

ವಿಜಯ ಸಂಕಲ್ಪ ಯಾತ್ರೆ ಮಾರ್ಚ ೨೦ ಸೋಮವಾರ ಮದ್ಯಾಹ್ನ ೪ ಗಂಟೆಗೆ ಸಿದ್ದಾಪುರಕ್ಕೆ ಆಗಮಿಸಲಿದ್ದು ಸಿದ್ದಾಪುರ ಪಟ್ಟಣದದಲ್ಲಿ ರೋಡ ಶೋ ನಡೆಯಲಿದೆ. ಪ್ರಾರಂಭದಲ್ಲಿ ಗಂಗಾಂಬಿಕಾ ದೇವಸ್ಥಾನದಲ್ಲಿ ಪೂಜೆಯೊಂದಿಗೆ ರೋಡ ಶೋ ಪ್ರಾರಂಭವಾಗಲಿದೆ. ಗಂಗಾಂಭಿಕಾ ದೇವಸ್ಥಾನದಿಂದ ಹೊರಟು ತಿಮ್ಮಪ್ಪ ನಾಯಕ ವೃತ್ತ, ರಾಮಕೃಷ್ಣ ಹೆಗಡೆ ವೃತ್ತ, ರಾಜ ಮಾರ್ಗವಾಗಿ, ಭಗತ ಸಿಂಗ್ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಹಾಗೂ ಜಿಲ್ಲೆಯ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.

ಸಿದ್ದಾಪುರ-೧೮-ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಬಾಳೇಗದ್ದೆ ಹಳ್ಳಕ್ಕೆ ನಿರ್ಮಿಸಿದ ತೂಗು ಸೇತುವೆಯನ್ನು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಗ್ರಾಪಂ ಸದಸ್ಯರಾದ ಅನಂತ ಹೆಗಡೆ ಹೊಸಗದ್ದೆ, ಸೀತಾರಾಮ ಶೇಟ್, ವಿಶಾಲಾಕ್ಷಿ ಹಸಲರ್, ಜಿಪಂ ಮಾಜಿ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ, ತಾಪಂ ಮಾಜಿ ಸದಸ್ಯ ಮಹಾಬಲೇಶ್ವರ ಹೆಗಡೆ ಮತ್ತಿಹಳ್ಳಿ, ಅಶೋಕ ಹೆಗಡೆ ಹಿರೇಕೈ, ಜಿ.ಎಂ.ಹೆಗಡೆ ಕರ್ಕಿಸವಲ್, ಗಣೇಶ ಹೆಗಡೆ ಮತ್ತಿಗಾರ, ಗಂಗಾಧರ ನಾಯ್ಕ, ಅಣ್ಣಪ್ಪ ನಾಯ್ಕ, ಲಕ್ಷö್ಮಣ ನಾಯ್ಕ, ದ್ಯಾವಾ ಗೌಡ, ಕೆ.ಪಿ.ಗೌಡರ್, ಜಿ.ಬಿ.ನಾಯ್ಕ ಇತರರಿದ್ದರು.

