ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ 1000 ರೂಪಾಯಿ ದಂಡ ಸಹಿತ ಮಾ.31 ರಂದು ಕೊನೆಯ ದಿನವಾಗಿದೆ.
ಬೆಂಗಳೂರು: ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ 1000 ರೂಪಾಯಿ ದಂಡ ಸಹಿತ ಮಾ.31 ರಂದು ಕೊನೆಯ ದಿನವಾಗಿದೆ.
ನಿರ್ದಿಷ್ಟ ಸೇವೆಗಳನ್ನು ಪಡೆಯುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಾಗಿದ್ದು, ಐಟಿಆರ್ ಎಸ್ ನ್ನು ಸಲ್ಲಿಸುವುದಕ್ಕೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯವಲ್ಲ. ಆದರೆ ಐಟಿ ಇಲಾಖೆ ಆಧಾರ್ ಪ್ಯಾನ್ ಕಾರ್ಡ್ ಜೋಡಣೆಯಾಗದೇ ಇದ್ದಲ್ಲಿ ರಿಟರ್ನ್ಸ್ ಪ್ರಕ್ರಿಯೆಯನ್ನು ಮುಂದುವರೆಸುವುದಿಲ್ಲ ಎಂಬುದು ಗಮನಾರ್ಗ ವಿಷಯವಾಗಿದೆ.
ಹಲವರು ಈಗಾಗಲೇ ಜೋಡಣೆ ಮಾಡುತ್ತಿದ್ದು ಇನ್ನೂ ಕೆಲವರು ಜೋಡಣೆಯಾಗಿದೆಯೇ ಇಲ್ಲವೇ ಎಂಬುದನ್ನು ಮರೆತಿದ್ದಾರೆ. ಆಧಾರ್-ಪ್ಯಾನ್ ಜೋಡಣೆಯಾಗಿದೆಯೇ ಇಲ್ಲವೇ? ಎಂಬುದನ್ನು ತಿಳಿಯುವುದಕ್ಕೆ ಆನ್ ಲೈನ್ ಹಾಗೂ ಆಫ್ ಲೈನ್ ಗಳಲ್ಲಿ ಅವಕಾಶವಿದೆ.
ಆನ್ ಲೈನ್ ನಲ್ಲಿ ಪರಿಶೀಲಿಸುವುದು ಹೇಗೆ?
- ಆದಾಯ ತೆರಿಗೆ ಇ-ಫೈಲಿಂಗ್ ವೆಬ್ ಸೈಟ್ (https://onlineservices.tin.egov-nsdl.com/etaxnew/tdsnontds.jsp) ಗೆ ಭೇಟಿ ನೀಡಿ, ಆಧಾರ್ ಸ್ಟೇಟಸ್ ಎಂಬ ಆಯ್ಕೆ ಪರಿಶೀಲಿಸಿ.
- ಪ್ಯಾನ್- ಆಧಾರ್ ನಂಬರ್ ನಮೂದಿಸಿ
- ಅಲ್ಲಿ View Link Aadhaar Status ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಮುಂದಿನ ಪರದೆಯಲ್ಲಿ ಸ್ಟೇಟಸ್ ಪ್ರಕಟವಾಗಲಿದೆ.
ಒಂದು ವೇಳೆ ಜೋಡಣೆಯಾಗದೇ ಇದ್ದಲ್ಲಿ ಏನು ಮಾಡಬೇಕು?
ಪರಿಶೀಲನೆ ವೇಳೆ ಜೋಡಣೆಯಾಗದೇ ಇರುವುದು ಕಂಡುಬಂದಲ್ಲಿ ಈ ಕ್ರಮಗಳನ್ನು ಅನುಸರಿಸಬಹುದಾಗಿದೆ.
ಗ್ರಾಹಕರು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ ಸಟ್ ಮೂಲಕ ಆಧಾರ್-ಪ್ಯಾನ್ ಜೋಡಣೆ ಮಾಡಬಹುದಾಗಿದೆ. ಇನ್ನು ಇದಕ್ಕೂ ಮುನ್ನ ದಂಡ ಪಾವತಿಸಬೇಕಿರುವುದರಿಂದ ಗ್ರಾಹಕರು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ಪೋರ್ಟಲ್ ಗೆ ಭೇಟಿ ನೀಡಿಬೇಕಾಗುತ್ತದೆ. ಮತ್ತು ಚಲನ್ ಸಂಖ್ಯೆ. ITNS 280 ರ ಅಡಿಯಲ್ಲಿ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿ ಆದಾಯ ತೆರಿಗೆ) ಮತ್ತು ಮೈನರ್ ಹೆಡ್ 500 (ಇತರ ರಸೀದಿಗಳು) ನೊಂದಿಗೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
ಪ್ರಕ್ರಿಯೆಗಳ ವಿವರ
- ಆಧಾರ್-ಪ್ಯಾನ್ ಜೋಡಣೆಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ ಸೈಟ್ ಗೆ ಭೇಟಿ ನೀಡಿ, ಅಲ್ಲಿ ದಂಡ ಪಾವತಿಯನ್ನು ಕೇಳಲಾಗುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಗ್ರಾಹಕರಿಗೆ ಎನ್ಎಸ್ ಡಿಎಲ್ ವೆಬ್ ಸೈಟ್ ಕಾಣಿಸುತ್ತದೆ.
- ಪ್ಯಾನ್-ಆಧಾರ್ ಲಿಂಕ್ ವಿನಂತಿಯನ್ನು ಸಲ್ಲಿಸಲು ಅಲ್ಲಿರುವ ಆಯ್ಕೆಗಳ ಪೈಕಿ ಚಲನ್ ನಂ.ITNS 280 ಅಡಿಯಲ್ಲಿ ಮುಂದುವರೆಯಿರಿ.
- ಅಲ್ಲಿ (tax applicable) ಅನ್ವಯವಾಗುವ ತೆರಿಗೆಯನ್ನು ಆಯ್ಕೆ ಮಾಡಿ. ನಂತರ ಒಂದೇ ಚಲನ್‌ನಲ್ಲಿ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿ ಆದಾಯ ತೆರಿಗೆ) ಮತ್ತು ಮೈನರ್ ಹೆಡ್ 500 (ಇತರ ರಶೀದಿಗಳು) ಅಡಿಯಲ್ಲಿ ದಂಡ ಪಾವತಿ ಮಾಡಿ
- ಪೇಮೆಂಟ್ ಮೋಡ್ ನ್ನು ಆಯ್ಕೆ ಮಾಡಿ ವಿವರ ಸಲ್ಲಿಸಿ
- ಪ್ಯಾನ್, ವಿಳಾಸ, ಮೌಲ್ಯಮಾಪನ ವರ್ಷವನ್ನು ನಮೂದಿಸಿ
- ಕ್ಯಾಪ್ಚಾ ನಮೂದಿಸಿ ಪಾವತಿ ಮಾಡಿ.
ದಂಡ ಪಾವತಿ ಮಾಡಿದ ಬಳಿಕ 4-5 ದಿನಗಳಲ್ಲಿ ಪ್ಯಾನ್- ಆಧಾರ್ ಜೋಡಣೆಗೆ ಮನವಿ ಸಲ್ಲಿಸಿ
ದಂಡ ಪಾವತಿಸಿದ 4-5 ದಿನಗಳ ಬಳಿಕ ಜೋಡಣೆಗೆ ಮಾಡಬೇಕಾದ ಪ್ರಕ್ರಿಯೆ ಹೀಗಿದೆ
- ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಗೆ ಹೋಗಿ
- ಮುಖ್ಯ ಪುಟದ (home page) ನ ಎಡ ಭಾಗದಲ್ಲಿನ ಕ್ವಿಕ್ ಲಿಂಕ್ಸ್ (Quick Links) ಅಡಿಯಲ್ಲಿ ಕಾಣುವ ಲಿಂಕ್ ಆಧಾರ್ ನ್ನು ಆಯ್ಕೆ ಮಾಡಿ.
- ನಂತರ ಪ್ಯಾನ್ ಹಾಗೂ ಆಧಾರ್ ನಂಬರ್ ನಮೂಬಿಸಿ ವ್ಯಾಲಿಡೇಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಪಾವತಿ ವಿವರಗಳನ್ನು ದೃಢೀಪಡಿಸಲಾಗಿದೆ ಎಂಬ ಸಂದೇಶ ಪರದೆ ಮೇಲೆ ಕಾಣಿಸುತ್ತದೆ. ಮುಂದುವರೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ವೆಬ್ ಸೈಟ್ ನಲ್ಲಿ ಕೆಳಲಾಗುವ ವಿವರಗಳನ್ನು ನೀಡಿ, ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ.
- ಮೊಬೈಲ್ ನಂಬರ್ ಗೆ ಬಂದಿರುವ ಒಟಿಪಿಯನ್ನು ನಮೂದಿಸಿ
- ಪ್ಯಾನ್- ಆಧಾರ್ ಜೋಡಣೆಗೆ ಮನವಿ ಸಲ್ಲಿಕೆ ಯಶಸ್ವಿಯಾಗುತ್ತದೆ.
ತೆರಿಗೆ ಪಾವತಿದಾರರು ಪ್ಯಾನ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ ನಿರ್ದಿಷ್ಟ ಫಾರ್ಮ್ ತುಂಬಿ, ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನ ಫೋಟೋಕಾಪಿಗಳನ್ನು ಸಲ್ಲಿಕೆ ಮಾಡುವ ಮೂಲಕವೂ ಆಧಾರ್-ಪ್ಯಾನ್ ಜೋಡಣೆ ಮಾಡಬಹುದಾಗಿದೆ. (ಕಪ್ರಡಾ)