


ಸಿದ್ದಾಪುರ
ತಾಲೂಕಿನ ಗಾಳೀಜಡ್ಡಿಯ ಗೆಳೆಯರ ಬಳಗ ಹಾಗೂ ಊರನಾಗರಿಕರ ಸಹಕಾರದೊಂದಿಗೆ ಗಾಳೀಜಡ್ಡಿ ಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗೇಮ್ ಚೇಂರ‍್ಸ್ ಕಪ್-೨೦೨೩ ಹೊನಲು ಬೆಳಕಿನ ಹವ್ಯಕ ಆಹ್ವಾನಿತ ಅಂಡರ್ ಆರ್ಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಸಿಎಲ್ ಕಾನಗೋಡು ಪ್ರಥಮ ಸ್ಥಾನ ಪಡೆದುಕೊಂಡಿದ್ದು ದ್ವಿತೀಯ ಸ್ಥಾನವನ್ನು ಅಂಕೋಲಾ ಹಳವಳ್ಳಿಯ ಟೀಮ ವಿಭಾ ತನ್ನದಾಗಿಸಿಕೊಂಡಿದೆ.
ಪಂದ್ಯಾವಳಿಯಲ್ಲಿ ೧೮ ತಂಡಗಳು ಭಾಗವಹಿಸಿದ್ದವು.
ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿಯನ್ನು ಚಂದನ ಭಟ್ಟ ಹಳವಳ್ಳಿ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಕೃಷ್ಣಮೂರ್ತಿ ಹೆಬ್ಬಾರ ಹಳವಳ್ಳಿ ಹಾಗೂ ಸರಣಿ ಶ್ರೇಷ್ಟ ಪ್ರಸಸ್ತಿಯನ್ನು ಕೆಸಿಎಲ್ ತಂಡದ ಗುರುಪ್ರಸಾದ ಭಟ್ಟ ಪಡೆದುಕೊಂಡರು.
ಟಿಎಸ್‌ಎಸ್‌ನ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ಪಿ.ಎನ್.ಹೆಗಡೆ ಹೂಡೇಹದ್ದ, ಅಶೋಕ ಹೆಗಡೆ ಜಾನಕೈ, ಸಂತೋಷ ಹೆಗಡೆ ಬಾಳೇಹಳ್ಳಿ ಹಾಗೂ ಗಣೇಶ ಹೆಗಡೆ ಕರ್ಕಿಸವಲ್ ಬಹುಮಾನ ವಿತರಿಸಿದರು.
ಉದ್ಘಾಟನೆ:ವಿ.ಮಧುಕೇಶ್ವರ ಭಟ್ಟ ಗಾಳೀಮನೆ ಪಂದ್ಯಾವಳಿ ಉದ್ಘಾಟಿಸಿದರು. ಪ್ರಭಾಕರ ನಾರಾಯಣ ಹೆಗಡೆ ಹೂಡೇಹದ್ದ ಅಧ್ಯಕ್ಷತೆವಹಿಸಿದ್ದರು. ಗೋಪಾಲ ಪರಮೇಶ್ವರ ಹೆಗಡೆ ಕರ್ಕಿಸವಲ್, ಅಶೋಕ ಜಿ.ಹೆಗಡೆ ಹಿರೇಕೈ, ರಾಮಚಂದ್ರ ಹೆಗಡೆ ಮಟ್ಟೆಮನೆ, ಲಕ್ಷಿö್ಮನಾರಾಯಣ ಜಿ.ಹೆಗಡೆ ಮಟ್ಟೆಮನೆ ಉಪಸ್ಥಿತರಿದ್ದರು. ಗಾಳೀಜಡ್ಡಿ ಗೆಳೆಯರ ಬಳಗದ ಪದಾಧಿಕಾರಿಗಳು ಕಾರ್ಯಕ್ರಮ ನಿರ್ವಹಿಸಿದರು.
