ಕರ್ನಾಟಕ ಚುನಾವಣೋತ್ತರ ಸಮೀಕ್ಷೆ: ಕಾಂಗ್ರೆಸ್‌ಗೆ ಹೆಚ್ಚು ಸೀಟ್, ಅತಂತ್ರ ವಿಧಾನಸಭೆ ಸುಳಿವು
ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈಮಧ್ಯೆ ಬಹುತೇಕ ಮಂದಿ ಕಾಯುತ್ತಿದ್ದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಹಿಂದೆಯೇ ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಹೇಳಿದಂತೆ ಅತಂತ್ರ ವಿಧಾನಸಭೆಯ ಸುಳಿವನ್ನು ನೀಡಿದೆ.
ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈಮಧ್ಯೆ ಬಹುತೇಕ ಮಂದಿ ಕಾಯುತ್ತಿದ್ದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಹಿಂದೆಯೇ ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಹೇಳಿದಂತೆ ಅತಂತ್ರ ವಿಧಾನಸಭೆಯ ಸುಳಿವನ್ನು ನೀಡಿದೆ.
ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಸರ್ವ ಪ್ರಯತ್ನ ನಡೆಸಿದ್ದು, ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಕೂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿತ್ತು. ಇದೀಗ ಸೀವೋಟರ್ ಚುನಾವಣೋತ್ತರ ಸಮೀಕ್ಷೆಯು ಲಭ್ಯವಾಗಿದ್ದು, ಕಾಂಗ್ರೆಸ್‌ಗೆ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ಯಾವ ಪಕ್ಷಕ್ಕೂ ಬಹುಮತ ಬಾರದಿರುವುದು ಕೊಂಚ ನಿರಾಸೆಯಾಗಿ ಪರಿಣಮಿಸಿದೆ.
ಸಿ ವೋಟರ್ (C-Voter)
ಬಿಜೆಪಿ- 83-95
ಕಾಂಗ್ರೆಸ್- 100-112
ಜೆಡಿಎಸ್- 21-29
ಇತರೆ- 02-06
ರಿಪಬ್ಲಿಕ್ (Republic)
ಬಿಜೆಪಿ- 85-100
ಕಾಂಗ್ರೆಸ್- 94-108
ಜೆಡಿಎಸ್- 24-32
ಇತರೆ- 02-06
ಜೀ ನ್ಯೂಸ್ (Zee News)
ಬಿಜೆಪಿ – 79-94
ಕಾಂಗ್ರೆಸ್ – 103-118
ಜೆಡಿಎಸ್- 25-33
ಇತರೆ 02-05
ನ್ಯೂಸ್ ನೇಷನ್ಸ್-ಸಿಜಿಎಸ್
ಬಿಜೆಪಿ- 114
ಕಾಂಗ್ರೆಸ್- 86
ಜೆಡಿಎಸ್- 21
ಇತರೆ- 03
ಪೋಲ್ ಸ್ಟಾರ್ಟ್
ಬಿಜೆಪಿ- 88-98
ಕಾಂಗ್ರೆಸ್- 99-109
ಜೆಡಿಎಸ್- 21-26
ಇತರೆ- 02-04
ನವಭಾರತ್ (Navbharath)
ಬಿಜೆಪಿ- 78-92
ಕಾಂಗ್ರೆಸ್- 106-120
ಜೆಡಿಎಸ್- 20-26
ಇತರೆ- 02-04
ಟೈಮ್ಸ್ ನೌ (Times Now)
ಬಿಜೆಪಿ- 85
ಕಾಂಗ್ರೆಸ್- 113
ಜೆಡಿಎಸ್- 23
ಇತರೆ- 03
ಸುವರ್ಣ ನ್ಯೂಸ್
ಬಿಜೆಪಿ- 94-117
ಕಾಂಗ್ರೆಸ್- 91-106
ಜೆಡಿಎಸ್- 14-24
ಇತರೆ- 2-6