


ಸಿದ್ದಾಪುರ,
ಪಟ್ಟಣದ ಹೊಸೂರಿನ ಶ್ರೀ ಬಂಕೇಶ್ವರ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿಯು ಯುಗಾದಿ ಹಬ್ಬದ ಪ್ರಯುಕ್ತ ಮಾ.೨೬ರಂದು ಜಂಗೀ ನಿಕಾಲೇ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಸಮಿತಿಯ ಅಧ್ಯಕ್ಷ ಲೋಕೇಶ ನಾಯ್ಕ ಹೊಸೂರು ತಿಳಿಸಿದರು.
ಅವರು ಹೊಸೂರಿನ ಶ್ರೀ ಬಂಕೇಶ್ವರ ದೇವಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.
ಕಳೆದ ೪ ವರ್ಷಗಳಿಂದ ಕುಸ್ತಿ ಪಂದ್ಯಾವಳಿ ನಡೆಸಿಕೊಂಡು ಬರಲಾಗುತ್ತಿದ್ದು ಈ ವರ್ಷ ಮಾ.೨೬ರ ಮಧ್ಯಾಹ್ನ ೨ರಿಂದ ಹೊಸೂರಿನ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದ್ದು ಉತ್ತರ ಕನ್ನಡ ಜಿಲ್ಲೆ ಹಾಗೂ ಸೊರಬ,ಸಾಗರ ತಾಲೂಕಿನ ಕುಸ್ತಿಪಟುಗಳಿಗೆ ಮಾತ್ರ ಅವಕಾಶವಿರುತ್ತದೆ. ವಿಜೇತರಾದವರಿಗೆ ಬೆಳ್ಳಿ ಗದೆ, ೧೫ ಪಟುಗಳಿಗೆ ಬೆಳ್ಳಿ ಕಡಗ ಮತ್ತು ನಗದು ಬಹುಮಾನ ನೀಡಲಾಗುವದು. ಕುಸ್ತಿಪಟುಗಳು ಪಂದ್ಯ ಆರಂಭವಾಗುವ ಮುನ್ನ ಹೆಸರು ನೊಂದಾಯಿಸಲು ಅವಕಾಶವಿದ್ದು ಒರಿಜಿನಲ್ ಆಧಾರಕಾರ್ಡ ನೀಡುವದು ಕಡ್ಡಾಯವಾಗಿರುತ್ತದೆ. ಯಾವುದೇ ಪ್ರವೇಶಶುಲ್ಕ ಇರುವದಿಲ್ಲ.ನಿರ್ಣಾಯಕರ ಮತ್ತು ಕಮಿಟಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಹೋದವರ್ಷ ೪೦ ಕುಸ್ತಿಪಟುಗಳು ಭಾಗವಹಿಸಿದ್ದು ಈ ವರ್ಷ ೫೦ಕ್ಕಿಂತ ಹೆಚ್ಚು ಪಟುಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಕ್ಕಳಿಗೆ ಕಾಯಿಕುಸ್ತಿ ಇರುತ್ತದೆ ಎಂದರು.
ಕುಸ್ತಿಪಂದ್ಯಾವಳಿಯನ್ನು ಉದ್ಯಮಿ ಉಪೇಂದ್ರ ಪೈ ಶಿರಸಿ ಉದ್ಘಾಟಿಸಲಿದ್ದು,ಕುಸ್ತಿ ಅಂಕಣವನ್ನು ಉದ್ಯಮಿ ರೂಡಾಲ್ಪ ಎಂ.ಫರ್ನಾಂಡಿಸ್ ಸಿದ್ದಾಪುರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಲೋಕೇಶ ಜಿ.ನಾಯ್ಕ ವಹಿಸಲಿದ್ದು ವಿಶೇಷ ಆಹ್ವಾನಿತರಾಗಿ ಉದ್ಯಮಿ ಭೀಮಣ್ಣ ಟಿ.ನಾಯ್ಕ ಶಿರಸಿ ಪಾಲ್ಗೊಳ್ಳುವರು. ಅತಿಥಿಗಳಾಗಿ ಶ್ರೀ ಬಂಕೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಆರ್.ಆಯ್.ನಾಯ್ಕ,ಶ್ರೀ ಬೋಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ರಘು ಡಿ.ನಾಯ್ಕ, ಪಪಂ ಸದಸ್ಯರಾದ ಮಾರುತಿ ಟಿ.ನಾಯ್ಕ, ಮಂಜುಳಾ ಜಿ.ನಾಯ್ಕ, ಯಶೋಧ ಆರ್.ಮಡಿವಾಳ,ವಿಜಯೇಂದ್ರ ಗೌಡರ್,ಉದ್ಯಮಿ ಕೆ.ಜಿ.ನಾಗರಾಜ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ವಕೀಲರಾದ ಪಿ.ಬಿ.ಹೊಸುರು ಪಾಲ್ಗೊಳ್ಳುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಗೋವಿಂದ ಬಿ,ಮಡಿವಾಳ, ಕಾರ್ಯದರ್ಶಿ ಚೈತನ್ಯ ವಿ.ಹೊಸೂರು, ಸಹಕಾರ್ಯದರ್ಶಿ ಶಿವಮೂರ್ತಿ ನಾಯ್ಕ, ಸದಸ್ಯರಾದ ಬಸವರಾಜ ಡಿ.ನಾಯ್ಕ, ಲಕ್ಷö್ಮಣ ಬಿ.ನಾಯ್ಕ, ಭರತ ಆರ್.ನಾಯ್ಕ ಇದ್ದರು.
