

ಸಿದ್ಧಾಪುರ ತಾಲೂಕಿನ ಹೊಸೂರಿನಲ್ಲಿ ಶಾಖೆ ಹೊಂದಿರುವ ಶಿವಮೊಗ್ಗ ಮೂಲದ ಕೊಡಚಾದ್ರಿ ಚಿಟ್ಸ್ ನಲ್ಲಿ ಕಳ್ಳತನ ನಡೆದಿದ್ದು ೨ ಲಕ್ಷ ರೂಪಾಯಿ ಕಳ್ಳತನ ಮಾಡಿರುವ ಕಳ್ಳರು ಯಾರು ಎನ್ನುವ ಬಗ್ಗೆ ಕುತೂಹಲ ಹೆಚ್ಚಿದೆ.
ಹಲವು ವಿವಾದ,ಪ್ರಕರಣಗಳಿಂದ ಕುಖ್ಯಾತಿ ಹೊಂದಿರುವ ಚಿಟ್ಸ್ ನಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಶನಿವಾರ ರಾತ್ರಿ ಕಛೇರಿ ಮುಚ್ಚಿದ ಸಿಬ್ಬಂದಿಗಳು ಬೀಗ ಮತ್ತು ಕೀ ಗಳನ್ನೂ ಇಡದೆ ತನಿಖೆ ವೇಳೆ ಸೂಕ್ತ ಉತ್ತರ ನೀಡದೆ ತಡಬಡಾಯಿಸಿದ್ದು ಈ ಕಳ್ಳತನ ಪ್ರಕರಣದ ಮಹತ್ವವನ್ನು ಹೆಚ್ಚಿಸಿದೆ.
ಈ ಹಿಂದೆ ಸಿ.ಪಿ.ಐ ಆಗಿದ್ದ ಪ್ರಕಾಶ್ ಅವಧಿಯಲ್ಲಿ ಸಿದ್ಧಾಪುರದಲ್ಲಿ ಹೆಚ್ಚಿನ ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸಿ.ಸಿ. ಕೆಮರಾ ಕಾರಣಗಳಿಂದಾಗಿ ಕಳ್ಳತನದ ಪ್ರಕರಣಗಳು ಕ್ಷಯಿಸಿದ್ದವು. ಆದರೆ ಈ ಚಿಟ್ಸ್ ಕಳ್ಳತನದ ಪ್ರಕರಣದಲ್ಲಿ ಕಛೇರಿಯ ಸಿ.ಸಿ. ಕೆಮರಾಗಳು ಮತ್ತು ಅದರ ವೈರ್ ಗಳನ್ನು ತುಂಡರಿಸಿದ್ದಾರೆ.
ಈ ಬಗ್ಗೆ ಚಿಟ್ಸ್ ಅಧಿಕಾರಿಗಳು ಸ್ಥಳೀಯ ಠಾಣೆಗೆ ದೂರು ನೀಡಿದರೂ ಈ ವರೆಗೆ ಪ್ರಕರಣ ದಾಖಲಾಗಿಲ್ಲ.
