ರಾಹುಲ್‌ ದೇವಳದ ಒಳಗೆ ಹೋಗದಿರುವುದೇ ತಪ್ಪು!

ಮೀನು‌ ಮುಟ್ಟಿರುವ ಕಾರಣಕ್ಕೆ ದೇವಸ್ಥಾನದೊಳಗೆ ಪ್ರವೇಶ ಮಾಡುವುದಿಲ್ಲ ಎನ್ನುವ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ವರು ಮಾತ್ರವಲ್ಲ ನಮ್ಮ ಜಾತ್ಯತೀತ, ಪ್ರಗತಿಪರ, ಪುರೋಗಾಮಿ ಸಮುದಾಯ ಕೂಡಾ ಕೊಂಡಾಡತೊಡಗಿದೆ.

‘ ಬಿಜೆಪಿಯವರ ಬಾಯಿಮುಚ್ಚಿಸಿದ ಇದೊಂದು ಅದ್ಭುತ ಕಾರ್ಯತಂತ್ರ’ ಎಂದೆಲ್ಲ ವ್ಯಾಖ್ಯಾನಿಸಲಾಗುತ್ತಿದೆ.

ಇದು ನಮ್ಮ ಮೆದುಳಿಗೆ ಮೆತ್ತಿಕೊಂಡಿರುವ ಮಡಿ-ಮೈಲಿಗೆಯ ಮೆದು ಹಿಂದುತ್ವಕ್ಕೆ ಸಾಕ್ಷಿ.

ಇದರಿಂದ ನಮ್ಮನ್ನು

ನಾವೇ ಹೇಗೆ ತುಚ್ಚೀಕರಿಸಿಕೊಳ್ಳುತ್ತಿದ್ದೇವೆ, ನಮ್ಮ ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯದ ಬಗ್ಗೆ ಎಂತಹ ಕೀಳರಿಮೆ ಬೆಳೆಸಿಕೊಂಡಿದ್ದೇವೆ ಎನ್ನುವುದು ಜಾಹೀರಾಗಿದೆ.

ಯಾರೋ ವೈದಿಕರು ಸ್ಥಾಪಿಸಿದ ದೇವಸ್ಥಾನವಾಗಿದ್ದರೆ ಬೇರೆ ಮಾತು, ಉಚ್ಚಿಲದ ಮಹಾಲಕ್ಷ್ಮಿ ದೇವಸ್ಥಾನ ಜಾತಿ‌ ಕಾರಣಕ್ಕೆ ಪ್ರವೇಶ ಇಲ್ಲದ ಮೊಗವೀರ ಬಂಧುಗಳು ಕಟ್ಟಿರುವ ದೇವಸ್ಥಾನ. ಅಲ್ಲಿನ ಮಹಾಲಕ್ಷ್ಮಿಯ ಕೊರಳಲ್ಲಿ ಚಿನ್ನದ ಬೂತಾಯಿ- ಬಂಗುಡೆಯ‌ ಸರಗಳಿವೆ. ಮೀನು-ಮಾಂಸ ತಿಂದು ಪ್ರವೇಶ ಮಾಡಬಾರದೆಂದು ಅಲ್ಲಿ ನಿಷೇಧವೂ ಇಲ್ಲ.

ಹೀಗಿರುವಾಗ ರಾಹುಲ್ ಅವರನ್ನು ಸುತ್ತುವರಿದಿದ್ದ ನಾಯಕರಲ್ಲಿ ಯಾರಾದರೂ ಬುದ್ದಿವಂತರಿದ್ದಿದ್ದರೆ ಕನಿಷ್ಠ ದೇವಸ್ಥಾನದ ಮುಖ್ಯಸ್ಥರನ್ನು ‘ ‘ಮೀನು ಮುಟ್ಟಿದವರು ಒಳಗೆ ಪ್ರವೇಶಿಸಬಹುದಾ?’ ಎಂದಾದರೂ ಕೇಳಬಹುದಿತ್ತು.

ರಾಹುಲ್ ಗಾಂಧಿಯವರ ಸುತ್ತ ಇದ್ದ ಇಂತಹ ಮನಸ್ಸುಗಳೇ ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ಅವರಿಗೆ ಜನಿವಾರ ಹಾಕಿಸಿ ಗೋತ್ರ ಹೇಳಿಸಿದ್ದು. ಇದೇ ಮನಸ್ಸುಗಳು ಮೀನು ತಿಂದು ದೇವಸ್ಥಾನಕ್ಕೆ ಹೋಗುವುದು ತಪ್ಪು ಎಂದು ವಾದಿಸುವುದು.

