ಮಾರ್ಚ್ ೨೫ ರ ರಾತ್ರಿ ಸಿದ್ಧಾಪುರ ಹೊಸೂರಿನ ಕೊಡಚಾದ್ರಿ ಚಿಟ್ಸ್ ನಲ್ಲಿ ನಡೆದ ಕಳ್ಳತನದ ಹಿನ್ನೆಲೆಯಲ್ಲಿ ಚಿಟ್ಸ್ ನ ಸಿಬ್ಬಂದಿ ಶಶಾಂಕ ಮೇಲೆ ಕೊಡಚಾದ್ರಿ ಚಿಟ್ಸ್ ಪ್ರೈ.ಲಿ. ಪ್ರಕರಣ ದಾಖಲಿಸಿದೆ.
ಕೊಡಚಾದ್ರಿ ಚಿಟ್ಸ್ನಲ್ಲಿ ೧ಲಕ್ಷ ೮೬ ಸಾವಿರ ನಗದಿನೊಂದಿಗೆ ಕೆಲವು ವಸ್ತುಗಳು ಕಾಣೆಯಾಗಿದ್ದವು. ಈ ಕಳ್ಳತನದ ಬಗ್ಗೆ ಸೋಮುವಾರ ಚಿಟ್ಸ್ ದೂರು ನೀಡಿತ್ತಾದರೂ ಪ್ರಕರಣ ದಾಖಲಾಗಿರಲಿಲ್ಲ. ಇಂದು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಚಿಟ್ಸ್ ನ ವ್ಯವಸ್ಥಾಪಕ ಸುಧಾಕರ್ ಸಿಬ್ಬಂದಿ ಚಂದ್ರಗುತ್ತಿಯ ಶಶಾಂಕ ಮೇಲೆ ಅನುಮಾನ ಇರುವ ಬಗ್ಗೆ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.