

ಮೇ ೪ ರಂದು ಶಿರಸಿ,ಸಿದ್ಧಾಪುರಗಳಲ್ಲಿ ನಡೆಯಬೇಕಿದ್ದ ಶಿವರಾಜ್ ಕುಮಾರ್ ರೋಡ್ ಶೋ ಮೆರವಣಿಗೆಯನ್ನು ಮೇ ೫ ರ ಶುಕ್ರವಾರಕ್ಕೆ ಮುಂದೂಡಲಾಗಿದೆ. ಕನ್ನಡ ಚಿತ್ರರಂಗದ ಎವ್ವರ್ ಗ್ರೀನ್ ಹೀರೋ ಡಾ. ಶಿವರಾಜ್ ಕುಮಾರ ಮೇ ೫ ರ ಶುಕ್ರವಾರ ಬೆಳಿಗ್ಗೆ ಸಿದ್ಧಾಪುರ ಮತ್ತು ಅಪರಾನ್ಹ ಶಿರಸಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ತಮ್ಮ ನೆಚ್ಚಿನ ಹೀರೋ ಶಿವರಾಜ್ ಕುಮಾರರನ್ನು ತಮ್ಮ ಊರು, ಮನೆಯಂಗಳದಲ್ಲೇ ಕಣ್ತುಂಬಿಕೊಳ್ಳಲು ಕಾತರರಾಗಿರುವ ಅಭಿಮಾನಿಗಳುಈ ತಿಂಗಳ ಪ್ರಾರಂಭದಿಂದಲೇ ಶಿವರಾಜ್ ಕುಮಾರ್ ರೋಡ್ ಶೋ ನಿರೀಕ್ಷೆಯಲ್ಲಿದ್ದರು.
ಶಿರಸಿ-ಸಿದ್ಧಾಪುರ, ವರುಣಾ ಮತ್ತು ಸೊರಬಾ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಕ್ಷೇತ್ರಗಳ ಶಿವರಾಜ್ ಕುಮಾರ ರೋಡ್ ಶೋ ಪೂರ್ವನಿರ್ಧರಿತವಾಗಿರಲಿಲ್ಲ. ಮೇ ೧ ರಂದೇ ಶಿರಸಿ-ಸಿದ್ಧಾಪುರಕ್ಕೆ ಬರಬೇಕಿದ್ದ ಶಿವರಾಜ್ ಕೊನೆಗೂ ಮೇ ೫ ರ ಶುಕ್ರವಾರ ರೋಡ್ ಶೋ ನಡೆಸಲಿರುವುದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.


