ಜಿಲ್ಲೆಯ ಬಹುಸಂಖ್ಯಾತ ನಾಮಧಾರಿಗಳಿಗೆ ಪ್ರಮುಖ ಪಕ್ಷಗಳು ಅವಕಾಶ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಕಾಂಗ್ರೆಸ್ ನ ಸಿದ್ಧಾಪುರ ಯುವ ಮುಖಂಡರು ಕಾಂಗ್ರೆಸ್ ಇರಲಿ ಇತರ ಪ್ರಮುಖ ಪಕ್ಷಗಳಿರಲಿ ಜಿಲ್ಲೆಯ ಮತ್ತು ಕ್ಷೇತ್ರದ ಬಹುಸಂಖ್ಯಾತ ಹಿಂದುಳಿದವರಿಗೆ ನ್ಯಾಯ ನೀಡಬೇಕಾಗಿರುವುದು ನ್ಯಾಯ ಎಂದು ಹಕ್ಕೊತ್ತಾಯ ಮಾಡಿದ್ದಾರೆ.
ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖ ಯುವ ನಾಯಕರಾದ ಪ್ರಶಾಂತ್ ನಾಯ್ಕ ಮತ್ತು ರವಿ ಕೊಠಾರಿ ಜಿಲ್ಲೆಯಲ್ಲಿ ನಾಮಧಾರಿಗಳೇ ಬಹುಸಂಖ್ಯಾತರು ನಾಲ್ಕುಕ್ಷೇತ್ರಗಳಲ್ಲಿ ಗಣನೀಯ ಮತಬಾಹುಳ್ಯ ಹೊಂದಿರುವ ದೀವರು ನಾಮಧಾರಿಗಳನ್ನು ಪ್ರಮುಖ ಪಕ್ಷಗಳು ಆದ್ಯತೆಯ ಮೇಲೆ ಪರಿಗಣಿಸದಿದ್ದರೆ ಅಂಥ ಪಕ್ಷಗಳ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದಿದ್ದಾರೆ.
ಸಿದ್ದಾಪುರ: ಬಹು ಸಂಖ್ಯಾತ ರಾಗಿರುವ ನಾಮಧಾರಿ ಗಳಿಗೆ ಜಿಲ್ಲೆಯ ಮೂರೂ ಕ್ಷೇತ್ರಗಳಲ್ಲಿ ವಿಧಾನಸಭಾ ಟಿಕೆಟ್ ನೀಡಬೇಕು ಎಂದು ತಾಲೂಕು ಕಾಂಗ್ರೆಸ್ ನಾಮಧಾರಿ ಯುವ ಮುಖಂಡರು ಆಗ್ರಹಿಸಿದ್ದಾರೆ
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಪ್ರಶಾಂತ್ ನಾಯ್ಕ್ ಹೊಸೂರ್ ಜಿಲ್ಲೆಯಲ್ಲಿ ನಾಮಧಾರಿಗಳು ಬಹುಶಂಖ್ಯಾತರಾಗಿದ್ದು ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ನಾಮಧಾರಿಗಳಿಗೆ ಟಿಕೆಟ್ ನೀಡಬೇಕು ಅದರಲ್ಲೂ ವಿಶೇಷವಾಗಿ ಶಿರ್ಸಿ ಸಿದ್ದಾಪುರ ಕ್ಷೇತ್ರದಲ್ಲಿ 55,000 ಮತದಾರರು ನಾಮಧಾರಿಗಳಾಗಿದ್ದು ಹೆಚ್ಚಿನ ಮತದಾನವನ್ನು ಹೊಂದಿದ್ದಾರೆ ಇಲ್ಲಿ ಕಾಂಗ್ರೆಸ್ ನಿಂದ ಸಕ್ರಿಯವಾಗಿರುವ ನಾಮಧಾರಿ ಮುಖಂಡರಿಗೆ ಟೀಕೆಟ್ ನೀಡಬೇಕು ನಾಮಧಾರಿಗಳು ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ .ಹಿಂದುಳಿದ ವರ್ಗದವರು ಜೊತೆಯಾಗಿದ್ದಾರೆ ಹೀಗಿರುವಾಗ ನಾಮಧಾರಿಗಳಿಗೆ ಟಿಕೆಟ್ ನೀಡುವುದು ಸೂಕ್ತ ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರು ಇದನ್ನು ಅರಿತು ಶಿರ್ಸಿ ಸಿದ್ದಾಪುರ ಕ್ಷೇತ್ರದಲ್ಲಿ ನಾಮಧಾರಿ ಯವರಿಗೆ ಟಿಕೆಟ್ ನೀಡಬೇಕು ಇಲ್ಲದಿದ್ದರೆ ನಾವುಗಳು ಬೇರೆ ತೀರ್ಮಾನ ಮಾಡುವ ಅನಿವಾರ್ಯತೆ ಉಂಟಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ರವಿಕುಮಾರ್ ಕೋಠಾರಿ ಕೋಲ್ ಶಿರ್ಸಿ ಮಾತನಾಡಿ ಶಿರ್ಸಿ ಸಿದ್ದಾಪುರ ಕ್ಷೇತ್ರದಲ್ಲಿ ನಾಮಧಾರಿ ಸಮಾಜದವರು ಹೆಚ್ಚಿನ ಮತದಾರರಿ ಇರುವುದರಿಂದ ಈ ಕ್ಷೇತ್ರದಲ್ಲಿ ಹೆಚ್ಚಿನ ಯುವ ನಾಮಧಾರಿಗಳು ಮತ ಚಲಾಯಿಸುವುದರಿಂದ ಸೂಕ್ತ ನಾಮಧಾರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಒಂದು ಅವಕಾಶ ಒದಗಿಸಿ ಕೊಡಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹರೀಶ್ ನಾಯ್ಕ, ಚಂದ್ರಶೇಖರ್ ಎಸ್. ದಿನೇಶ್ ಮನ್ಮನೆ, ಶಶಿಕುಮಾರ ಕೆಶಿನಗುಡ್ಡೆ, ನಿತಿನ್ ನಾಯ್ಕ್ ಹೊಸೂರ್ ಗೋಪಾಲ್ ಕಡಕೇರಿ ,ವಿಷ್ಣು ಅಗ್ಗೇರಿ ,ಲಕ್ಷ್ಮಣ ಹೊಸೂರ್ ಭರತ್ ಕಲ್ಯಾಣಪುರ, ದೇವರಾಜ್ ಕ್ಯಾದಗಿ,ಅಣ್ಣಪ್ಪ ಕೊಪ್ಪ, ಗಣೇಶ್ ಕ್ಯಾದಗಿ, ಆದಿತ್ಯ ಬಳ್ಲಟ್ಟೆ, ಸಂತೋಷ್ ಹೊಸೂರ್ ಸುತನ್ ಹೊಸೂರ್, ಯಶವಂತ್ ಹೊಸೂರ್ ,ಪುನೀತ್ ಹೊಸೂರ್, ಜಿ ಸಿ ನಾಯ್ಕ ಹಸವಂತೆ ಉಪಸ್ಥಿತರಿದ್ದರು.