ಯಲ್ಲಾಪುರ,ಬಿ.ಜೆ.ಪಿ. ಮಣಿಸಲು ಹರಸಾಹಸ ಹೆಬ್ಬಾರ್‌ ವಿರುದ್ಧ ಅರ್ಧಡಜನ್‌ ಅಭ್ಯರ್ಥಿಗಳು!

ಬುಡಕಟ್ಟುಗಳು,ಲಿಂಗಾಯತರು,ಹವ್ಯಕ ಬ್ರಾಹ್ಮಣರು,ನಾಮಧಾರಿಗಳು ಜೊತೆಗೆ ಸಕಲ ಜಾತಿ, ಜನವರ್ಗಗಳ ಮತದಾರರಿರುವ ಯಲ್ಲಾಪುರ ಕ್ಷೇತ್ರ ಮೂರು ತಾಲೂಕುಗಳನ್ನೊಳಗೊಂಡ ವಿಶಿಷ್ಟ ಕ್ಷೇತ್ರ.ಐತಿಹಾಸಿಕ ಬನವಾಸಿ ಹೋಬಳಿ ಶಿರಸಿ ಕ್ಷೇತ್ರದಲ್ಲಿದ್ದಾಗ ಬಂಗಾರಪ್ಪ ಕೈ ತೋರಿಸಿದವರು ಗೆಲ್ಲುತ್ತಾರೆ ಎನ್ನುವ ಪ್ರತೀತಿ ಈ ಬನವಾಸಿ ಕೇಂದ್ರಿತ ಶಿರಸಿ ಕ್ಷೇತ್ರದಲ್ಲಿತ್ತು. ಆದರೆ ಉಪಾಯಗಾರ ಕಾಗೇರಿ ವಿಶ್ವೇಶ್ವರ ಹೆಗಡೆ ಬನವಾಸಿ ಹೋಬಳಿಯನ್ನು ಶಿರಸಿ ಕ್ಷೇತ್ರದಿಂದ ಸರಿಸಿ ಯಲ್ಲಾಪುರಕ್ಕೆ ಜೋಡಿಸುವ ಮೂಲಕ ತನಗೆ ಗೆಲುವು ಒಲಿಯುವಂತೆ ಮಾಡಿಕೊಂಡ ಮೇಲೆ ಪಕ್ಕಾ ಬಯಲುಸೀಮೆಯ ಮುಂಡಗೋಡಿನೊಂದಿಗೆ ಬನವಾಸಿ ಸೇರಿ ಶಿರಸಿ ಮತ್ತು ಯಲ್ಲಾಪುರದ ರಾಜಕೀಯ ಚಿತ್ರಣವೇ ಬದಲಾದದ್ದು ರಾಜಕೀಯ ತಂತ್ರ ಅಥವಾ ಕುತಂತ್ರದ ಫಲ ಎಂದರೆ ತಪ್ಪಿಲ್ಲ.

ಮುಂಡಗೋಡು ಹಳಿಯಾಳ, ಯಲ್ಲಾಪುರ ಸೇರಿ ಮುಂಡಗೋಡ ಕ್ಷೇತ್ರವಾಗಿದ್ದ ಈಗಿನ ಯಲ್ಲಾಪುರ ದೇಶಪಾಂಡೆಯವರ ಹಿಡಿತವಿದ್ದ ಕ್ಷೇತ್ರವಾಗಿತ್ತು. ಪಕ್ಷ, ರಾಜಕೀಯ,ಜಾತಿ ಮೇಲಾಟಗಳಲ್ಲಿ ದೇಶಪಾಂಡೆಯವರನ್ನು ಮಣಿಸಲು ಹೆಣಗುತ್ತಿರುವ ಶಿವರಾಮ ಹೆಬ್ಬಾರ್‌ ಈ ಕ್ಷೇತ್ರದ ಪ್ರಮುಖ ನಾಯಕನಾಗಿರುವುದು ಈಗಿನ ವಿಶೇಶ.

