

ಸಿದ್ಧಾಪುರ, ತಾಲೂಕಿನ ಇರಾಸೆಯಲ್ಲಿ ಕೃಷಿ ಕೆಲಸಕ್ಕೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ಸಾಯಂಕಾಲ ನಡೆದಿದೆ.
ಇರಾಸೆಯ ಮಂಜುನಾಥ ನಾಯ್ಕರ ಜಮೀನಿನ ಕೆಲಸಕ್ಕೆ ತೆರಳಿದ್ದ ಹಾರ್ಸಿಕಟ್ಟಾ ಭಂಡಾರಕೇರಿಯ ದೇವಾನಂದ ಧರ್ಮಾ ಮಡಿವಾಳ ಮತ್ತು ಮಾಬ್ಲೇಶ್ವರ ಮಂಜಾ ಮಡಿವಾಳ ಆಕಸ್ಮಿಕವಾಗಿ ಹೊಳೆಯ ಹೊಂಡಕ್ಕೆ ಜಾರಿ ಬಿದ್ದು ಮೃತ ಪಟ್ಟಿರುವ ಬಗ್ಗೆ ಇಂದು ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಾನಂದ ಧರ್ಮಾ ಮಡಿವಾಳ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ಹೊಂಡಕ್ಕೆ ಬಿದ್ದಾಗ ಅವರ ರಕ್ಷಣೆಗೆ ಹೋದ ಮಹಾಬಲೇಶ್ವರ ಮಡಿವಾಳ ಕೂಡಾ ನೀರಿನಲ್ಲಿ ಮುಳಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
