ಸಿನೆಮಾ ನಟನಾಗಬೇಕೆಂಬ ಬಯಕೆಯಿಂದ ಬಣ್ಣ ಹಚ್ಚಿದ ಸಿದ್ಧಾಪುರದ ಮೆಣಸಿ ಜಯಕುಮಾರ್ ನಾಯ್ಕ ಈಗ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಯುವ ಕಲಾವಿದರಾಗಿ ಹೆಸರು ಮಾಡುತಿದ್ದಾರೆ. ಕರ್ನಾಟಕ ವಿದ್ಯು ಚ್ಛಕ್ತಿ ನಿಗಮದ ನಿವೃತ್ತ ನೌಕರ ಸಿರಂಜೀವ್ ನಾಯ್ಕರ ಪುತ್ರ ಜಯಕುಮಾರ್ ಓದಿನೊಂದಿಗೆ ಕಲಾಸಕ್ತಿಯನ್ನೂ ಬೆಳೆಸಿಕೊಂಡವರು. ಸಿನೆಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂದು ಹಂಬಲಿಸಿದ್ದ ಜಯಕುಮಾರ ಮಲೆನಾಡು ಬಿಟ್ಟು ಮಹಾನಗರ ಸೇರಲಿಲ್ಲ. ಕಲೆಯೇ ಬದುಕು ಎಂದು ಕೊಳ್ಳದೆ ಜೀವನೋಪಾಯಕ್ಕೆ ಸರ್ಕಾರಿ ನೌಕರನಾಗಿ ಕೆ.ಇ.ಬಿ. ಯಲ್ಲಿ ಅಧಿಕಾರಿಯಾಗಿರುವ ಜಯಕುಮಾರ್ ದಿನವಿಡೀ ಹಸನ್ಮುಖನಾಗಿ ನೌಕರಿಮಾಡುತ್ತಾರೆ. ರಾತ್ರಿ ಸಮಯದಲ್ಲಿ ಹವ್ಯಾಸಿ ಯಕ್ಷಕಲಾವಿದನಾಗಿ ಊರೂರು ತಿರುಗುವ ಜಯಕುಮಾರ್ ಈಗ ಯಕ್ಷಲೋಕದ ಭರವಸೆಯ ಹೆಸರು.
ಹಾಸ್ಯ,ರೌದ್ರ,ಆರ್ಭಟ,ಸ್ತ್ರೀ ಯಾವುದೇ ಪಾತ್ರ ಮಾಡಿದರೂ ಜಯಕುಮಾರ್ ಗಮನಸೆಳೆಯುತ್ತಾರೆ.ಉತ್ತರ ಕನ್ನಡ ದಕ್ಷಿಣ ಕನ್ನಡಗಳ ಹವ್ಯಾಸಿ ತಂಡಗಳಲ್ಲಿ ಖಾಯಂ ಆಗಿ ಪಾತ್ರ ಮಾಡುವ ಜಯಕುಮಾರ್ ಯಾವುದೇ ಪಾತ್ರಕ್ಕೂ ನ್ಯಾಯ ದೊರಕಿಸುವಯುವನಟ ಹಾಸ್ಯ ಪಾತ್ರದ ಜಯಕುಮಾರ್ ಎಂದರೆ ಎಲ್ಲರಿಗೂ ಇಷ್ಟ.ಯಕ್ಷಗಾನವನ್ನು ಕಲೆಯನ್ನಾಗಿ ಆರಾಧಿಸುವ ಜಯಕುಮಾರ ಪ್ರವೃತ್ತಿಯಾಗಿ ಸ್ವೀಕರಿಸಿರುವ ಯಕ್ಷಗಾನ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿದೆ.