

ಈ ವರ್ಷವೂ ಶಿರಸಿ-ಸಿದ್ಧಾಪುರಗಳಲ್ಲಿ ಅದ್ಧೂರಿ ಯುಗಾದಿ ಕಾರ್ಯಕ್ರಮ ನಡೆದಿದೆ. ವಿಶೇಶವೆಂದರೆ ಯುಗಾದಿ ಹೆಸರಿನಲ್ಲಿ ಮತಾಂಧ ಪರಿವಾರದ ಭಾಷಣಕಾರರನ್ನು ಕರೆಸಿ ವೈದಿಕ ಆಚಾರ, ವಿಚಾರಗಳನ್ನು ವೈಭವೀಕರಿಸಿ ಬಹುಸಂಖ್ಯಾತ ಹಿಂದುಳಿದವರನ್ನು ಕುರಿ ಮಾಡುವ ಉದ್ದೇಶದಲ್ಲೂ ಅಧಿಕಾರದಾಹಿ ಪರಿವಾರ ಯಶಸ್ವಿಯಾಗಿದೆ.

ಆದರೆ ಸಿದ್ಧಾಪುರದ ಯುಗಾದಿ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಬಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ವೇದಿಕೆಗೆ ಕರೆಯಬಾರದೆನ್ನುವ ವಿಚಾರದಲ್ಲಿ ಆದ ಪ್ರಹಸನ ಮಾತ್ರ ಯುಗಾದಿ ಉತ್ಸವದ ಸಭಾ ಕಾರ್ಯಕ್ರಮಕ್ಕೆ ಬಂದವರಿಗೆ ಪುಕ್ಕಟ್ಟೆ ಮನೋರಂಜನೆ ನೀಡಿದೆ.
ಪೂಜೆ ಮಾಡುವ ವೈದಿಕರು ಮಾತ್ರ ಪಕ್ಕಾ ಹಿಂದೂಗಳು ಎಂದು ಬಿ.ಜೆ.ಪಿ.ಪರವಾಗಿನ ಸಂಘದ ಸತ್ಯವನ್ನು ಅರಚಿದ ಚೈತ್ರಾ ಕುಂದಾಪುರ ಪರೋಕ್ಷವಾಗಿ ಬಹುಸಂಖ್ಯಾತರು ಅನ್ಯ ಧರ್ಮಗಳ ವ್ಯಾಪಾರಿಗಳ ಜೊತೆ ವ್ಯಾಪಾರ, ವ್ಯವಹಾರ ಮಾಡದೆ ಮೇಲ್ವರ್ಗದ ವ್ಯಾಪಾರಿಗಳನ್ನು ಕೊಬ್ಬಿಸಿ ಎಂದಿದ್ದು ಹಿಂದೂ ಹೆಸರಿನಲ್ಲಿ ವೈದಿಕರ ಗುಲಾಮರಾಗಿರುವವರಿಗೆ ಅರ್ಥವಾಯತೋ ಗೊತ್ತಿಲ್ಲ. ಆದರೆ ಯುಗಾದಿ ಉತ್ಸವವನ್ನು ಬಿ.ಜೆ.ಪಿ. ಕಾರ್ಯಕ್ರಮ ಮಾಡುವ ತಂತ್ರಿಗಳ ನಡುವೆ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ವೇದಿಕೆಗೆ ಕರೆಯುವ ವಿಚಾರದಲ್ಲಿ ಗೊಂದಲವೇರ್ಪಟ್ಟಿದ್ದು ಬಿ.ಜೆ.ಪಿ. ಒಡಕನ್ನು ಪ್ರತಿಬಿಂಬಿಸುವಂತಿತ್ತು.
