

ಬಿ.ಜೆ.ಪಿ. ಜೊತೆ ಜೆ.ಡಿ.ಎಸ್. ವಿಲೀನವಾಗಿದೆ ಎನ್ನುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ಮಾತು ವ್ಯಾಪಕ ಚರ್ಚೆಗೆ ಈಡಾಗಿದೆ. ಈಗಾಗಲೇ ಕಾಂಗ್ರೆಸ್ ಜೆ.ಡಿ.ಎಸ್. ಪಕ್ಷವನ್ನು ಬಿ.ಜೆ.ಪಿ.ಯ ಬಿ.ಟೀಮ್ ಎಂದು ಆರೋಪಿಸಿದೆ. ಜಾ ದಳ ಕರ್ನಾಟಕದ ಏಕೈಕ ಪ್ರಮುಖ ಪ್ರಾದೇಶಿಕ ಪಕ್ಷ. ಈ ಪಕ್ಷದ ಬೆಂಬಲ ಕೇಳಿ ಸರ್ಕಾರ ರಚಿಸುವ ರಾಷ್ಟ್ರೀಯ ಪಕ್ಷಗಳು ಜಾ ದಳವನ್ನು ಬಿ.ಟೀಮ್ ಎಂದು ಕರೆದು ಹಂಗಿಸುತ್ತವೆ. ಈಗ ಬಿ.ಜೆ.ಪಿ.ಯ ಹಿರಿಯ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಜಾದಳ ಬಿ.ಜೆ.ಪಿ ಯೊಂದಿಗೆ ವಿಲೀನವಾಗಿದೆ ಎಂದಿದ್ದು ಜೆ.ಡಿ.ಎಸ್. ನಾಯಕರನ್ನು ಕೆರಳಿಸಿದೆ.
ಈ ಬಗ್ಗೆ ಶೀಘ್ರದಲ್ಲಿ ಪ್ರತಿಕ್ರೀಯಿಸುತ್ತೇವೆ ಎಂದಿರುವ ಜಾದಳದ ಪ್ರಮುಖರು ವಿಶ್ವೇಶ್ವರ ಹೆಗಡೆಯವರ ವಿರುದ್ಧ ಮುಗಿಬೀಳುವ ಮುನ್ಸೂಚನೆ ನೀಡಿದ್ದಾರೆ. ವಾಸ್ತವವೆಂದರೆ ಕಾಗೇರಿ ವಿಶ್ವೇಶ್ವರ ಹೆಗಡೆಯವರು ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಜಾ.ದಳ ಬಿ.ಜೆ.ಪಿ.ಯೊಂದಿಗೆ ವಿಲೀನವಾಗಿದೆ ಎಂದಿದ್ದಾರೆ. ಸ್ಫೀಕರ್ ಕಾಗೇರಿ ಜೆ.ಡಿ.ಎಸ್. ಬಿ.ಜೆ.ಪಿ.ಯೊಂದಿಗೆ ವಿಲೀನವಾಗಿದೆ ಎಂದಿದ್ದು ಅವರ ಒಳ ಒ ಪ್ಪಂದ ವನ್ನು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಮೂಲಗಳು ಉಸುರಿವೆ. ಈ ಬಗ್ಗೆ ಜೆ.ಡಿ.ಎಸ್. ಅಭ್ಯರ್ಥಿ ಉಪೇಂದ್ರ ಪೈ ಹೇಳಿಕೆಯನ್ನು ಜನಸಾಮಾನ್ಯರು ಕಾದಿದ್ದಾರೆ.
