


ಹೇರೂರಿನ ಸಾಮಾಜಿಕ ಮುಖಂಡರಾಗಿದ್ದ ಜಿ. ಬಿ. ಭಟ್ ನೆಲೆಮಾವು ಶುಕ್ರವಾರ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. 64 ವರ್ಷದ ಭಟ್ ತಟ್ಟಿಕೈ ನ ತೋಟದ ಶೆಡ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲಿ ಪತ್ತೆ ಯಾಗಿದ್ದಾರೆ. ಇದೇ ಗಣಪತಿ ಭಟ್ ಪಿ.ಎಸ್.ಐ.ನೇಮಕಾತಿ ಅಕ್ರಮದಲ್ಲಿ ವಿಚಾರಣೆ ಎದುರಿಸಿದ್ದ ಬಿ.ಜೆ.ಪಿ.ಮುಖಂಡ.
.ಮಧ್ಯಾಹ್ನ ದ ಮೂರುಗಂಟೆಯ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸ್ ರು ಸ್ಪಷ್ಟ ಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡರಾಗಿದ್ದ ಭಟ್ ಒಂದು ವರ್ಷದ ಈಚೆಗೆ ಬಿಜೆಪಿ ಸೇರ್ಪಡೆಯಾ ಗಿದ್ದರು. ಹೇರೂರು ನೆಲೆಮಾವು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಜಿ. ಬಿ. ಭಟ್ ಆತ್ಮಹತ್ಯೆ ಗೆ ತಾಲೂಕಿನಾದ್ಯ oಥ ದಿಗ್ಬ್ರಮೆ ವ್ಯಕ್ತವಾಗಿದೆ.
ಕಳೆದ ಮೂರ್ನಾಲ್ಕು ದಶಕಗಳಿಂದ ರಾಜಕೀಯ, ಸಹಕಾರಿ,ಸಾಮಾಜಿಕ ಕ್ಷೇತ್ರದಲ್ಲಿದ್ದ ಅವರು ಹೇರೂರು ಸೀಮೆಯಲ್ಲಿ ಜನಾನುರಾಗಿಯಾಗಿದ್ದು ಗೃಹ ಇಲಾಖೆಯಲ್ಲಿ ತಮ್ಮ ಪ್ರಭಾವ ಬೆಳೆಸಿಕೊಂಡಿದ್ದರು.
