


ಸಿದ್ಧಾಪುರದ ಪ್ರತಿಷ್ಠಿತ ದೊಡ್ಮನೆ ಕುಟುಂಬದ ಯುವ ನಾಯಕ ಡಾ. ಶಶಿಭೂಷಣ ಹೆಗಡೆ ಇಂದು ಬೆಂಗಳೂರಿನಲ್ಲಿ ಬಿ.ಜೆ.ಪಿ. ಪಕ್ಷ ಸೇರಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾದಳದಿಂದ ಸ್ಫರ್ಧಿಸಿ ಕೇವಲ ೨೬ ಸಾವಿರ ಮತಗಳಿಸಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೂ ಕಾರಣವಾಗಿದ್ದರು!. ಕಳೆದ ಒಂದೆರಡು ತಿಂಗಳುಗಳಿಂದ ಡಾ. ಶಶಿಭೂಷಣ ಹೆಗಡೆ ಬಿ.ಜೆ.ಪಿ. ಸೇರುತ್ತಾರೆ ಎನ್ನುವ ವದಂತಿಗಳು ಈಗ ನಿಜವಾಗಿವೆ.
ಸುಸಂಸ್ಕೃತ, ವಿದ್ಯಾವಂತ ಎನ್ನುವ ಹೆಗ್ಗಳಿಕೆ ಇರುವ ಡಾ. ಶಶಿಭೂಷಣ ಹೆಗಡೆ ಸಿದ್ಧಾಪುರದ ತಾಲೂಕಾ ಕ್ರೀಂಡಾಗಣವನ್ನು ಖಾಸಗಿಯಾಗಿ ನಿರ್ವಹಿಸಲು ಮುಖ್ಯಮಂತ್ರಿಗಳ ಬಳಿ ಬೇಡಿಕೆ ಇಟ್ಟು ಬಿ.ಜೆ.ಪಿ. ಸೇರಿದ್ದಾರೆ ಎನ್ನುವ ಮಾತು ನಗರದಲ್ಲಿ ಚಾಲ್ತಿಯಲ್ಲಿದೆ.
ಈ ಹಿಂದೆ ಎರಡು ಬಾರಿ ಜಾತ್ಯಾತೀತ ಜನತಾದಳ ಮತ್ತು ಬಿ.ಜೆ.ಪಿ.ಯಿಂದ ಕುಮಟಾ ಮತ್ತು ಶಿರಸಿ ಕ್ಷೇತ್ರಗಳಿಂದ ಸ್ಫರ್ಧಿಸಿ ಪರಾಭವಗೊಂಡ ಡಾ. ಶಶಿಭೂಷಣ ಹೆಗಡೆ ಶಾಸಕ, ಸಂಸದ ಅಥವಾ ವಿಧಾನಪರಿಷತ್ ಅಥವಾ ರಾಜ್ಯಸಭೆ ಎಲ್ಲಾದರೂ ಅವಕಾಶ ಕೇಳಿ ಆ ರ್ ಎಸ್ಸೆಸ್ ನ ಸಚ್ಚಿದಾನಂದ ಹೆಗಡೆ ಮತ್ತು ಬಿ.ಎಲ್. ಸಂತೋಷರ ಆಯ್ಕೆಯಾಗಿ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರಿಗೆ ಎದುರಾಗಿ ಬಿ.ಜೆ.ಪಿ. ಸೇರ್ಪಡೆ ಯಾಗಿದ್ದಾರೆ ಎನ್ನುವ ಊಹಾಪೋಹಗಳಿವೆ.
