


ತಮ್ಮ ಗ್ರಾಮದ ಮೂಲಭೂತ ಸಮಸ್ಯೆಗಳಿಗೆ ಸ್ಫಂದಿಸದ ಜನಪ್ರತಿನಿಧಿಗಳ ಬೇಜವಾಬ್ಧಾರಿ ಖಂಡಿಸಿ ವಿಧಾನಸಭಾ ಚುನಾವಣೆಯ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ಮಸ್ತಾನೆ ಗ್ರಾಮಕ್ಕೆ ತಾಲೂಕಾ ಆಡಳಿತದ ಪ್ರತಿನಿಧಿಗಳು ಭೇಟಿ ಮಾಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಹೊನ್ನಾವರ ಮುಖ್ಯರಸ್ತೆಯಿಂದ ೨.೫ ಕಿ.ಮೀ. ದೂರದ ಮಸ್ತಾನೆಗೆ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದ್ದರೂ ಕೆಲಸ ಪ್ರಾರಂಭವಾಗಿರಲಿಲ್ಲ ಶಾಲಾ ಮಕ್ಕಳು, ನಾಗರಿಕರಿಗೆ ಅವಶ್ಯವಿರುವಸಂಪರ್ಕ ರಸ್ತೆ ವ್ಯವಸ್ಥೆಯ ವಾಸ್ತವ ಮನವರಿಕೆ ಮಾಡಿ ಮತದಾನ ಬಹಿಷ್ಕರಿಸದಿರಲು ಮಸ್ತಾನೆ ಗ್ರಾಮಸ್ಥರಿಗೆ ತಾಲೂಕಾ ಆಡಳಿತದಿಂದ ತಿಳುವಳಿಕೆ ನೀಡಲಾಯಿತು.

ತಾಲೂಕಿನ ಹಲಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಡ್ಕಣಿ ಗ್ರಾಮದ ಮಸ್ತಾನೆ ನಿವಾಸಿಗಳು ಈ ಬಾರಿಯ ಚುನಾವಣೆಯ ಮತದಾನದಿಂದ ದೂರ ಉಳಿಯುವುದಾಗಿ ಶುಕ್ರವಾರ ಸಿದ್ದಾಪುರ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದ್ದಾರೆ.
ನಮ್ಮಲ್ಲಿ 30 ಮನೆಗಳಿಂದ 240 ಜನ ವಾಸ್ತವ್ಯ ಹೊಂದಿದ್ದೇವೆ. ಸ್ವಾತಂತ್ಯ ದೊರಕಿ 75 ವರ್ಷ ಕಳೆದರೂ ಮಸ್ತಾನೆ ಕುಗ್ರಾಮವಾಗಿಯೇ ಉಳಿದಿದೆ. ಊರಿನ ರಸ್ತೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಹಲಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ತಾಲೂಕಾ ದಂಡಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೂ ಹಲವು ಬಾರಿ ಮನವಿ ಮಾಡಿದರೂ ಏನು ಪ್ರಯೋಜನವಾಗಿಲ್ಲ. ಆದ್ದರಿಂದ 2023 ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಮನವಿ ಸಲ್ಲಿಸಿದರು.
ಈ ವೇಳೆ ಮಸ್ತಾನೆಯ ಲೋಕೇಶ ಕೆ ನಾಯ್ಕ, ಬಲವೀಂದ್ರ ನಾಯ್ಕ, ಶಿವಾನಂದ ನಾಯ್ಕ, ಮಂಜುನಾಥ ಜಿ ನಾಯ್ಕ, ಲೋಕೇಶ ಟಿ ನಾಯ್ಕ, ಮಂಜುನಾಥ ಟಿ ನಾಯ್ಕ, ಗಣಪತಿ ನಾಯ್ಕ, ಧರ್ಮರಾಜ ನಾಯ್ಕ, ಸದಾಶಿವ ನಾಯ್ಕ, ಭಾಸ್ಕರ ನಾಯ್ಕ, ರತ್ನಾಕರ ನಾಯ್ಕ, ಉದಯ ನಾಯ್ಕ, ಕನ್ನಪ್ಪ ನಾಯ್ಕ ಉಪಸ್ಥಿತರಿದ್ದರು.
