ಜಾತಿ,ಧರ್ಮ ಪ್ರೇರಿತ ರಾಜಕಾರಣದಿಂದ ಯಾರಿಗೂ ಶ್ರೇಯಸ್ಸು ದೊರೆಯುವುದಿಲ್ಲ ಎಂದು ಪ್ರತಿಪಾದಿಸಿರುವ ಜಾತ್ಯಾತೀತ ಜನತಾದಳದ ಶಿರಸಿ ಕ್ಷೇತ್ರದ ಅಭ್ಯರ್ಥಿ ಉಪೇಂದ್ರ ಪೈ ಜಾತ್ಯಾತೀತವಾಗಿ, ಧರ್ಮರಾಜಕಾಣ ಮಾಡದೆ ಈ ಬಾರಿ ಚುನಾವಣೆ ಗೆದ್ದು ತೋರಿಸುತ್ತೇವೆ ಎಂದಿದ್ದಾರೆ.
ಸಿದ್ಧಾಪುರದಲ್ಲಿ ಜೆ.ಡಿ.ಎಸ್. ಚುನಾವಣಾ ಕಾರ್ಯಾಲಯದಲ್ಲಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾವು ರೈತ ಪರ ರಾಜಕಾರಣ ಮಾಡುತ್ತೇವೆ. ನಮ್ಮ ಪ್ರತಿಸ್ಫರ್ಧಿಗಳು ಜಾತಿರಾಜಕಾರಣ ಮಾಡುತಿದ್ದಾರೆ. ಸಂದರ್ಭ ಬಂದರೆ ಜಾತಿ ರಾಜಕಾರಣ ಮಾಡುತ್ತಿರುವವರ್ಯಾರು ಎಂಬುದನ್ನು ಬಹಿರಂಗಪಡಿಸುತ್ತೇವೆ ಎಂದು ಎಚ್ಚರಿಸಿದರು.
ಸಮಾಜಸೇವೆಯಿಂದ ನಾವು ರಾಜಕಾರಣಕ್ಕೆ ಬಂದಿದ್ದೇವೆ. ಈ ಹಿಂದೆ ೪ವರ್ಷಗಳ ವರೆಗೆ ಪಕ್ಷದ ಚಟುವಟಿಕೆ ಮಾಡದೆ ಅಭ್ಯರ್ಥಿಗಳು ಚುನಾವಣೆಗೆ ಬರುತಿದ್ದರು. ಈಗ ಪಕ್ಷವನ್ನು ಪುನರ್ ಸಂಘಟಿಸುವ ಮೂಲಕ ನಾವು ಹೊಸ ಪ್ರಯೋಗದೊಂದಿಗೆ ಹೊಸ ಮುಖ ಗೆಲ್ಲಿಸುತ್ತೇವೆ ಎಂದರು.
ಬೆಟ್ಟ ಭೂಮಿ ವಿಚಾರವಿರಲಿ,ಮೂಲಭೂತ ಸಮಸ್ಯೆಗಳಿರಲಿ ಎಲ್ಲದಕ್ಕೂ ಮಾತಿನಲ್ಲಿ ಪರಿಹಾರ ಸಾಧ್ಯವಿಲ್ಲ ೩೦ ವರ್ಷ ಜನಪ್ರತಿನಿಧಿಗಳಾದವರಿಗೆ ಸ್ಥಳೀಯ ಸಮಸ್ಯೆ ಅರ್ಥವಾಗದೆ ಪುಕ್ಕಟ್ಟೆ ಮಾತು,ಭರವಸೆಗಳಿಂದ ಚುನಾವಣೆ ಗೆಲ್ಲುವ ದುಸ್ಥಿತಿ ಬರಬಾರದು ಎಂದು ಪರೋಕ್ಷವಾಗಿ ಶಾಸಕ ವಿಶ್ವೇಶ್ವರ ಹೆಗಡೆಯವರನ್ನು ತಿವಿದರು.