ಇದೇ ಯಲ್ಲಾಪುರ ಕ್ಷೇತ್ರದಿಂದ ಎರಡು ಅವಧಿಗೆ ನಿರಂತರ ಮೂರು ಬಾರಿ ಆಯ್ಕೆಯಾಗಿರುವ ಶಿವರಾಮ ಹೆಬ್ಬಾರ್‌ ಮೊದಲೆರಡು ಬಾರಿ ಕಾಂಗ್ರೆಸ್‌ ನಿಂದ ಆಯ್ಕೆಯಾಗಿದ್ದರೆ ಉಪಚುನಾವಣೆಯಲ್ಲಿ ಬಿ.ಜೆ.ಪಿ.ಯಿಂದ ಗೆದ್ದು ಆ ಕ್ಷೇತ್ರದ ಸಾಂಪ್ರದಾಯಿಕ ಬಿ.ಜೆ.ಪಿ. ಹುರಿಯಾಳಾಗುತಿದ್ದ  ವಿ.ಎಸ್.ಪಾಟೀಲರ ವಿರುದ್ಧ ಕಾಂಗ್ರೆಸ್‌ ಜೊತೆ ಹೋರಾಟಮಾಡಬೇಕಾಗಿರುವುದು ಈ ಚುನಾವಣೆಯ ವಿಶೇಶ.

ಕಾಂಗ್ರೆಸ್‌ ನಿಂದ ಆಪರೇಶನ್‌ ಕಮಲಕ್ಕೊಳಗಾಗಿ ಬಿ.ಜೆ.ಪಿ. ಸೇರಿದ ಶಿವರಾಮ ಹೆಬ್ಬಾರ್‌ ಈ ಕ್ಷೇತ್ರದಲ್ಲಿ ೫ ವರ್ಷದ ಅವಧಿಯಲ್ಲಿ ಬಿ.ಜೆ.ಪಿ. ಯಿಂದ ಎರಡನೇ ಚುನಾವಣೆ ಎದುರಿಸುತಿದ್ದಾರೆ. ಮೊದಲ ಚುನಾವಣೆಯಲ್ಲಿ ಅಂದಿನ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ರನ್ನು ೩೦ ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ಪರಾಭವಗೊಳಿಸಿದ್ದ ಶಿವರಾಮ ಹೆಬ್ಬಾರ್‌ ರಿಗೆ ಆಗ ಬಿ.ಜೆ.ಪಿ. ಸರ್ಕಾರದ ಅಭಯವಿತ್ತು. ಬಿ.ಜೆ.ಪಿ. ಯಿಂದ ಉಪಚುನಾವಣೆಯಲ್ಲಿ ಗೆದ್ದು ಸಾವಿರಾರು ಕೋಟಿ ರೂಪಾಯಿಗಳ ಕೆಲಸ, ವೈಯಕ್ತಿಕ ಸಂಪತ್ತು ಪೇರಿಸಿಕೊಂಡಿರುವ ಹೆಬ್ಬಾರ್‌ ಹಣ ಬಲದ ಮುಂದೆ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್.‌ ಪಾಟೀಲ್‌ ಅಥವಾ ಜಾತ್ಯಾತೀತ ಜನತಾದಳದ ನಾಗೇಶ್‌ ನಾಯ್ಕ ಲೆಕ್ಕಕ್ಕಿಲ್ಲ.

 ಆದರೆ ಜಾತಿ ಬಲ, ವಿದ್ಯೆ, ವಿನಯಗಳಿಂದ ಪರಸ್ಫರ ಪೂರಕ ಅಭ್ಯರ್ಥಿಗಳಂತಿರುವ ಈ ಇಬ್ಬರು ಈ ಕ್ಷೇತ್ರದ ಪ್ರಮುಖ ಲಿಂಗಾಯತ ಮತ್ತು ನಾಮಧಾರಿ ಸಮಾಜಗಳ ಪ್ರತಿನಿಧಿಗಳಾದರೆ ಹೆಬ್ಬಾರ್‌ ಈ ಕ್ಷೇತ್ರದ ಇನ್ನೊಂದು ಪ್ರಮುಖ ಸಮೂದಾಯ ಹವ್ಯಕ ಬ್ರಾಹ್ಮಣರನ್ನು ಪ್ರತಿನಿಧಿಸುತ್ತಾರೆ.

ವಿದ್ಯಾವಂತರಲ್ಲದ ಹೆಬ್ಬಾರ್ ಕೆಳಮಟ್ಟದಿಂದ ಒಂದೊಂದೇ ಹಂತ ಏರುತ್ತಾ ಜಿಲ್ಲೆಯ ಪ್ರಮುಖ ರಾಜಕಾರಣಿಯಾಗಿ ಅವತರಿಸಿರುವ ಅವರ ರಾಜಕೀಯ ಬದುಕಿನಲ್ಲಿ ಸಾಧನೆಯ ಮೈಲುಗಲ್ಲುಗಳ ಜೊತೆಗೆ ಕರಾಳ ಚರಿತ್ರೆಯೂ ಇದೆ.

ಮೂಲತ: ಅರಣ್ಯ ಗುತ್ತಿಗೆದಾರ,ನಂತರ ರಾಜಕೀಯ ಧುರೀಣ ಕೆಲವು ಸಮಯದ ರಾಜಕೀಯದ ನಡುವೆ ಅದಿರು ಉದ್ಯಮಿ, ನಂತರ ಶಾಸಕ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಅನುಭವ ಪಡೆದಿರುವ ಹೆಬ್ಬಾರ್‌ ರಾಜಕಾರಣದ ಹಿಂದಿನ ಶಕ್ತಿ ಅವರ ಜಾತಿ ಮತ್ತು ಹಣಬಲ. ಈ ಹಿಂದಿನ ಅವಧಿಯ ಸರ್ಕಾರ ಹಾಗೂ ಈ ಅವಧಿಗಳಲ್ಲಿ ಸರ್ಕಾರಿ ಅನುದಾನ ಬಳಕೆ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆಂದುಕೊಳ್ಳುವ ಹೆಬ್ಬಾರ್‌ ಈ ಕ್ಷೇತ್ರಕ್ಕೆ ಅವಶ್ಯವಾಗಿದ್ದ ನೀರಾವರಿ, ರಸ್ತೆ ವ್ಯವಸ್ಥೆಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಹಣದ ಥೈಲಿ ತುಂಬಿಕೊಂಡಿರುವ ಹೆಬ್ಬಾರ್‌ ವಿರುದ್ಧ ಸ್ಫರ್ಧೆ ಮಾಡುವವರು ಒಂದಲ್ಲ ಎರಡು ಸಾರಿ ಯೋಚಿಸಿ ಹೆಜ್ಜೆ ಇಡುವ ಸಂದರ್ಭ ಆದರೆ ಇವರ ಎದುರಾಳಿಗಳಾದ ಡಾ.ನಾಗೇಶ್‌  ನಾಯ್ಕಹಾಗೂ ವಿ.ಎಸ್.‌ ಪಾಟೀಲ್‌ ಹೆಬ್ಬಾರ್‌ ರ ಹಣಬಲದೆದುರು ಜನಬಲದಿಂದ ಸೆಡ್ಡುಹೊಡೆದಿದ್ದಾರೆ.

ಯಲ್ಲಾಪುರದಲ್ಲಿ ಅರಣ್ಯ ಅತಿಕ್ರಮಣ ಸಮಸ್ಯೆ ಜ್ವಲಂತ. ಬುಡಕಟ್ಟುಗಳಾದ ಸಿದ್ಧಿಗಳು,ಗೌಳಿಗಳು ಒಕ್ಕಲಿಗರು ಇತರ ಹಿಂದುಳಿದವರು, ಅಲ್ಪಸಂಖ್ಯಾತರೆಲ್ಲಾ ಸೇರಿ95 ಸಾವಿರಕ್ಕಿಂತ ಹೆಚ್ಚು ಅಹಿಂದ ಮತದಾರರಿದ್ದಾರೆ.ಈ ಅಹಿಂದ ಮತದಾರರನ್ನು ಯಾವಾಗಲೂ ಯಾರೂ ಕೇಳುವವರಿಲ್ಲ. ಯಾಕೆಂದರೆ ರಾಮಕೃಷ್ಣ ಹೆಗಡೆಯವರೊಂದಿಗೆ ದೇಶಪಾಂಡೆ,ಹೆಬ್ಬಾರ್‌, ವಿ.ಎಸ್.ಪಾಟೀಲ್‌ ಈ ವರೆಗೆ ಈ ಕ್ಷೇತ್ರ ಪ್ರತಿನಿಧಿಸಿದವರ್ಯಾರೂ ಕೆಳವರ್ಗದವರಲ್ಲ. ನಾಮಕಾವಾಸ್ಥೆ ವಿಧಾನ ಪರಿಷತ್‌ ಸದಸ್ಯರಾಗಿರುವ ಶಾಂತರಾಮ ಸಿದ್ಧಿ ಬಿಟ್ಟರೆ ಈ ಕ್ಷೇತ್ರದಲ್ಲಿ ಸರ್ಕಾರದ ನೇರ, ಪರೋಕ್ಷ ಫಲಾನುಭವಿಗಳೆಲ್ಲಾ ಮೇಲ್ವರ್ಗದವರೆ.

