

ಶುಕ್ರವಾರ ಅಪರಾನ್ಹ ಆತ್ಮಹತ್ಯೆ ಗೆ ಶರಣಾದ ಜಿ. ಬಿ. ಭಟ್ ನೆಲೆಮಾವ್ ಸಾವಿಗೆ ಹಣದ ವ್ಯವಹಾರವೇ ಕಾರಣ ಎನ್ನುವ ಸತ್ಯ ಹೊರಬಿದ್ದಿದೆ.
ಹುಬ್ಬಳ್ಳಿ ಮೂಲದ ಮೂವರು ಹಣದ ವಿಚಾರವಾಗಿ ಕಿರುಕುಳ ಕೊಟ್ಟು ಆತ್ಮ ಹತ್ಯೆಗೆ ಉತ್ತೇಜನ, ಒತ್ತಾಯ ಮಾಡಿದ್ದ ಬಗ್ಗೆ ಜಿ. ಬಿ. ಭಟ್ಟ ಬರೆದ ಡೆತ್ ನೋಟ್ ಸಾಕ್ಷಿ ನೀಡಿದೆ.
ಈ ಬಗ್ಗೆ ಸಿದ್ಧಾಪುರ ಪೊಲೀಸ್ ಸ್ಟೇಷನ್ ನಲ್ಲಿ ಮೃತರ ತಂದೆ ಬಾಲ ಗಂಗಾಧರ್ ಭಟ್ ದೂರು ದಾಖಲಿಸಿದ್ದಾರೆ. ಇದೇ ತಿಂಗಳ ಹತ್ತನೇ ತಾರೀಖಿ ನಂದು ಹಣದ ವಿಚಾರದಲ್ಲಿ ಹುಬ್ಬಳ್ಳಿಯ ಮೂವರು ಬಂದು ಗಲಾಟೆ ಮಾಡಿ ತ ಗಾದೆ ತೆಗೆದದ್ದ ಲ್ಲದೆ ಮನ ನೋಯಿಸಿದ್ದರು. ಈ ಬಗ್ಗೆ ಜಿ. ಬಿ. ಭಟ್ ಡೆತ್ ನೋಟ್ ಬರೆದಿದ್ದು ಈ ಆರೋಪಿಗಳಿಗೆ ಶಿಕ್ಷ ಸುವಂತೆ ಕೋರಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಿದ್ಧಾಪುರ ಪೊಲೀಸ್ ರು ಆರೋಪಿಗಳನ್ನು ಬಂಧಿಸಲಿದ್ದಾರೆ.

