

ಸಿದ್ಧಾಪುರ,ಮೇ೨೩- ತಾಲೂಕಿನ ಅವರಗುಪ್ಪಾದ ಪುರಾತನ ಈಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಮಂಗಳವಾರ ನಡೆಯಿತು.
ಕಳೆದ ಮೂರು ದಿನಗಳಿಂದ ನಡೆಯುತಿದ್ದ ಈಶ್ವರ ಮತ್ತು ಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಕೊನೆಯ ದಿನ ಧರ್ಮ ಸಭೆ ಮತ್ತು ಸಾಮೂಹಿಕ ಅನ್ನಸಂತರ್ಪಣೆಗಳು ನಡೆದವು.
ಈ ಧರ್ಮಸಭೆಯ ಸಾನಿಧ್ಯವಹಿಸಿದ್ದ ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಈಶ್ವರ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಆಶೀರ್ವಚನ ನೀಡಿದರು.
ಸಮಾಜ, ಜಗತ್ತು ವೈಭವದೆಡೆಗೆ ಸಾಗುತಿದ್ದಂತೆ ಮಾನವೀಯತೆ ಮರೆಯಾಗುತ್ತಿದೆ. ಸುಖದ ವ್ಯಾಖ್ಯಾನವೂ ಬದಲಾಗುತ್ತಿದೆ. ಭೌತಿಕ ವಸ್ತುಗಳ ಪ್ರೀತಿ, ಆಸೆಯಿಂದ ಸುಖ ದೊರೆಯುವುದಿಲ್ಲ ಸುಖ ಲೌಕಿಕವಾಗಿದ್ದು ಇಹ,ಪರದಲ್ಲಿ ಶಿವನನ್ನು ಕಂಡರೆ ಸುಖದ ಅನುಭವವಾಗುತ್ತದೆ ಎಂದರು.