 ಇಂಥ ಕೆಳವರ್ಗದ ತಬ್ಬಲಿಗಳ ಕ್ಷೇತ್ರದಲ್ಲಿ ಜಾತಿ, ಧರ್ಮ, ಹಣ,ಬಾಹುಬಲಗಳನ್ನೆಲ್ಲಾ ಬಳಸಿ ಚುನಾವಣೆ ಗೆಲ್ಲುವ ಮೇಲ್ವರ್ಗದ ಜನ ಚುನಾವಣೆ ನಂತರ ಉಳಿದವರನ್ನು ಹಿಂದೂ ಮಾಡುವ ಜಾಣತನ ಈ ಕ್ಷೇತ್ರದಲ್ಲೂ ಮಾಮೂಲೇ. ಹಾಗಾಗಿ ಹೆಬ್ಬಾರ್‌ ಎದುರು ವಿ.ಎಸ್.‌ ಪಾಟೀಲ್‌ ಮತ್ತು ಡಾ.ನಾಗೇಶ್‌ ನಾಯ್ಕರಿಗೆ ಅಹಿಂದ ಮತಗಳನ್ನು ಬಾಚುವ ಅವಕಾಶ ಹೆಚ್ಚಿದೆ. ಈ ವಿದ್ಯಮಾನಗಳ ನಡುವೆ ಹೆಬ್ಬಾರರ ಹಣಬಲದ ಎದುರುಉಳಿದವರು ಸಪ್ಪೆಎನಿಸಿದರೂ ಕಾಂಗ್ರೆಸ್‌ ಗಾಳಿ,ವಿ.ಎಸ್‌, ಪಾಟೀಲ್‌ ಮತ್ತು ಡಾ. ನಾಗೇಶ್‌ ನಾಯ್ಕರಿಗೆ ಇರುವ ಕ್ಲೀನ್‌ ಇಮೇಜ್‌ ಹೆಬ್ಬಾರರಿಗೆ ಗೆಲುವು ಸುಲಭದ ತುತ್ತಾಗಲು ಬಿಡಲಾರವು.

ಬ್ರಷ್ಟತನ,ಕೊಲೆ ಆರೋಪ,ಅಕ್ರಮಗಳಿಕೆ ಹೀಗೆ ರಾಜಕೀಯದ ಯಾವ ಕೋನದಿಂದಲೂ ಹೆಬ್ಬಾರ್‌ ಉತ್ತಮ ಅಭ್ಯರ್ಥಿಯಲ್ಲ ಆದರೆ ಅವರಿಗಿರುವ ಜಾತಿ ಬಲ ಮತ್ತು ಹಣ ಎಲ್ಲವನ್ನೂ ಮುಚ್ಚಿಹಾಕಿದೆ. ಹೆಬ್ಬಾರ್‌ ವಿರುದ್ಧ ಮಾಜಿ ಶಾಸಕ ವಿ.ಎಸ್.‌ ಪಾಟೀಲ್‌,ಜೆ.ಡಿ.ಎಸ್.ನ ನಾಗೇಶ್‌ ನಾಯ್ಕ ತಮ್ಮ ನಿಷ್ಕಳಂಕಿತ ವ್ಯಕ್ತಿತ್ವ,ಪಕ್ಷಗಳ ಬಲ ನೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‌ ಮತ್ತು ಜೆ.ಡಿ.ಎಸ ಅಭ್ಯರ್ಥಿಗಳಿಗೆ ಜಾತಿ ಬಲದ ಮತಗಳ ನಿರೀಕ್ಷೆಗಳಾದರೂ ಇವೆ ಆದರೆ ಉಳಿದ ಪಕ್ಷಗಳಿಂದ ಅಭ್ಯರ್ಥಿಗಳಾಗಿರುವ ಮೂರ್ನಾಲ್ಕು ಜನರಿಗೆ ಇಂಥ ಯಾವ ಭರವಸೆಗಳೂ ಇಲ್ಲ. ಪ್ರಮುಖ ಪಕ್ಷಗಳಿಗೆ ಅವುಗಳ,ಸಿಂಬಾಲ್‌, ಪಾರ್ಟಿ ಫಂಡಗಳ ಕನ್ನಡಿಯೊಳಗಿನ ಗಂಟಿನ ನಿರೀಕ್ಷೆಗಳಾದರೂ ಇವೆ. ಉಳಿದ ಅಭ್ಯ ರ್ಥಿಗಳು ಚುನಾವಣಾ ಚಟ ಅಥವಾ ಹೆಬ್ಬಾರ್‌ ರಿಂದ ದಕ್ಕಬಹುದಾದ ಹಣದ ಆಸೆಗೆ ನಾಮಿನೇಷನ್‌ ಮಾಡಿರುವಂತಿದೆ.