ಓರ್ವ ಮೊಗವೀರ ಮಹಿಳೆಯಿಂದ ಮೀನುಡುಗೊರೆ ಮಾಡಿಸಿ ವೃತ್ತಿಗೌರವವನ್ನು ಎತ್ತಿಹಿಡಿಯುವಂತೆ ಮಾಡಿದ ಶೂದ್ರ ಮನಸ್ಸು, ಮೀನು‌ಮುಟ್ಟಿದವರು ದೇವಸ್ಥಾನದೊಳಗೆ ಪ್ರವೇಶದ ಪ್ರಶ್ನೆ ಎದುರಾದಾಗ‌ ದಿಡೀರನೇ ವೈದಿಕ‌ಮನಸ್ಸಾಗಿ ಪರಿವರ್ತನೆಯಾಗಿದ್ದರಲ್ಲಿಯೇ ಈ ಕಾಲದ ದುರಂತ ಇದೆ.

ನಮ್ಮ ಮಲಿನಗೊಂಡ ಮೆದುಳು ತೊಳೆಯಲು ಸಮುದ್ರದ ನೀರು‌ಕೂಡಾ ಕಮ್ಮಿಯಾದರೂ ಆಶ್ಚರ್ಯ ಇಲ್ಲ.

ನಮ್ಮ ಕುಟುಂಬದ ದೈವಕ್ಕೆ ವರ್ಷಕ್ಕೊಮ್ಮೆ ನಡೆಯುವ ಪೂಜೆಗೆ ಒಂದು ಕ್ವಾರ್ಟರ್ ಸಾರಾಯಿ‌ಮತ್ತು ಚಕ್ಕುಲಿ‌ ಕೊಡಲೇಬೇಕು. ಹಿಂದೆ ನಮ್ಮ‌ ಅಮ್ಮ ಈಗ ನಮ್ಮ‌ಅಕ್ಕ‌ಅದನ್ನು ಕೊಟ್ಟು ಕೈಮುಗಿದು ಬರ್ತಾರೆ.‌ ಹೀಗಾಗಿ ನಾವೆಲ್ಲ ಸುಖ-ಸಂತೋಷದಿಂದ ಇದ್ದೇವೆ.

ಉಳಿದದ್ದನ್ನು (ದಿನೇಶ್‌ ಅಮೀನ್‌ ಮಟ್ಟು)

Naveen Soorinje ಬರೆದಿದ್ದಾರೆ ಓದಿ:

“ಮೀನು ಹಿಡಿಯುವವರಿಗೆ ದೇವಸ್ಥಾನ ಪ್ರವೇಶ ಇಲ್ಲ” ಎಂಬ ಸಾಮಾಜಿಕ ಬಹಿಷ್ಕಾರವನ್ನು ಪ್ರತಿಭಟಿಸಿ, ಮೊಗವೀರರೇ ನಿರ್ಮಿಸಿದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದೊಳಗೆ ಮೀನು ಹಿಡಿದೆನೆಂಬ ಕಾರಣಕ್ಕೆ ರಾಹುಲ್ ಗಾಂಧಿ ಖುದ್ದು ಪ್ರವೇಶ ನಿರಾಕರಿಸಿದ್ದು ಅಪಾಯಕಾರಿ ಮೂರ್ಖತನದ ನಡೆ‌.

