

ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರ ದ ನೂತನ ಶಾಸಕ ರಾಗಿ ಆಯ್ಕೆ ಯಾದ ಭೀಮಣ್ಣ ಟಿ ನಾಯ್ಕ ರವರಿಗೆ 249 ಗೋಳಗೋಡ (ಅಕ್ಕುಂಜಿ) ಬೂತ್ ವತಿಯಿಂದ ಶ್ರೀ ಈಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ವಿಧಾನ ಸಭಾ ಚುನಾವಣೆಯಲ್ಲಿ ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರ ದ ಕಾಂಗ್ರೆಸ್ ಅಭ್ಯರ್ಥಿ ವಿಜಯಶಾಲಿಯಾದರೆ ಶ್ರೀ ಈಶ್ವರ ದೇವಾಲಯ ಗೋಳಗೋಡ ಅಕ್ಕುಂಜಿ ಯಲ್ಲಿ ಅಭಿಮಾನಿಗಳು,ಭಕ್ತಾಧಿಗಳು ಹರಕೆ ಯನ್ನು ಹೊತ್ತಿದ್ದು,
ಶ್ರೀ ಜಿ. ಟಿ ನಾಯ್ಕ ಗೋಳಗೋಡ ( ಅಧ್ಯಕ್ಷರು ಗ್ರಾಮ ಪಂಚಾಯತ್ ಕವಂಚೂರ್) 101
ಕಾಯಿ ಒಡೆದು ಹರಕೆಯನ್ನು ತೀರಿಸಿದ್ದು, ಜೊತೆಗೆ
ಶ್ರೀ ಶ್ರೀಪತಿ ಬಿ ನಾಯ್ಕಗೋಳಗೋಡ ಈಶ್ವರ ದೇವರಿಗೆ ಉರುಳು ಸೇವೆಯನ್ನು ಮಾಡಿ ಹರಕೆ ಯನ್ನು ತೀರಿಸಿದರು.
ಅಣ್ಣಪ್ಪ ಮೈಲಾ ನಾಯ್ಕ ಮತ್ತು ನಾಗೇಂದ್ರ ವಿ ಗೊಂಡ ಶ್ರೀ ನಾಗ ಚೌಡಿಗೆ ಹರಕೆ ಹೊತ್ತಿದ್ದು ಈ ಸಂದರ್ಭದಲ್ಲಿ ಅವರೂ ಕೂಡ ಹರಕೆಯನ್ನು ತೀರಿಸಿದ್ದು ಶುಭಾಶಯ ತಿಳಿಸಿದರು. ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿ ಮಾಡಲು ಶ್ರೀ ಈಶ್ವರ ದೇವರು ಶಕ್ತಿ ಯನ್ನು ನೀಡಲಿ ಎಂದು ಪ್ರಾರ್ಥಿಸಿದರು.ಹರಕೆ ಯನ್ನು ಹೊತ್ತ ಎಲ್ಲಾ ಅಭಿಮಾನಿಗಳು ಹರಕೆಯನ್ನು ತೀರಿಸುವುದರೊಂದಿಗೆ ಸಿಹಿ ಹಂಚುವುದರ ಮೂಲಕ ನೂತನ ಶಾಸಕರಿಗೆ ಶುಭಾಶಯಗಳನ್ನು ಕೋರಿದರು💐💐💐.
ಈ ಸಂದರ್ಭದಲ್ಲಿ ಗೋಳಗೋಡ ಗ್ರಾಮ ಕಮೀಟಿ ಅಧ್ಯಕ್ಷ ರಾದ ಈಶ್ವರ ಕೆ ನಾಯ್ಕ ಉಪಾಧ್ಯಕ್ಷ ರಾದ ಕಾಳ ಜಟ್ಯಾ ಮಡಿವಾಳ,ಕಾರ್ಯದರ್ಶಿ ಯಾದ ಕುಮಾರ ಡಿ ನಾಯ್ಕ,ಬಸವಣ್ಣಿ ನಾಯ್ಕ ಕಲ್ಯಾಣಪುರ, ಗಂಗಾಧರ ನಾಯ್ಕ ಗೋಳಗೋಡ ಅಣ್ಣಪ್ಪ ನಾಯ್ಕ ಅಕ್ಕುಂಜಿ,ಬೊಮ್ಮಗೊಂಡ ಅಕ್ಕುಂಜಿ ಹಾಗೂ ಗೋಳಗೋಡ ಗ್ರಾಮಸ್ಥರು ಉಪಸ್ಥಿತರಿದ್ದರು


