

ಕುಣುಬಿ ಸಮುದಾಯ ವಾಸಿಸುವ ಆಂಬಾರಗುಡ್ಡ ಕೆಳಗಿನ ದುರ್ಗಮ ರಸ್ತೆ ಸಂಪರ್ಕ ಹೊಂದಿರುವ ಆವಿಗೆ ಕೇರಿಗೆ ಹೋಗುವ ಹೊತ್ತಿಗೆ ರಾತ್ರಿಯಾಗಿತ್ತು.

ಅವರು ಕಾಯುತ್ತಲೆ ಇದ್ದರು. ಒಂದಿಷ್ಟು ಹೊತ್ತು ಮಾತುಕತೆ ನಡೆಸಿದಾಗ ” ಜೈವಿಕ ವೈವಿಧ್ಯ ವಲಯ ಘೋಷಣೆ ಹಿನ್ನೆಲೆಯಲ್ಲಿ ತಮ್ಮ ಪಾರಂಪರಿಕ ಹಕ್ಕಿನ ಜತೆ ಕಂದಾಯ ಭೂಮಿಯನ್ನೂ ಅರಣ್ಯ ವೆಂದು ಘೋಷಣೆ ಮಾಡಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಮತದಾನ ಬಹಿಷ್ಕಾರ ನಿರ್ಧಾರ ತಿಳಿಸಿ ಜತೆ ಆಗಬೇಕು ಎಂದು ಕೋರಿದರು.
ಅವರಿಗೇ ಈ ಅನಂತ ಹೆಗಡೆ ಆಸಿಸರ ಬಗ್ಗೆ ಎಲ್ಲಾ ಗೊತ್ತಿಲ್ಲಾ. ಆ ಯಪ್ಪ ಅಂಬಾರಗುಡ್ಡ ತಪ್ಪಲಿನ 3850 ಎಕರೆ ಮಾತ್ರವಲ್ಲ ಶಿವಮೊಗ್ಗ ಜಿಲ್ಲೆಯಲ್ಲಿ 1.50 ಲಕ್ಷ ಏಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆ ಹಸ್ತಾಂತರ ಮಾಡುವ ಮಲೆನಾಡಿನ ರೈತರಿಗೇ ಮರಣ ಶಾಸನವಾಗಿಸಿದ ನೀತಿ ಬಗ್ಗೆ ಗೊತ್ತಿಲ್ಲ. ಅಲ್ಲಿ ಹೆಚ್ಚಿನವರು ದೀವರು, ಕುಣುಬೀ, ಹಸಲರು, ಜೈನ ಸಮುದಾಯದವರು ಹೆಚ್ಚು ವಾಸಿಸುತಾ ಇದ್ದಾರೆ ಏನ್ನುವ ಸಾಮಾಜಿಕ ಅಂಕಿ ಅಂಶವೂ ಗೊತ್ತಿದ್ದಂತೆ ಇಲ್ಲ.
ಅವರ ಮಾತು ನೆಲದ ಮಕ್ಕಳ ನೋವಿನ ಮಾತಾಗಿತ್ತು.
ಎಲ್ಲವನ್ನೂ ಆಲಿಸಿಕೊಂಡು ಬರುವಾಗ ಜತೆ ಇದ್ದ ಶಿಷ್ಯರು ಕುಣುಬೀ ಸಮುದಾಯದವರ ಬದುಕು ಹಿನ್ನೆಲೆ ಬಗ್ಗೆ ವಿಚಾರಿಸಿ ತಿಳಿದುಕೊಂಡರು. “ಇವರನ್ನು ಎಸ್ ಟಿ ಸಮುದಾಯ ಸೇರಿಸಬೇಕಿತ್ತು. ಹಾಗೆ ಸೇರಿದ್ದರೆ ಇವರಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಭೂ ಮಂಜೂರಾತಿ ಅವಕಾಶ ಇತ್ತು” ಎನ್ನುವ ಮಾತುಗಳೆಲ್ಲ ನಮ್ಮ ನಡುವೆ ಚರ್ಚೆ ಆಯ್ತು.
ಹಾಗೆ ನಡೆದು ಬರುವಾಗ ಮತ್ತು ಕಾರಿನಲ್ಲಿ ಜತೆ ಇದ್ದ ಶಿಷ್ಯರಿಗೆ ದೇಶದ ಸಂವಿಧಾನ ಮತ್ತು ಅಂಬೇಡ್ಕರ್, ಜೈನ ಮತ್ತು ಬೌದ್ಧ ಧರ್ಮಗಳ ಬಗ್ಗೆ ಮಾತುಕತೆ ನಡೆಸಿದೆವು.
ಅಂಬೇಡ್ಕರ ಹುಟ್ಟಿದ ದಿನದಂದು ಪುಟ್ಟ ಪಾಠ ಮತ್ತು ಸಂವಾದ ನಡೆದು ಹೋಯಿತು.
ಇಷ್ಟು ಈ ಕ್ಷಣದ ಮಾತು.
ಜಿ. ಟಿ ತುಮರಿ.
ವಿತ್ Ganesh Jaki, Madhukar Devadiga Chethan Jain , Bhaskar Sagar ಪ್ರಶಾಂತ ಬಯನೇಮನೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