ನಾನು ಮೀನು ಮುಟ್ಟಿರುವುದರಿಂದ ಉಚ್ಚಿಲ ದೇವಸ್ಥಾನದೊಳಗೆ ಹೋಗುವುದಿಲ್ಲ ಎಂದು ರಾಹುಲ್ ಗಾಂಧಿಯವರು ದೇವಸ್ಥಾನ ಪ್ರವೇಶ ನಿರಾಕರಿಸಿರುವ ನಡೆಯನ್ನು ಹೊಗಳಲಾಗುತ್ತಿದೆ. “ಮೀನು ತಿಂದು ದೇವಸ್ಥಾನದೊಳಗೆ ಹೋದ್ರೆ ತಪ್ಪೇನು ? ಮೀನು ತಿಂದು ಬರಬೇಡಿ ಎಂದು ದೇವರು ಹೇಳಿದ್ದಾನಾ ? ಎಂದು ಕೇಳಿದ್ದ ಸಿದ್ದರಾಮಯ್ಯನವರು ರಾಹುಲ್ ಗಾಂಧಿಯಿಂದ ಕಲಿಯಬೇಕಿದೆ” ಎಂದು ಚರ್ಚೆಗಳು ನಡೆಯುತ್ತಿದೆ. ಬೇರೆ ದೇವಸ್ಥಾನಗಳ ಕತೆ ಪಕ್ಕಕ್ಕಿಡೋಣಾ. ರಾಹುಲ್ ಗಾಂಧಿ ತಾನು ಮೀನು ಮುಟ್ಟಿದ್ದೇನೆ ಎಂಬ ಕಾರಣಕ್ಕಾಗಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದೊಳಗೆ ಪ್ರವೇಶವನ್ನು ತಾನೇ ಖುದ್ದು ನಿರಾಕರಿಸಿದ್ದು ದೇವಸ್ಥಾನದ ಸಾಂಸ್ಕೃತಿಕ, ಸಾಮಾಜಿಕ ಹಿನ್ನಲೆ ತಿಳಿಯದಿರುವ ಮೂಢತನವಷ್ಟೆ.

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನವೇ ಮೀನು ಹಿಡಿಯುವ ಮೊಗವೀರರದ್ದು. ಈ ದೇವಸ್ಥಾನದ ಪ್ರತೀ ಕಲ್ಲು ಕಲ್ಲಿನಲ್ಲೂ ಮೊಗವೀರರ ಕಡಲುಪ್ಪಿನ ಬೆವರ ಪರಿಮಳವಿದೆ. ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿರುವ ಪ್ರತೀ ನೋಟು, ನಾಣ್ಯದಲ್ಲೂ ಕಡಲಲ್ಲಿರುವ ಅಷ್ಟೂ ಮೀನುಗಳ ಘಮವಿದೆ. ಉಚ್ಚಿಲ ಮಹಾಲಕ್ಷ್ಮಿ ದೇವಿಗೆ ಪ್ರೀಯವಾಗಿರುವ ಕಾಪು ಮಲ್ಲಿಗೆಯಂತೂ ಮೀನಿನದ್ದೇ ಕಂಪು ಸೂಸುತ್ತದೆ. ಇದ್ಯಾವುದೂ ಕೂಡಾ ಹಸಿ ಮೀನಿನ ಪರಿಮಳ ಬಂದಿಲ್ಲ ಎಂದಾದರೆ ಉಚ್ಚಿಲ ಮಹಾಲಕ್ಷ್ಮಿ ದೇವಿಯು ಮೊಗವೀರರಲ್ಲಿ ಮುನಿಸಿದ್ದಾಳೆ ಎಂದರ್ಥ. ಯಾಕೆಂದರೆ ಮೊಗವೀರರು ಒಳ್ಳೆ ಮೀನುಗಾರಿಕೆ, ಮೀನಿನ ಉತ್ತಮ ವ್ಯಾಪಾರ, ಮೀನಿನ ದೋಣಿಗಳ ಸಂಪತ್ತಿಗಾಗಿ ಹೊತ್ತುಕೊಂಡ ಹರಕೆಗಳು ಫಲಿಸಿದರೆ ಮೀನು ಹಿಡಿದ, ಮೀನು ಮಾರಿದ ಕೈಯ್ಯಲ್ಲೇ ಹರಕೆ ತೀರಿಸುತ್ತಾರೆ. ಕಾಣಿಕೆ ಡಬ್ಬಿಯಲ್ಲಿ, ಮಲ್ಲಿಗೆಯಲ್ಲಿ ಮೀನಿನ ಘಮಲು ಇಲ್ಲವೆಂದರೆ ಮೊಗವೀರರ ಮೀನು ಉಧ್ಯಮ ಕ್ಷೀಣಿಸಿದೆ ಎಂದರ್ಥ. ಇಂತಹ ದೇವಿಗೆ ಮೀನು ಹಿಡಿದ ಕೈಯ್ಯಲ್ಲಿ ರಾಹುಲ್ ಗಾಂಧಿ ನಮಿಸಿದ್ದರೆ ಉಚ್ಚಿಲ ಮಹಾಲಕ್ಷ್ಮಿ ದೇವಿಗೆ ಅದೆಷ್ಟು ಖುಷಿಯಾಗುತ್ತಿತ್ತು…

