


ಗಂಡ ಹೆಂಡತಿ ಜಗಳ ಅವಳಿ ಮಕ್ಕಳನ್ನು ಅನಾಥ ರನ್ನಾಗಿಸುವಲ್ಲಿ ಅಂತ್ಯ ವಾದ ಘಟನೆ ಸಿದ್ಧಾಪುರ ಕಾನ್ಸೂರ್ ನಲ್ಲಿ ನಡೆದಿದೆ. ಕಾನ ಸೂರಿನ ಅನಿಲ್ ನಾಯ್ಕ ವಾಹನ ಚಾಲಕ ನಾಗಿದ್ದು ಅವರ ಪತ್ನಿ ಅವಳಿ ಮಕ್ಕಳ ತಾಯಿ ಇಂದು ಕಾನ ಸೂರಿನಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಮೃತಳು ಸಿಡುಕಿನ ಸ್ವಭಾವದವಳಾಗಿದ್ದು ಮನೆಯಲ್ಲಿಲ್ಲದ ಪತಿಯೊಂದಿಗೆ ಜಗಳವಾಡಿ ಆತ್ಮ ಹತ್ಯೆ ಮಾಡಿಕೊಂಡ ಲೀಲಾವತಿ ಅವಳಿ ಮಕ್ಕಳ ನ್ನು ಅನಾಥ ರನ್ನಾಗಿಸಿದ್ದಾಳೆ. ಸಿದ್ಧಾಪುರ ಹೊಸೂರಿನ ಲೀಲಾವತಿ 2 ವರ್ಷಗಳ ಕೆಳಗೆ ಮದುವೆಯಾಗಿ ಅವಳಿ ಮಕ್ಕಳ ತಾಯಿಯಾಗಿದ್ದಳು.