ಯಲ್ಲಾಪುರ ಕ್ಷೇತ್ರಕ್ಕೆ ಅನುದಾನದ ರುಚಿ ತೋರಿಸಿ ಹಣ ಮಾಡಿಕೊಂಡಿರುವ ಹೆಬ್ಬಾರ್‌ ಮುಖಂಡರು,ಮತದಾರರು ಕೆಲವು ನಾಮಕಾವಾಸ್ಥೆ ಅಭ್ಯರ್ಥಿಗಳಿಗೆ ಕಾಂಚಾಣದ ರುಚಿ ತೋರಿಸಿ ಚುನಾವಣೆ ಗೆದ್ದೇ ಬಿಟ್ಟರು ಎನ್ನುವ ವೈದಿಕ ಮಾಧ್ಯಮ ಇದರಿಂದ ಹೆಬ್ಬಾರ್‌ ರಿಗೆ ದಕ್ಕಬಹುದಾದ ಮತಗಳ ಪ್ರಮಾಣದ ಹೆಚ್ಚಳಕ್ಕೆ ಮಾಡಿರುವ ತಂತ್ರವಾಗಿ ಗೋಚರಿಸುತ್ತದೆ.

ಇಂಥ ತಂತ್ರ-ಮಂತ್ರಗಳಿಂದ ಗೆಲ್ಲಬಹುದು ಎಂದುಕೊಂಡಿರುವ ಹೆಬ್ಬಾರ್‌ ರಿಗೆ ಕಾಂಗ್ರೆಸ್‌ ಗಾಳಿ ಅವರ ಅಭ್ಯರ್ಥಿ ಪರ ಕೆಲಸ ಮಾಡದು ಎನ್ನುವುದು ನಂಬಿಕೆ. ಈ ನಂಬಿಕೆ ಹುಸಿಯಾದರೆ ಹೆಬ್ಬಾರ್‌ ವಿರೋಧಿಗಳಾದ ದೇಶಪಾಂಡೆ ಮತ್ತು ಸಾಯಿಗಾಂವ್ಕರ್‌ ನೇತೃತ್ವದ ಭೀಮಣ್ಣ ರ ಡಿ.ಸಿ.ಸಿ. ತಂಡಕ್ಕೆ ಸಮಾಧಾನ ಇದಾಗದಿದ್ದರೆ ಹೆಬ್ಬಾರ್‌ ಮತ್ತೆ ಅಲ್ಪಾಂತರದಿಂದ ಗೆಲ್ಲಬಹುದು. ಆದರೆ ಬಿ.ಜೆ.ಪಿ.ಗಿರುವ ವಿರೋಧ ಹೆಬ್ಬಾರ್‌ ರ ನಿರಂತರ ಗೆಲುವಿಗೆ ಅಡ್ಡಿ ಮಾಡಬಹುದು ಎನ್ನುವ ಸಾಧ್ಯತೆ ಹೆಬ್ಬಾರ್‌ ರನ್ನು ಹೆದರಿಸಿದೆಯಂತೆ! ಒಟ್ಟಾರೆ ಹೆಬ್ಬಾರ್‌ ಸುತ್ತ ಸುತ್ತುತ್ತಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಹೆಬ್ಬಾರ್‌ ತಪ್ಪಿದರೆ ಪಾಟೀಲ್‌ ಎನ್ನುವವರೆಗೆ ಬಂದು ನಿಂತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *