ಸಿದ್ದಾಪುರ ತಾಲೂಕಿನ ಹೂವಿನಮನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಚಂದ್ರಹಾಸ ವಿ.ಹಸ್ಲರ್ ಅವರ ಆಕಳು ಅಕಾಲಿಕವಾಗಿ ಸಾವನ್ನಪ್ಪಿದ್ದರಿಂದ ಅದರ ವಿಮಾ ಚೆಕ್‌ನ್ನು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪರಶುರಾಮ ವಿ.ನಾಯ್ಕ ಬೇಡ್ಕಣಿ ಬುಧವಾರ ವಿತರಿಸಿದರು. ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ವಿನಾಯಕ ಬಿರಾದಾರ, ವಿಸ್ತರಣಾಧಿಕಾರಿ ಚಂದನ್ ನಾಯ್ಕ, ಸಂಘದ ಕಾರ್ಯದರ್ಶಿ ಸತೀಶ ಹೆಗಡೆ ಆಲ್ಮನೆ ಇತರರಿದ್ದರು.
ಇಂದು ಹೂಕಾರ ನಲ್ಲಿ ಕಾರ್ಯಕ್ರಮ-
ಸಿದ್ದಾಪುರ
ತಾಲೂಕಿನ ಹೂಕಾರ ಗ್ರಾಮ ರಕ್ಷಕ ದೇವತೆಗಳಾದ ಮಹಾಗಣಪತಿ, ಚೌಡೇಶ್ವರಿ, ನಾಗದೇವರು, ಚಂಡೇಶ್ವರ, ಅಮ್ಮನವರು, ವನದುರ್ಗಾ , ಮಹಾಸತಿ, ಜಟಗೇಶ್ವರ ಮತ್ತು ಕ್ಷೇತ್ರಪಾಲ ಶಕ್ತಿಗಳ ವಾರ್ಷಿಕೋತ್ಸವ ಗೇರುಸೊಪ್ಪ ಗ್ರಾಮದ ಶಕ್ತಿ ದೇವತೆಯಾದ ಮಾತೋಬಾರ ಶ್ರೀ ಗುತ್ತಿಕಾ ಪರಮೇಶ್ವರಿ ದೇವಿಯ ಉಪಸ್ಥಿತಿಯಲ್ಲಿ ಮಾ.೨೩ರಂದು ನಡೆಯಲಿದೆ.
ಬೆಳಗ್ಗೆ ಬ್ರಹ್ಮಕಲಶಾಭಿಷೇಕ, ಅನ್ನಪೂರ್ಣೇಶ್ವರಿ ಪೂಜೆ, ಸತ್ಯನಾರಾಯಣ ವೃತ,ಕಲಶ ಪೂಜೆ, ಪಲ್ಲಕ್ಕಿ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ೯ಕ್ಕೆ ನಡೆಯುವ ಸಭಾಕಾರ್ಯಕ್ರಮವನ್ನು ಉದ್ಯಮಿ ಉಪೇಂದ್ರ ಪೈ ಶಿರಸಿ ಉದ್ಘಾಟಿಸುವರು. ಸುಧೀರ್ ಗೌಡರ್ ಹೆಗ್ಗೋಡಮನೆ, ಕೆ.ಪಿ.ಗೌಡರ್ ಹೂಕಾರ, ಪಿ.ವಿ.ಹೆಗಡೆ ಹೊಸಗದ್ದೆ, ನ್ಯಾಯವಾದಿ ಕೆ.ಎಂ.ನಾಯ್ಕ ಸಿದ್ದಾಪುರ, ಗ್ರಾಪಂ ಸದಸ್ಯ ಅನಂತ ಹೆಗಡೆ ಹೊಸಗದ್ದೆ, ಸೀತಾರಾಮ ಶೆಟ್ಟಿ, ಈರಮ್ಮ ಭೋವಿ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಉಮಾ ವಿ.ಹೆಗಡೆ ಹೊಸಗದ್ದೆ, ಅಶೋಕ ೧೬ನೇಮೈಲಕಲ್, ಉಮಾಪತಿ ತೌಡತ್ತಿ, ಮಂಜುನಾಥ ಎನ್.ನಾಯ್ಕ ಮುತ್ತಿಗೆ ಉಪಸ್ಥಿತರಿರುತ್ತಾರೆ.
ನಂತರ ಸರಸ್ವತಿ ಕಲಾ ಟ್ರಸ್ಟ್ (ರಿ) ಹೊಸಗದ್ದೆ ಇವರಿಂದ ಜಾಂಬವತಿ ಕಲ್ಯಾಣ ಮತ್ತು ಶರಸೇತು ಬಂಧನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.