರರು ಮತ್ತು ಪತ್ನಿಯನ್ನು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಲಂಗ್ಸ್ ಕ್ಯಾನ್ಸರ್ ಗೆ ತುತ್ತಾಗಿದ್ದ ಸೋಮನಾಥ ಗೌಡರ್ ಕಿಮೋಥೆರಪಿ ಅಥವಾ ಇತರ ಯಾವುದೇ ಚಿಕಿತ್ಸೆ ಬೇಡ ಬದುಕಿನಲ್ಲಿಮಾಡುವ ಎಲ್ಲಾ ಕೆಲಸ ಮುಗಿಸಿದ್ದೇನಿ ಇದ್ದಷ್ಟು ದಿನ ಬದುಕಿರುತ್ತೇನಿ ಎಂದು ಹೆಚ್ಚಿನ ಚಿಕಿತ್ಸೆ ನಿರಾಕರಿಸಿದ್ದರು. ಕ್ಯಾನ್ಸರ್ ಕಾರಣದಿಂದ ಮಾತನಾಡದ ಸ್ಥಿತಿ ತಲುಪಿದ್ದ ಗೌಡರ್ ಕೆಲವು ಕಾಲದ ಅನಾರೋಗ್ಯದಿಂದಾಗಿ ಗುರುವಾರ ಕೊನೆಯುಸಿರೆಳೆದಿದ್ದಾರೆ. ಶುಕ್ರವಾರ ಅಪರಾಹ್ನ ಮೃತರ ಅಂತ್ಯ ಸಂಸ್ಕಾರ ನೆರವೇರಿದ್ದು ಅಪಾರ ಜನಸ್ತೋಮ ಗೌಡರ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿತ್ತು.
