.ಡಾಲ್ಫಿನ್ ಕ್ರಿಕೆಟ್ ಕ್ಲಬ್ ಹಾಗೂ ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಕ್ರಿಕೆಟ್ ತರಬೇತಿ ಶಿಬಿರ ಉದ್ಘಾಟನೆ…..ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ…..
ಸಿದ್ದಾಪುರ .. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ದೇಹವು ಉತ್ತಮ ವ್ಯಾಯಾಮದ ಜೊತೆಗೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇದು ಮನುಷ್ಯನನ್ನು ಆತ್ಮವಿಶ್ವಾಸ ಮತ್ತು ಪ್ರಗತಿಪರರನ್ನಾಗಿ ಮಾಡುತ್ತದೆ ಎಂದು ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವಿನಾಯಕ ಎಸ.ಶೇಟ್ ಹಾಗೂ ಉದ್ಯಮಿ ಸದಾಶಿವ ಬಿ. ನಾಯ್ಕ್ ಅಭಿಪ್ರಾಯಪಟ್ಟರು. ಅವರು ಸಿದ್ದಾಪುರದ ತಾಲೂಕ ಕ್ರೀಡಾಂಗಣದಲ್ಲಿ ತಾರೀಖಿನಂದು ನಡೆದ ಡಾಲ್ಫಿನ್ ಕ್ರಿಕೆಟ್ ಕ್ಲಬ್ ಹಾಗೂ ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಬೇಸಿಗೆ ಕ್ರಿಕೆಟ್ ಶಿಬಿರವನ್ನು ಜಂಟಿಯಾಗಿ ಉದ್ಘಾಟಿಸಿ ಮಾತನಾಡಿದರು.
ಸಿದ್ದಾಪುರದ ಸಮಾನ ಮನಸ್ಕರು ಸೇರಿ ಸ್ಪೋರ್ಟ್ಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದು ಎಂಟು ವಿವಿಧ ಕ್ರೀಡಾ ತರಬೇತಿ ಶಿಬಿರವನ್ನು ಏರ್ಪಡಿಸಿದ್ದೇವೆ.ಇದರ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದರು. ಮುಖ್ಯ ಅತಿಥಿ ಉದ್ಯಮಿ, ಸ್ಪೋರ್ಟ್ಸ್ ಅಕಾಡೆಮಿಯ ಕೋಶಾಧ್ಯಕ್ಷ ಸುದರ್ಶನ್ ಪಿಳ್ಳೆ ಮಾತನಾಡಿ ಎಲ್ಲರ ಸಹಕಾರದಿಂದ ನೂತನವಾಗಿ ಕ್ರಿಕೆಟ್ ಶಿಬಿರವನ್ನು ಏರ್ಪಡಿಸಿದ್ದು ಇದಕ್ಕೆ ಎಲ್ಲರೂ ಭಾಗಿಯಾಗಿ ಉತ್ತಮ ತರಬೇತಿ ಪಡೆದು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲಾ, ರಾಜ್ಯ,ರಾಷ್ಟ್ರಮಟ್ಟದವರೆಗೂ ಬೆಳೆಯಲಿ ಎಂದು ಶುಭ ಹಾರೈಸಿದರು.
ರಾಜ್ಯಮಟ್ಟದ ಕ್ರಿಕೆಟ್ ತರಬೇತುದಾರ, ಅಕಾಡೆಮಿಯ ನಿರ್ದೇಶಕ ಡೊಮಿನಿಕ್ ಫರ್ನಾಂಡಿಸ್ ಮಾತನಾಡಿ ಈ ಕ್ರಿಕೆಟ್ ಶಿಬಿರ ಸಿದ್ದಾಪುರದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಪ್ರಾರಂಭಿಸಿದ್ದು ಎಲ್ಲಾ ಪಾಲಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸದ ಜೊತೆಗೆ ರಜಾ ದಿನಗಳಲ್ಲಿ ಕ್ರಿಕೆಟ್ ಶಿಬಿರಕ್ಕೆ ಪಾಲ್ಗೊಂಡು ಉತ್ತಮ ಕ್ರೀಡಾಪಟುವಾಗಿ ಆಗಲು ತಮ್ಮೆಲ್ಲರ ಸಹಕಾರ ಅತ್ಯವಶ್ಯ ಎಂದರು.ಡಾಲ್ಫಿನ್ ಕ್ರಿಕೆಟ್ ಕ್ಲಬ್ ನಿರ್ದೇಶಕ ರಘುವೀರ್ ನಾಯಕ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಮೇ ತಿಂಗಳು ಸಂಪೂರ್ಣ ತರಬೇತಿ ನೀಡಲಾಗುವುದು ಹಾಗೂ ಶಿಬಿರದ ಕುರಿತು ವಿವರಿಸಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಅಕಡೆಮಿಯ ಕಾರ್ಯದರ್ಶಿ ನಂದನ್ ಬೋರ್ಕರ್,ಪ್ರಶಾಂತ್ ಡಿ.ಶೇಟ,
ದರ್ಶನ್ ಡಿ ರೇವಣಕರ್, ನಾಗೇಶ ಶಾಮೈನ, ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.