


ಶಿರಸಿ ಅಮ್ಮಿನಳ್ಳಿ ಕಾಂಚಾಳ ದ 13 ವರ್ಷಗಳ ವಿದ್ಯಾರ್ಥಿನಿ ತನ್ನ ದೊಡ್ಡಮ್ಮನ ಮನೆಗೆ ಬಂದವಳು ಸಿದ್ಧಾಪುರ ಹಾವಿನಬೀಳು ಹಸಗೋಡು ಗ್ರಾಮದಲ್ಲಿ ಈಜಲು ಹೋಗಿದ್ದಾಗ ಆಕಸ್ಮಿಕವಾಗಿ ಮೃತ ಪಟ್ಟ ಘಟನೆ ಮಂಗಳವಾರ ನಡೆದಿದೆ.
ಬುಧವಾರ ಬೆಳಿಗ್ಗೆ ಧನ್ಯ ಳ ಶವ ಹೊರತೆ ಗೆಯಲಾಗಿದೆ. ಧನ್ಯ ಗೌಡ ಅಘನಾ ಶಿನಿ ನದಿಗೆ ತನ್ನ ಸಂಬಂಧಿ ಗಳೊಂದಿಗೆ ಈಜಲು ತೆರಳಿದ್ದವಳು ಮಂಗಳವಾರ ಮಧ್ಯಾಹ್ನ 3 ಗಂಟೆಯ ಸಮಯಕ್ಕೆ ನೀರಿನಲ್ಲಿ ಮುಳುಗಿ ನಾಪತ್ತೆ ಆಗಿದ್ದಳು.
ಧನ್ಯ ಗೌಡಳ ತಂದೆ ವೆಂಕಟೇಶ್ ಗೌಡ ಶಿರಸಿ ದಿವಗಿ ಫ್ಯಾಕ್ಟರಿ ಉದ್ಯೋಗಿಯಾಗಿದ್ದು ಮಗಳು ಧನ್ಯ ಬೇಸಿಗೆ ರಜೆ ಹಿನ್ನೆಲೆಯಲ್ಲಿ ದೊಡ್ಡಮ್ಮನ ಮನೆ ಹಾವಿನಬೀಳಿಗೆ ಬಂದಿದ್ದಳು.
