ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್, ಮೋದಿ, ಯೋಗಿ ಸೇರಿ 40 ಮಂದಿಗೆ ಅವಕಾಶ: ಪಟ್ಟಿಯಲ್ಲಿಲ್ಲ ಕಿಚ್ಚ ಸುದೀಪ್ ಹೆಸರು
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಬಿಜೆಪಿ ಹೈಕಮಾಂಡ್ 40 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಸ್ಟಾರ್ ಪ್ರಚಾರಕರ ಪಟ್ಟಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ,ಈಶ್ವರಪ್ಪ, ಶ್ರೀರಾಮುಲು ಪ್ರಹಲ್ಹಾದ ಜೋಷಿ, ಜಗ್ಗೆಶ್,ತಾರಾ,ಶೃತಿ ಸೇರಿದಂತೆ ಒಟ್ಟೂ 40 ಜನರ ಹೆಸರಿದೆ. ಆಪಟ್ಟಯಲ್ಲಿ ಸ್ಟಾರ್ ಪ್ರಚಾರಕ ಅತಿಥಿ ಸುದೀಪ್ ಮತ್ತು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮತ್ತು ಸಂಸದ ಅನಂತಕುಮಾರ್ ಹೆಗಡೆ ಹೆಸರಿಲ್ಲ. ಬಿ.ಜೆ.ಪಿ.ಯ ಬಿ.ಎಲ್. ಸಂತೋಷರ ಹೊಸ ಟೀಮ್ ನಲ್ಲಿ ಸುರೇಶ್ ಕುಮಾರ,ವಿಶ್ವೇಶ್ವರ ಹೆಗಡೆ ಕಾಗೇರಿ, ಅನಂತಕುಮಾರ ಹೆಗಡೆ ಸೇರಿದಂತೆ ಕೆಲವು ಪ್ರಮುಖರು ಇಲ್ಲದಿರುವುದು ಚರ್ಚೆಯ ವಿಷಯವಾಗಿದೆ.