ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಈಗ ಎಲ್ಲೆಂದರಲ್ಲಿ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎನ್ನುವ ಮಾತು ಚರ್ಚೆಯ ವಿಷಯವಾಗಿದೆ.ಶಿವಮೊಗ್ಗದಲ್ಲಿ ಈಶ್ವರಪ್ಪ ಸೇರಿದಂತೆ, ಶಿರಸಿಯ ವಿಶ್ವೇಶ್ವರ ಹೆಗಡೆ ಒಳಗೊಂಡಂತೆ ಬಿ.ಜೆ.ಪಿ.ಯ ೧೨ ಜನ ಹಿರಿಯ ನಾಯಕರಿಗೆ ಬಿ.ಜೆ.ಪಿ.ಟಿಕೆಟ್ ಇಲ್ಲ ಎನ್ನುವ ವಿಚಾರ ವದಂತಿಯಾಗಿದೆ.
ಸಾಗರದಲ್ಲಿ ಈ ಬಾರಿ ಹಾಲಪ್ಪ ಗೆಲ್ಲಲ್ಲ, ಸೊರಬಾದಲ್ಲಿ ಕುಮಾರಬಂಗಾರಪ್ಪ ಗೆಲ್ಲುವ ಲಕ್ಷಣಗಳಿಲ್ಲ ಎನ್ನುವ ಗಾಳೀಮಾತುಗಳ ನಡುವೆ ಯಾವ ಯಾವ ಕ್ಷೇತ್ರಕ್ಕೆ ಯಾರ್ಯಾರಿಗೆ ಟಿಕೇಟ್ ಎನ್ನುವುದೇ ಮತ್ತೆ ಮತ್ತೆ ಚರ್ಚೆಯ ವಿಷಯವಾಗುತ್ತಿದೆ.
ಶಿವಮೊಗ್ಗದಲ್ಲಿ ಕಾಂಗ್ರೆಸ್, ಬಿ.ಜೆ.ಪಿ. ಟಿಕೇಟ್ ಹಂಚಿಕೆಯ ಅನಿಶ್ಚಿತತೆ ಒಂದಕ್ಕಿಂತ ಒಂದು ಪಕ್ಷದಲ್ಲಿ ಹೆಚ್ಚು ಎನ್ನುವಂತಿದೆ.
ಉತ್ತರ ಕನ್ನಡದಲ್ಲಿ ಆಡಳಿತ ಪಕ್ಷದ ಶಾಸಕರಲ್ಲಿ ಕನಿಷ್ಟ ಎರಡು ಜನರಿಗೆ ಈ ಬಾರಿ ಟಿಕೇಟ್ ಇಲ್ಲ ಎನ್ನಲಾಗಿದೆ.
ಇದ್ದುದರಲ್ಲಿ ಜತ್ಯಾತೀತ ಜನತಾದಳವೇ ವಾಸಿ ಶಿರಸಿಯಿಂದ ಉಪೇಂದ್ರ ಪೈ, ಕುಮಟಾದಿಂದ ಸೂರಜ್ ನಾಯ್ಕ, ಹಳಿಯಾಳದಿಂದ ಎಸ್.ಎಲ್. ಘೊಟ್ನೇಕರ್, ಭಟ್ಕಳದಿಂದ ಶಾಬಂದ್ರಿ,ಯಲ್ಲಾಪುರದಿಂದ ಡಾ. ನಾಗೇಶ್ ನಾಯ್ಕ ಎಂದು ಮುಂಚಿತವಾಗಿ ಘೋಶಿಸಿ ರಣಕಹಳೆ ಊದಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಈಗ ಕಾಂಗ್ರೆಸ್ ನತ್ತ ನೆಟ್ಟಿದೆ.
ಭಟ್ಕಳದಲ್ಲಿ ಮಂಕಾಳು ವೈದ್ಯ, ಕಾರವಾರದಲ್ಲಿ ಸತೀಶ್ ಶೈಲ್, ಹಳಿಯಾಳದಿಂದ ಆರ್.ವಿ. ದೇಶಪಾಂಡೆ ಎಂದು ಬಹುತೇಕ ತೀರ್ಮಾನಿಸಿರುವ ಕಾಂಗ್ರೆಸ್ ಗೆ ಕುಮಟಾ, ಶಿರಸಿ, ಯಲ್ಲಾಪುರಗಳು ಕಗ್ಗಂಟಾಗಿವೆ. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಬಹುಸಂಖ್ಯಾತರಾಗಿರುವ ನಾಮಧಾರಿಗಳಲ್ಲಿ ಈಗ ಯಲ್ಲಾಪುರ, ಶಿರಸಿ ಮತ್ತು ಕುಮಟಾಗಳು ಉಳಿದುಕೊಂಡಿವೆ.
ಕಮಟಾದಲ್ಲಿ ತೊಡೆತಟ್ಟಿರುವ ಅರ್ಧಡಜನ್ ಗೂ ಹೆಚ್ಚಿನ ನಾಯಕ-ನಾಯಕಿಯರ ನಡುವೆ ನಿವೇದಿತ್ ಆಳ್ವ ದಿಢೀರನೇ ನಂ೧ ಆಕಾಂಕ್ಷಿಯಾಗಿ ಕಂಗೊಳಿಸುತ್ತಿರುವ ಹಿಂದೆ ಕುಮಟಾದ ಮಹಿಳಾ ಕೋಟಾ ಬದಲು ಅಲ್ಪಸಂಖ್ಯಾತರ ಕೋಟಾ ನಿಗದಿಪಡಿಸುವುದು ನಿವೇದಿತ್ ಆಳ್ವ ಎಂಟ್ರಿ ಹಿಂದಿನ ರಹಸ್ಯ ಎನ್ನಲಾಗುತ್ತಿದೆ.
ನಾಮಧಾರಿಗಳ ಏಕಮೇವಾದ್ವಿತಿಯ ನಾಯಕ ಭೀಮಣ್ಣ ನಾಯ್ಕ ರ ಸ್ಫರ್ಧೆ ಚುನಾವಣೆಯ ರಂಗು ಹೆಚ್ಚಿಸಲಿದೆ ಎನ್ನುವ ಹಿನ್ನೆಲೆಯಲ್ಲಿ ಯಲ್ಲಾಪುರ ಅಥವಾ ಶಿರಸಿಗೆ ಭೀಮಣ್ಣ ಅಭ್ಯ ರ್ಥಿಯಾಗಬಹುದೆಂದು ಡಿ.ಸಿ.ಸಿ. ತೀರ್ಮಾನಿಸಿರುವ ಹಿಂದೆ ನಾಮಧಾರಿಗಳಿಗೆ ಭಟ್ಕಳ, ಕುಮಟಾ ತಪ್ಪಿಸಿದರೆ ಶಿರಸಿ-ಯಲ್ಲಾಪುರಗಳು ಅನಿವಾರ್ಯ ಎನ್ನುವ ಸಂಧಾನ ಸೂತ್ರವಿದೆ ಎನ್ನಲಾಗುತ್ತಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿ.ಜೆ.ಪಿ.ಯಂತೆ ಸಾಂಖ್ಯಿಕ ಅಲ್ಪಸಂಖ್ಯಾತರಿಗೆ ಮಣೆ ಹಾಕುತ್ತಿರುವ ವಿದ್ಯಮಾನದಿಂದ ಕೆರಳಿರುವ ಮತಬಾಹುಳ್ಯದ ಸಮೂದಾಯಗಳು ಹಳಿಯಾಳದಲ್ಲಿ ಘೊಟ್ನೇಕರ್, ಯಲ್ಲಾಪುರದಲ್ಲಿ ಪಾಟೀಲ್, ಕಾರವಾರದಲ್ಲಿ ಶೈಲ್,ರಿಗೆ ನೀಡುವಂತೆ ಶಿರಸಿ,ಕುಮಟಾ ಭಟ್ಕಳಗಳಲ್ಲಿ ನಾಮಧಾರಿಗಳಿಗೆ ಟಿಕೇಟ್ ನೀಡದಿದ್ದರೆ ನಾಮಧಾರಿಗಳು ತಮ್ಮ ಅಭ್ಯರ್ಥಿಗಳಿಗೆ ಟಿಕೇಟ್ ನೀಡುವ ಪಕ್ಷಕ್ಕೆ ಬೆಂಬಲಿಸುವುದು ಒಳ್ಳೆಯದು ಎನ್ನುವ ನಿರ್ಧಾರದಲ್ಲಿರುವ ಬಗ್ಗೆ ಬಾತ್ಮಿ ಗಳಿವೆ.
ಈ ಮೇಲಾಟಗಳ ನಡುವೆ ಕಾರವಾರ, ಹಳಿಯಾಳಗಳಲ್ಲಿ ಏಕ್ ಮರಾಠ, ಲಾಕ್ ಮರಾಠ ಘೋಷಣೆ ಬಿ.ಜೆ.ಪಿ.ಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ. ಕುಮಟಾ, ಭಟ್ಕಳಗಳಲ್ಲಿ ಕಾಂಗ್ರೆಸ್, ಬಿ.ಜೆ.ಪಿ. ಟಿಕೇಟ್ ಹಂಚಿಕೆ ಆಧರಿಸಿ ಚುನಾವಣಾ ವರ್ತಮಾನ ಬದಲಾಗುವುದರಿಂದ ಜೆ.ಡಿ.ಎಸ್. ಸಂಖ್ಯಾ ಬಹುಸಂಖ್ಯಾತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಸಮಾಧಾನಿಸುವ ಹಿನ್ನೆಲೆಯಲ್ಲಿ ಜೆ.ಡಿ.ಎಸ್. ಈ ಬಾರಿ ಉತ್ತರ ಕನ್ನಡದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೂ ಆಶ್ಚರ್ಯವಿಲ್ಲ ಎನ್ನುವ ನಿರೀಕ್ಷೆಇದೆ. (ಎಲ್ಲರ ಕಣ್ಣು,ಗುರಿ ಭೀಮಣ್ಣನತ್ತ ಯಾಕೆ ಮುಂದಿನ ವರದಿ)