


ಕೃಷಿಕರೂ, ರೈತಮುಖಂಡರೂ ಆಗಿದ್ದ ಹಾರ್ಸಿಕಟ್ಟಾ ಸಂಪೇಸರದ ದ ಕನ್ನಾ ನಾಯ್ಕ ಬುಧವಾರ ನಿಧನರಾಗಿದ್ದಾರೆ. ಗುಂಡು ಕನ್ನಾ ನಾಯ್ಕ ಎಂದೇ ಹೆಸರು ಮಾಡಿದ್ದ ರೈತ ಸಂಘ ಮತ್ತು ಕಾಂಗ್ರೆಸ್ ಗಳಲ್ಲಿ ಗುರುತಿಸಿಕೊಂಡಿದ್ದ ಕನ್ನಾ ನಾಯ್ಕ ಕೆಲವು ದಿವಸಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಯುಗಾದಿಯ ಸಾಯಂಕಾಲ ಗತಿಸಿದ ನಾಯ್ಕ ನಾಲ್ವರು ಸಹೋದರರು, ಇಬ್ಬರು ಪುತ್ರರು, ಎರಡು ಜನ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ದಿವ್ಯಾತ್ಮಕ್ಕೆ ಶಾಂತಿಕೋರಿ ಆಮ್ ಆದ್ಮಿ ಪಕ್ಷದ ಮುಖಂಡ ವೀರಭದ್ರನಾಯ್ಕ,ವಿನಾಯಕ ನಾಯ್ಕ,ಪ್ರೊ.ಎನ್.ಟಿ.ನಾಯ್ಕ ಮತ್ತು ದಾಮೋಧರ ನಾಯ್ಕ ದ್ಯಾವಾಸ, ಡಿ.ಕೆ. ನಾಯ್ಕ ತೆಂಗಿನಮನೆ ಹಾಗೂ ಶಿವಾನಂದ ಹೊನ್ನೆಗುಂಡಿ ಸಂತಾಪ ಸೂಚಿಸಿದ್ದಾರೆ.
