

ಸಿದ್ದಾಪುರ : ಜೆ ಡಿ ಎಸ್ ತಾಲೂಕ ಘಟಕ ಕ್ಕೆ ಪದಾಧಿಕಾರಿಗಳ ನೇಮಕ ಮಾಡಿ ತಾಲೂಕ ಅಧ್ಯಕ್ಷ ಸತೀಶ್ ಹೆಗಡೆ ಬೈಲಳ್ಳಿ ಅದೇಶಿಸಿದ್ದಾರೆ
ಜೆಡಿಎಸ್ ತಾಲೂಕ ಉಪಾಧ್ಯಕ್ಷರುಗಳಾಗಿ ನಾಗಪತಿ ಗೌಡ ತಂಡಾಗುಂಡಿ, ಎಂ. ಎಸ್. ನಾಯ್ಕ್ ಬಾಲಿಕೊಪ್ಪ, ಬಿ ಎ ಸಾಬ್ ಸಿದ್ದಾಪುರ, ದೇವರಾಜ್ ತಿಮ್ಮ ನಾಯ್ಕ್ ಮುಂಡಿಗೇತಗ್ಗು, ಮಲ್ಲಿಕಾರ್ಜುನ ಗೌಡ ಕಲ್ಲೂರು,ಅಲಂ ಖಾನ್ ಸಿದ್ದಾಪುರ,ಪ್ರಧಾನ ಕಾರ್ಯದರ್ಶಿಗಳಾಗಿ ಪರಮೇಶ್ವರ. ಎಂ. ಮಡಿವಾಳ ಹಿತ್ತಲಕೊಪ್ಪ,ರಾಜು ಬೊಮ್ಮ ಗೊಂಡ ಅವರಗುಪ್ಪಾ, ಮಾರುತಿ. ಎನ್.ನಾಯ್ಕ್ ಹಂಜಗಿ, ಕಾರ್ಯಧ್ಯಕ್ಷರಾಗಿ ಅಶೋಕ ನಾಯ್ಕ್ ಮೆಣಸಿ, ಕಾರ್ಯದರ್ಶಿಗಳಾಗಿ ದಿನೇಶ ನಾಯ್ಕ್ ಕ್ಯಾದಗಿ,ಶಂಕರ ನಾಯ್ಕ್ ಕಾನ್ಮನೆ,ಗಣಪತಿ ಮಡಿವಾಳ ಕಡಕೇರಿ, ಅಣ್ಣೆಪ್ಪ. ಕೆ. ಗೊಂಡ ಕವಲಕೊಪ್ಪ ಮುಂತಾದವರನ್ನು ನೇಮಕ ಮಾಡಿ ಆದೇಶ ಮಾಡಿದ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ದಾಪುರ : ವಿವಾಹಿತ ಮಹಿಳೆ ಯೋರ್ವಳು ಮಗುವಿನೊಂದಿಗೆ ಕಾಣೆಯಾಗಿದ್ದು
ಹುಡುಕಿಕೊಡುವಂತೆ ಠಾಣೆಯಲ್ಲಿ ದೂರು ದಾಖಲಾಗಿದೆ
ಸುಮಂಗಲ ರಾಘವೇಂದ್ರ ಗೌಡ ( 28) ಕಳಗದ್ದೆ ಐಸೂರು ಕಾಣೆಯಾದ ಮಹಿಳೆಯಾಗಿದ್ದಾಳೆ
ಕಳೆದ 8 ವರ್ಷದ ಹಿಂದೆ ರಾಘವೇಂದ್ರ ವೀರಭದ್ರ ಗೌಡ ನೊಂದಿಗೆ ವಿವಾಹವಾಗಿತ್ತು ಎರಡು ವರ್ಷ ನಂತರ ಗಂಡ ಹೆಂಡತಿ ನಡುವೆ ಆಗಾಗ ಜಗಳ ಮಾಡಿಕೊಳ್ಳುತ್ತಿದ್ದರು ಕಳೆದ 6 ತಿಂಗಳ ಹಿಂದೆ ಸಂಸಾರದಲ್ಲಿ ಬಿರುಕು ಹೆಚ್ಚಾಗಿ ತವರಿಗೆ ಬಂದು ಉಳಿದುಕೊಂಡಿದ್ದಳು ವಿಚ್ಚೆದನಕ್ಕೆ ಅರ್ಜಿ ಹಾಕಲಾಗಿತ್ತು ಏಪ್ರಿಲ್ 8 ರಂದು ಮನೆಯಿಂದ ತನ್ನ 6 ವರ್ಷದ ಮಗುವಿನೊಂದಿಗೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಹುಡುಕಿಕೊಡುವಂತೆ ಠಾಣೆಯಲ್ಲಿ ದೂರು ದಾಖಲಾಗಿದೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
