’45’ ಮನರಂಜನಾತ್ಮಕ ಸಿನಿಮಾ, ಇಂಟ್ರಸ್ಟಿಂಗ್ ವಿಷಯ ರಿವೀಲ್ ಮಾಡಿದ ಶಿವಣ್ಣ
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ 45 ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ಪ್ರಾರಂಭವಾಯಿತು. ಚಿತ್ರರಂಗದ ಪ್ರಮುಖ ಕಲಾವಿದರು, ತಂತ್ರಜ್ಞರು, ಗಣ್ಯರು ಪಾಲ್ಗೊಂಡಿದ್ದ ಮುಹೂರ್ತದಲ್ಲಿ ಚಿತ್ರೀಕರಣದ ಮೊದಲ ಶಾಟ್‌ಗೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡಿದರು.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ 45 ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ಪ್ರಾರಂಭವಾಯಿತು. ಚಿತ್ರರಂಗದ ಪ್ರಮುಖ ಕಲಾವಿದರು, ತಂತ್ರಜ್ಞರು, ಗಣ್ಯರು ಪಾಲ್ಗೊಂಡಿದ್ದ ಮುಹೂರ್ತದಲ್ಲಿ ಚಿತ್ರೀಕರಣದ ಮೊದಲ ಶಾಟ್‌ಗೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡಿದರು.
ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ, 45 ಚಿತ್ರಕ್ಕೆ ಅರ್ಜುನ್ ಕಥೆ ಬರೆದಿದ್ದಾರೆ, ಅವರು ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ಸತ್ಯ ಹೆಗಡೆ ಛಾಯಾಗ್ರಹಣ, ಎಂ ಪ್ರಕಾಶ್ ಸಂಕಲನ ಮತ್ತು ಅನಿಲ್ ಕುಮಾರ್ ಸಂಭಾಷಣೆಯನ್ನು ಬರೆಯಲಿದ್ದಾರೆ.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್ , ಇದೊಂದು ಚಿಂತನೆಗೆ ಪ್ರೇರೇಪಿಸುವ ಮನರಂಜನಾ ಸಿನಿಮಾ ಎಂದಿದ್ದಾರೆ. “ಕಳೆದ ವರ್ಷದಿಂದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅರ್ಜುನ್ ಜನ್ಯ ಕಥೆಯನ್ನು ಹೇಳಿದ್ದಲ್ಲದೆ ಸಿನಿಮಾದ ಅನಿಮೇಷನ್ ಕೂಡ ಪ್ರದರ್ಶಿಸಿದರು, ಇದರಿಂದ ನಾನು ತುಂಬಾ ಪ್ರೇರೇಪಿತನಾದೆ ಎಂದು ಹೇಳಿದ್ದಾರೆ.
ನಾನು 45 ಸಿನಿಮಾ ಬಗ್ಗೆ ಉತ್ಸುಕನಾಗಿದ್ದೇನೆ ಮತ್ತು ಕುತೂಹಲದಿಂದ ಇದ್ದೇನೆ ಎಂದು ರಾಜ್ ಬಿ ಶೆಟ್ಟಿ ಹೇಳಿದರು. ಪ್ರತಿಷ್ಠಿತ ಕಲಾವಿದರು ಮತ್ತು ತಂತ್ರಜ್ಞರ ಜೊತೆಯಲ್ಲಿ ನಟಿಸಲು ನನಗೆ ಹೆಮ್ಮೆಯಾಗುತ್ತಿದೆ. ಈ ಚಿತ್ರದಲ್ಲಿ ನಾನು ಬೋಲ್ಡ್ ಹುಡುಗಿ ಪಾತ್ರವನ್ನು ನಿರ್ವಹಿಸುತ್ತಿರುವುದಕ್ಕೆ ಥ್ರಿಲ್ ಆಗಿದ್ದೇನೆ ಎಂದು ನಟಿ ಕೌಸ್ತುಭ ಮಣಿ ತಿಳಿಸಿದ್ದಾರೆ.
ಪ್ರಾಜೆಕ್ಟ್‌ಗೆ ಹಸಿರು ನಿಶಾನೆ ತೋರಿ ಮಾತನಾಡಿದ ನಿರ್ಮಾಪಕ ರಮೇಶ್ ರೆಡ್ಡಿ, ಅರ್ಜುನ್ ಜನ್ಯ ಅವರ ಕಥೆ ಮತ್ತು ಚಿತ್ರದ ಪರಿಕಲ್ಪನೆ ತೋರಿಸಲು ಅನಿಮೇಷನ್ ಬಳಸಿದ ರೀತಿಯಿಂದ ನಾನು ಪ್ರಭಾವಿತನಾಗಿದ್ದೇನೆ. ನಿರೀಕ್ಷೆಗೂ ಮೀರಿ ಚಿತ್ರ ಮೂಡಿಬರಲಿದೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.
ನಾವು ಈಗ ಚಿತ್ರೀಕರಣವನ್ನು ಪ್ರಾರಂಭಿಸುತ್ತಿದ್ದರೂ, ನಾವು ಸುಮಾರು ಒಂಬತ್ತು ತಿಂಗಳಿನಿಂದ ಪ್ರಿ-ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅರ್ಜುನ್ ಜನ್ಯ ತಿಳಿಸಿದ್ದಾರೆ, ಶಿವಣ್ಣನವರ ಪ್ರೋತ್ಸಾಹವೇ ನನಗೆ ಈ ಚಿತ್ರ ನಿರ್ದೇಶಿಸಲು ಕಾರಣವಾಯಿತು. ಈ ಪ್ರಾಜೆಕ್ಟ್ ಮೂಲಕ, ನಾನು ಆಳವಾದ ತಾತ್ವಿಕ ಪರಿಕಲ್ಪನೆಗಳನ್ನು ಸರಳವಾದ ಮತ್ತು ಸುಲಭವಾಗಿ ಪ್ರವೇಶಿಸಬಹುದಾದ ರೀತಿಯಲ್ಲಿ ಸಿನಿಮಾ ತೋರಿಸುವ ಗುರಿ ಹೊಂದಿದ್ದೇನೆ ಎಂದಿದ್ದಾರೆ.
ಬೆಂಗಳೂರು ಮತ್ತು ಮೈಸೂರಿ ಸ್ಥಳಗಳಲ್ಲಿ 80 ದಿನಗಳಲ್ಲಿ ಚಿತ್ರೀಕರಣವನ್ನು ನಿಗದಿಪಡಿಸಿದ್ದಾರೆ. ಚಿತ್ರವು ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ತಯಾರಾಗಲಿದ್ದು, ಸಿನಿಮಾವನ್ನು 2024 ರಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. (ಕಪ್ರಡಾ)