ಯುಗಾದಿ ಉತ್ಸವದ ಪೂರ್ವತಯಾರಿ ಸಭೆಯಲ್ಲಿ ರಾಜಕಾರಣಿಗಳಿಗೆ ವೇದಿಕೆಯಲ್ಲಿ ಜಾಗವಿಲ್ಲ ಎಂದು ನಿರ್ಣಯಿಸಲಾಗಿತ್ತು. ಈ ಸಭಾ ನಡವಳಿಕೆಯಂತೆ ಯುಗಾದಿ ಉತ್ಸವದಲ್ಲಿ ಸ್ವಾಮಿಗಳು,ಪ್ರಮುಖ ವಕ್ತಾರರು ಮಾತನಾಡಬೇಕಿತ್ತು. ಆದರೆ ದುಷ್ಟರೂ,ಬ್ರಷ್ಟರಾದ ಕೆಲವು ಸಂಘನಿಷ್ಟ ಅನಿಷ್ಟ ಗಳು ಉಳಿದವರಿಗೆಲ್ಲಾ ಶೋಭಾ ಯಾತ್ರೆಗೆ ಆಮಂತ್ರಿಸಿ, ಗುಟ್ಟಾಗಿ ಬಿ.ಜೆ.ಪಿ. ನಾಯಕರಿಗೆ ವೇದಿಕೆಗೆ ಬರಲು ತಿಳಿಸಿದ್ದರು. ಈ ಸಂಘಿ ಉದ್ಯಮಿಗಳ ಕಳ್ಳಾಟದಂತೆಯೇ ಜೆ.ಡಿ.ಎಸ್., ಕಾಂಗ್ರೆಸ್ ಹಾಗೂ ಇತರ ಕೆಲವು ಪ್ರಮುಖರು ಶೋಭಾಯಾತ್ರೆಗೆ ಬಂದು ಮರಳಿದ್ದರು. ನಂತರ ನಡೆದ ಸಭಾ ಕಾರ್ಯಕ್ರಮದ ವೇಳೆಗೆ ಇಬ್ಬರು ಬಿ.ಜೆ.ಪಿ. ಮುಖಂಡರು ಬಿಟ್ಟರೆ ಬೇರೆ ಯಾರೂ ಉಪಸ್ಥಿತರಿರಲಿಲ್ಲ. ಈ ಬಗ್ಗೆ ತಕರಾರು ತೆಗೆದ ಸಂಘಟಕರು ಸ್ವಾಮಿ, ವಕ್ತಾರರು ಬಿಟ್ಟರೆ ಬೇರೆ ಯಾರೂ ವೇದಿಕೆಗೆ ಬರುವಂತಿಲ್ಲ ಎಂದು ಪಟ್ಟು ಹಿಡಿದರು. ನಂತರ ಆನಂದ ನಾಯ್ಕ ಮತ್ತು ಡಾ. ವೈದ್ಯರ ಸಂಧಾನದ ನಂತರ ಎಲ್ಲರನ್ನೂ ವೇದಿಕೆಗೆ ಕರೆಯುವುದೆಂದು ತೀರ್ಮಾನಿಸಿದಾಗ ರಹಸ್ಯ ಅರಿತಿದ್ದ ಬಿ.ಜೆ.ಪಿ. ಮುಖಂಡರು ಬಿಟ್ಟರೆ ಬೇರೆ ಯಾರೂ ಬರಲೇ ಇಲ್ಲ. ಯಾಕೆಂದರೆ ಇತರರೆಲ್ಲಾ ಶೋಭಾಯಾತ್ರೆ ಮುಗಿಸಿ ಮರಳಿದ್ದರು.
ಈ ಪ್ರಹಸನದಿಂದಾಗಿ ಸಭಾ ಕಾರ್ಯಕ್ರಮ ವಿಳಂಬವಾಗಿ ಪ್ರಾರಂಭವಾಗಿ ವಕ್ತಾರೆ ಮುಸ್ಲಿಂ ವಿರೋಧದ ಮಾತನಾಡಿ ಸಂಘಿಶನಿ ಕಲ್ಲಡ್ಕ ಭಟ್ಟನ ತೊಡೆಏರಿ ಹೋಗುವ ಕಾರಣಕ್ಕೆ ಶಿರಸಿಗೆ ಧಾವಿಸಿದ್ದರಿಂದ ಯುಗಾದಿ ಉತ್ಸವ ಸಪ್ಪೆಯಾಗಿ ಮುಗಿದುಹೋಯಿತು. ಶಿರಸಿಯಲ್ಲಿ ಕೂಡಾ ಸಂಘಿ ಅಜೆಂಡಾದ (ಅಲ್ಲಿ ಕಲ್ಲಡ್ಕ ಭಟ್ಟ ಮುಖ್ಯ ವಕ್ತಾರ) ಯುಗಾದಿ ಕಾರ್ಯಕ್ರಮದಲ್ಲಿ ಗುಟ್ಟಾಗಿ ಬಿ.ಜೆ.ಪಿ. ಪ್ರಚಾರ ಮಾಡುವ ಕೆಲಸ ನಡೆದ ಬಗ್ಗೆ ಆಕ್ಷೇಪಗಳೆದ್ದಿವೆಯಂತೆ!
ಹಿಂದೂ, ಹಿಂದುತ್ವದ ಹೆಸರಲ್ಲಿ ಬಹುಸಂಖ್ಯಾತ ಹಿಂದುಳಿದವರ ಶೋಷಣೆ ಮಾಡುವ ಬಿ.ಜೆ.ಪಿ.ಯ ಸಂಘಿ ಅಜೆಂಡಾಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಬಿ.ಜೆ.ಪಿ. ಬೇಕು ಭಟ್ಟ,ಹೆಗಡೆ ಬೇಡ ಎನ್ನುವ ಹಿಂದುಳಿದವರ ಬಣದ ಕೂಗು ವಿಧಾನಸೌಧ ಮುಟ್ಟಿರುವುದು ಈ ಬಾರಿ ಶಿರಸಿ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಹೊಸಮುಖ, ಹೊಸಚಿಂತನೆ ಬರುವ ಸಾಧ್ಯತೆ ಹೆಚ್ಚಿರುವ ಲಕ್ಷಣ ಎನ್ನಲಾಗುತ್ತಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