ಮೀನು ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂಬ ನಿಯಮ ಮೀನೇ ಮುಖ್ಯ ಆಹಾರವಾಗಿರುವ ಕರಾವಳಿಯಲ್ಲಿ ಇಲ್ಲ. ಧರ್ಮಸ್ಥಳಕ್ಕೆ ಮೀನು ತಿಂದು ಸಿದ್ದರಾಮಯ್ಯ ಹೋದಾಗ ಖುದ್ದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯೇ ಸುದ್ದಿಗೋಷ್ಠಿ ನಡೆಸಿ “ಮೀನು ತಿಂದು ಬರಬಾರದು ಎಂಬ ನಿಯಮ ಧರ್ಮಸ್ಥಳ ದೇವಸ್ಥಾನದಲ್ಲಿ ಇಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದರು. ಮೀನು ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂಬುದು ಕೋಮುವಾದಿ ವೈದಿಕರ ಹೊಸ ಪಿತೂರಿಯಷ್ಟೆ. ಈಗ ಮೀನು ಹಿಡಿದವರೂ ದೇವಸ್ಥಾನಕ್ಕೆ ಹೋಗಬಾರದು ಎಂಬ ನರೇಟಿವ್ ಅನ್ನು ಸೃಷ್ಟಿಸುವುದು ಅದಕ್ಕಿಂತಲೂ ಅಪಾಯಕಾರಿ ನಡೆ. ಕುರಿ ತಿಂದು ದೇವಸ್ಥಾನಕ್ಕೆ ಹೋಗಬಾರದು ಎನ್ನುವ ಮಡಿವಂತಿಕೆಯ ಮುಂದುವರಿದ ಭಾಗವಾಗಿ ಕುರಿ ಸಾಕುವವರು/ಮುಟ್ಟಿದವರು ದೇವಸ್ಥಾನಕ್ಕೆ ಬರಬಾರದು ಎಂಬ ನಿಯಮ ಸೃಷ್ಟಿಸಬಹುದು. ಒಟ್ಟಾರೆ ಕಾರ್ಮಿಕ ಶೂದ್ರರನ್ನು ಬಹಿಷ್ಕರಿಸುವ ವ್ಯವಸ್ಥಿತ ಪಿತೂರಿಗೆ ಇಂತಹ ಅತಿ ಬುದ್ದಿವಂತಿಕೆಯ ನಡೆಗಳು ನೀರೆರೆಯುತ್ತದೆ.

ಮೀನು ಹಿಡಿದವರು ದೇವಸ್ಥಾನ ಪ್ರವೇಶಿಸಬಾರದು ಎಂಬ ಸಾಮಾಜಿಕ ಬಹಿಷ್ಕಾರವನ್ನು ಪ್ರತಿಭಟಿಸಿಯೇ ಮೊಗವೀರರು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನವನ್ನು 1957 ರಲ್ಲಿ ಸ್ಥಾಪಿಸಿದರು. ಬಾರ್ಕೂರು ದೇವಳದಲ್ಲಿ ಪ್ರವೇಶವಿಲ್ಲದ ಕಾರಣ ತಣ್ಣನೆಯ ಧಾರ್ಮಿಕ ಬಂಡಾಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಮೊಗವೀರರಿಗೆ ಅನುಕೂಲವಾಗುವಂತೆ ಮೊಗವೀರರು ಉಚ್ಚಿಲದಲ್ಲಿ ಸುಮಾರು 18 ಎಕರೆ ಭೂಮಿಯನ್ನು ಖರೀದಿಸಿ ಭವ್ಯವಾದ ದೇವಸ್ಥಾನ ನಿರ್ಮಿಸಿದರು. ಇಂತಹ ಬಂಡಾಯದ, ಕ್ರಾಂತಿಯ ಐತಿಹಾಸಿಕ, ಮೀನು ಹಿಡಿವವರ ಅಧಿದೇವತೆ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ “ಮೀನು ಹಿಡಿದೆನೆಂದು” ಪ್ರವೇಶಿಸದಿರುವ ರಾಹುಲ್ ಗಾಂಧಿ ನಿರ್ಧಾರ ಅಪಾಯಕಾರಿ ಮೂಢತನ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *