
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಯಾವುದೇ ಭರವಸೆ ಇಲ್ಲ ಆದರೆ ಗ್ಯಾರಂಟಿ ಕಾರ್ಡ್ ಹಿಡಿದು ಪ್ರಹಸನ ಮಾಡುತ್ತಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ನಾಯಕರು ತಮ್ಮ ಪಕ್ಷ ಅಧಿಕಾರ ಹಿಡಿಯುತ್ತದೆ ಎಂದು ಭ್ರಾಂತಿಯಲ್ಲಿದ್ದಾರೆ ಅವರು ಈಗಲೇ ಹೊಲಿಸಿಟ್ಟುಕೊಂಡ ಸೂಟ್ -ಬೂಟ್ ವೇಸ್ಟ್ ಎಂದು ಕೆಣಕಿದ್ದಾರೆ.
ಬಿ.ಜೆ.ಪಿ.ಜನಸಂಕಲ್ಪಯಾತ್ರೆಯ ಅಂಗವಾಗಿ ನಡೆದ ಪ್ರಚಾರ ಭಾಷಣವನ್ನುದ್ದೇಶಿಸಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಮಾತನಾಡಿದ ಅವರು ಸಿದ್ಧರಾಮಯ್ಯನವರಿಗೆ ಪಕ್ಕಾ ಕ್ಷೇತ್ರವೇ ಇಲ್ಲ. ಕ್ಷೇತ್ರವೇ ಇಲ್ಲದ ನಾಯಕ ಎಲ್ಲಿಂದ ಗೆಲ್ಲುತ್ತಾರೆ.ಡಿ.ಕೆ.ಶಿವಕುಮಾರ ಅವರ ಮೇಲಾಟವೇ ಮುಗಿದಿಲ್ಲ ಅವರ ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಅಧಿಕಾರ ಹಿಡಿಯುವ ಸಾಧ್ಯತೆಗಳೇಇಲ್ಲ.ಈ ಚುನಾವಣೆಯಲ್ಲಿ ಬಿ.ಜೆ.ಪಿ.೧೪೦ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಕನಸು ತಿರುಕನ ಕನಸಾಗಲಿದೆ ಎಂದರು.
ಈ ಯಾತ್ರೆಯಲ್ಲಿ ಮಾತನಾಡಿದ ಸಚಿವ ಶ್ರೀನಿವಾಸ ಪೂಜಾರಿ ಬಿ.ಜೆ.ಪಿ. ಎಲ್ಲಾ ಜನವರ್ಗಗಳನ್ನು ತಲುಪಿದೆ ಈ ಬಾರಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
https://samajamukhi.net/2023/03/10/
